ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಕ್ಸ್‌ಟ್ರಾರ್ಡಿನಾರಿ’ ಸಾಧನಾ ಚಿತ್ರಣ

Last Updated 25 ಮೇ 2015, 19:30 IST
ಅಕ್ಷರ ಗಾತ್ರ

ಸಮಾಜದಲ್ಲಿ ಮಹಿಳೆಗೆ ಉತ್ತಮ ಅವಕಾಶ ಸಿಕ್ಕರೆ ಏನನ್ನಾದರೂ ಸಾಧಿಸಬಲ್ಲಳು. ಕೆಳಮಟ್ಟದ ಮಹಿಳೆಯರೂ ಉನ್ನತ ಸ್ಥಾನ ಗಳಿಸಬಲ್ಲರು ಎಂಬ ವಿಷಯವನ್ನು ಪ್ರಧಾನವಾಗಿಟ್ಟುಕೊಂಡು ತಯಾರಾಗಿರುವ ಹಿಂದಿ ಚಿತ್ರ ‘ಎಕ್ಸಟ್ರಾರ್ಡಿನಾರಿ’ ಈ ಶುಕ್ರವಾರ (ಮೇ 29) ಬಿಡುಗಡೆಯಾಗುತ್ತಿದೆ. ಮಹಿಳೆಯ ಸಾಧನೆ ಕುರಿತ ಚಿತ್ರವಾಗಿರುವುದರಿಂದ ಶೀರ್ಷಿಕೆಯಲ್ಲೂ ‘ನಾರಿ’ ಎಂಬ ಉಚ್ಚಾರ ಬರುತ್ತದೆ.

ಎರಡು ದಶಕಗಳಿಂದ ಬಾಲಿವುಡ್‌ನಲ್ಲಿ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿರುವ ಸುನಂದಾ ಶ್ಯಾಮಲ ಮಿತ್ರ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯೂ ಅವರದೇ. ಇದು ಅವರ ನಿರ್ದೇಶನದ ನಾಲ್ಕನೇ ಚಿತ್ರ. ಸಮಾಜದಲ್ಲಿ ಹಲವಾರು ರೀತಿ ನಿಂದನೆಗಳೊಳಗಾದ ಮಹಿಳೆಯರ ಹೋರಾಟದ ಬದುಕನ್ನು ಚಿತ್ರದಲ್ಲಿ ಚಿತ್ರಿಸಿದ್ದಾಗಿ ಅವರು ಹೇಳುತ್ತಾರೆ.

ಅತ್ಯಾಚಾರಕ್ಕೊಳಗಾದ, ವೇಶ್ಯಾವಾಟಿಕೆಗೆ ದೂಡಲಾದ, ಗಂಡನಿಂದ ಶೋಷಣೆಗೊಳಗಾದ, ಸಮಾಜದಿಂದ ನಿಂದನೆಗೊಳಗಾದ ಹತ್ತು ಮಹಿಳೆಯರನ್ನು ಸೇರಿಸಿಕೊಂಡು, ಅವರನ್ನು ಉನ್ನತ ಸ್ಥಾನಕ್ಕೇರಿಸಲು ಪ್ರಯತ್ನಿಸುವ ದಿಟ್ಟ ಮಹಿಳೆಯ ಪಾತ್ರದಲ್ಲಿ ಹೆಸರಾಂತ ಬಂಗಾಳಿ ನಟಿ ರಿತುಪರ್ಣ ಸೇನ್ ಗುಪ್ತ ನಟಿಸಿದ್ದಾರೆ.

ಕನ್ನಡ ಹಾಗೂ ಮಲಯಾಳಂನಲ್ಲೂ ಒಂದೊಂದು ಚಿತ್ರದಲ್ಲಿ ನಟಿಸಿರುವ ರಿತುಪರ್ಣ ಅವರು ತನ್ನ ಪಾತ್ರದ ಬಗ್ಗೆ ಮಾತನಾಡುತ್ತ, ‘ಮಾಡೆಲಿಂಗ್ ಕ್ಷೇತ್ರದಲ್ಲಿ ಮಹಿಳೆಯರನ್ನು ತೀರಾ ಕೆಟ್ಟದಾಗಿ ಬಳಸಿಕೊಳ್ಳಲಾಗುತ್ತಿದೆ. ಅಲ್ಲಿ ಪರದೆಯ ಹಿಂದೆ ನಡೆಯುತ್ತಿರುವ ಅನ್ಯಾಯ, ಶೋಷಣೆಗಳನ್ನು ಈ ಚಿತ್ರದಲ್ಲಿ ಅನಾವರಣಗೊಳಿಸಲಾಗಿದೆ. ಇಂಥ ಪಾತ್ರವನ್ನು ಮಾಡಿರುವುದಕ್ಕೆ ನನಗೆ ತುಂಬಾ ಹೆಮ್ಮೆಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT