ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಟಿಎಂ ಹಲ್ಲೆ ಆರೋಪಿ ಸಿಗಲಿಲ್ಲವೆಂಬ ಕೊರಗಿದೆ’

Last Updated 27 ಫೆಬ್ರುವರಿ 2015, 20:05 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾರ್ಪೊರೇಷನ್ ಬ್ಯಾಂಕ್‌ ಎಟಿಎಂ ಘಟಕದಲ್ಲಿ ಜ್ಯೋತಿ ಉದಯ್‌ ಮೇಲೆ ಹಲ್ಲೆ ನಡೆಸಿದ ಆರೋ­ಪಿ­ಯನ್ನು ಬಂಧಿಸಲು ಸಾಧ್ಯ­ವಾಗ­ಲಿಲ್ಲ ಎಂಬ ಕೊರಗು ನನ್ನಲ್ಲಿದೆ’ ಎಂದು ನಿವೃತ್ತಿ ಅಂಚಿನಲ್ಲಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್‌ ರೋಕುಮ ಪಚಾವೊ ಬೇಸರ ವ್ಯಕ್ತಪಡಿಸಿದರು.

ಕೋರಮಂಗಲದ ಕವಾಯತು ಮೈದಾ­­ನ­ದಲ್ಲಿ ಶುಕ್ರವಾರ ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ರಾಜ್ಯ ಪೊಲೀಸ್ ಇಲಾಖೆಯ ಸಾರಥಿ ಆಗಿ 2 ವರ್ಷ 9 ತಿಂಗಳು ಕೆಲಸ ಮಾಡಿದ್ದೇನೆ. ಕಾರ್ಯ ವೈಖರಿ ತೃಪ್ತಿ ತಂದಿದೆ. ಶಾಲಾ ಮಕ್ಕಳ ಮೇಲಿನ ಅತ್ಯಾಚಾರ, ಮಲ್ಲೇಶ್ವರ ಸ್ಫೋಟ ಸೇರಿ­ದಂತೆ ವೃತ್ತಿ ಜೀವನದಲ್ಲಿ ಸವಾಲೆನಿಸಿದ್ದ ಬಹುತೇಕ ಪ್ರಕರಣಗಳನ್ನು ಭೇದಿಸಿ­ದ್ದೇವೆ. ಆದರೆ, ಎಟಿಎಂ ಘಟಕದಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದವನನ್ನು ಪತ್ತೆ ಮಾಡಲು ಆಗಲಿಲ್ಲ. ಹೊಸ ಡಿಜಿಪಿ ಅವರ ಮಾರ್ಗದರ್ಶನದಲ್ಲಿ ಪೊಲೀ­ಸರು ಆ ಆರೋಪಿಯನ್ನು ಬಂಧಿಸು­ತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ವೇಳೆ ಯಾವುದೇ ಅಹಿತ­ಕರ ಘಟನೆ ನಡೆಯದಂತೆ ನೋಡಿ­ಕೊಳ್ಳ­ಲಾಗಿದೆ. ಆದರೆ, ಮೇಲಿಂದ ಮೇಲೆ ಜರುಗಿದ ಅತ್ಯಾಚಾರ ಪ್ರಕರಣಗಳಂಥ ಹೀನ ಕೃತ್ಯಗಳನ್ನು ತಡೆಯುವುದು ಸವಾಲಾಯಿತು’ ಎಂದರು.

‘ಮುಖ್ಯಮಂತ್ರಿ, ಗೃಹಸಚಿವರು ಹಾಗೂ ಮುಖ್ಯ ಕಾರ್ಯದರ್ಶಿಗಳು ಕರ್ತವ್ಯಕ್ಕೆ ಬೆಂಬಲವಾಗಿದ್ದರು. ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ­ಯಿಂ­ದಲೂ ಉತ್ತಮ ಸಹಕಾರ ದೊರೆತಿದೆ. ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ಇಲಾಖೆಯನ್ನು ಹೊಸ ಡಿಜಿಪಿಗಳು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ’ ಎಂದ ಪಚಾವೊ, ‘ನಿವೃತ್ತಿ ಬಳಿಕ ಬೆಂಗಳೂರಿ­ನಲ್ಲೆ ಉಳಿಯುವ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT