ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐಎಸ್ಐಎಸ್ ಮಾದರಿ ಕಾರ್ಯಾಚರಣೆ’

Last Updated 25 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಐಎಸ್ಐಎಸ್ ಇರಾಕ್ ಮತ್ತು ಸಿರಿ­ಯಾ­ದಲ್ಲಿ ನಡೆಸುತ್ತಿರುವ ಭಯೋ­ತ್ಪಾ­ದಕ ಚಟುವಟಿಕೆಗಳ ಮಾದರಿಯಲ್ಲೇ ಭಾರತದಲ್ಲೂ ಭಯೋತ್ಪಾದಕ ಕೃತ್ಯ­ಗಳನ್ನು ನಡೆಸಲು ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಪ್ರಯತ್ನಿಸು­ತ್ತಿದೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯಕ್ಕೆ ತಿಳಿಸಿದೆ.

ತಲೆ ಮರೆಸಿಕೊಂಡಿರುವ ಐಎಂ ಭಯೋತ್ಪಾದಕ ಮೊಹಮದ್‌ ಶಫಿ ಅರ್ಮಾರ್ ನಡೆಸಿದ ಇ–ಮೇಲ್ ಸಂವ­ಹನದಲ್ಲಿ ಸಿರಿಯಾಕ್ಕೆ ಇತರ ಜಿಹಾದಿಗಳ ಜತೆ ಹೋಗಲು ಬಯಸಿರುವುದಾಗಿ ತಿಳಿಸಿರುವ ವಿಷಯ ತನಿಖೆಯಿಂದ ಗೊತ್ತಾಗಿದೆ ಎಂದು ಎನ್ಐಎ ಅಧಿ­ಕಾರಿಗಳು ಜಿಲ್ಲಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಐಎಸ್ಐಎಸ್ ಭಯೋತ್ಪಾದಕ ಸಂಘಟನೆಯ ಮಾದರಿ­ಯನ್ನು ಭಾರತ­ದಲ್ಲೂ ಅನುಸರಿಸಲು ಐಎಂ ಭಯೋ­ತ್ಪಾ­ದಕರು ಪ್ರಯತ್ನಿಸುತ್ತಿದ್ದಾರೆ  ಎಂದು ಎನ್ಐಎ ಅಧಿಕಾರಿಗಳು 20 ಐಎಂ ಭಯೋ­ತ್ಪಾದಕರ ವಿರುದ್ಧ ಸಲ್ಲಿಸಿರುವ ಹೆಚ್ಚುವರಿ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದ್ದಾರೆ. 20 ಭಯೋತ್ಪಾದಕರ ಪೈಕಿ 17 ಜನರು ತಲೆ ಮರೆಸಿಕೊಂಡಿದ್ದು ತೆಹಸಿನ್ ಅಖ್ತರ್, ಹೈದರ್‌ ಅಲಿ ಮತ್ತು ಜಿಯಾಉರ್ ರೆಹಮಾನ್ ಈಗ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

ತಲೆ ಮರೆಸಿಕೊಂಡಿರುವ ಇನ್ನೊಬ್ಬ ಭಯೋತ್ಪಾದಕ ಅಬ್ದುಲ್ ಖಾದಿರ್ ಸುಲ್ತಾನ್ ಅರ್ಮರ್ ಸಹ ಇತರ ಜಿಹಾದಿಗಳ ಜತೆ ಸಿರಿಯಾಕ್ಕೆ  ತೆರಳಲು ಬಯಸಿದ್ದ ಎಂಬ ಮಾಹಿತಿಯನ್ನು ದೋಷಾರೋಪ ಪಟ್ಟಿಯಲ್ಲಿ ಒದಗಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT