ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಮ್ಮೆ ಬಡ್ತಿ ನಿರಾಕರಿಸಿ ಮತ್ತೆ ಕೇಳುವಂತಿಲ್ಲ’

Last Updated 24 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮೊದಲು ಬಡ್ತಿ ನಿರಾಕರಿಸಿದ ಸರ್ಕಾರಿ ನೌಕರ ನಂತರದ ಹಂತದಲ್ಲಿ ಮತ್ತೆ ಬಡ್ತಿ ಕೇಳು-ವಂತಿಲ್ಲ ಎಂದು ಸುಪ್ರೀಂ-ಕೋರ್ಟ್‌ ಹೇಳಿದೆ.

ಮಧ್ಯಪ್ರದೇಶದ ಸರ್ಕಾರಿ ನೌಕರ ರಮಾನಂದ್‌ ಪಾಂಡೆ ಎಂಬುವವ-ರನ್ನು ಬಡ್ತಿ ನೀಡಿ ವರ್ಗಾವಣೆ ಮಾಡ­ಲಾಗಿತ್ತು. ಆದರೆ ಅವರು  ವರ್ಗಾ-ವಣೆ-ಗೊಳ್ಳಲು ಇಷ್ಟಪಡ-ದಿದ್ದರಿಂದ ಬಡ್ತಿ ನಿರಾಕರಿಸಿದ್ದರು.  ಸರ್ಕಾರ ಅವರಿಗೆ ನೀಡಿದ್ದ ಬಡ್ತಿ-ಯನ್ನು ರದ್ದು ಮಾಡಿತ್ತು. ಇದನ್ನು ಪ್ರಶ್ನಿಸಿ ಅವರು ಎರಡು ವರ್ಷಗಳ ಬಳಿಕ ಅಂದರೆ ೨೦೦೮ರ ಅಕ್ಟೋಬರ್‌ ೨೪ರಂದು ಮಧ್ಯಪ್ರದೇಶ ಹೈಕೋರ್ಟ್‌ಗೆ ರಿಟ್‌ ಸಲ್ಲಿಸಿದ್ದರು.

ಪಾಂಡೆಗೆ ವಾಪಸ್‌ ಬಡ್ತಿ ನೀಡ-ಬೇಕು ಎಂದು ಮಧ್ಯಪ್ರದೇಶ ಸರ್ಕಾ-ರಕ್ಕೆ ಹೈಕೋರ್ಟ್‌ ಸೂಚಿಸಿತ್ತು.  ಇದನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂ-ಕೋರ್ಟ್‌ ಮೊರೆ ಹೋ-ಗಿತ್ತು. ಹೈಕೋರ್ಟ್‌ ಆದೇಶವನ್ನು ಸುಪ್ರೀಂ-ಕೋರ್ಟ್‌ ವಜಾಗೊಳಿಸಿದೆ. ‘ವರ್ಗಾ-ವಣೆ ಬೇಡ ಎನ್ನುವ ಕಾರ-ಣಕ್ಕೆ ಪಾಂಡೆ ಬಡ್ತಿ ನಿರಾಕರಿಸಿದ್ದರು. ಇದ-ರಲ್ಲಿ ಸರ್ಕಾ--ರದ ತಪ್ಪು ಇಲ್ಲ. ಇದಕ್ಕೆ ಪಾಂಡೆ ಅವರೇ ಹೊಣೆ. ಹೈಕೋ-ರ್ಟ್‌ ಆದೇ-ಶವು ಕಾನೂನಿಗೆ ವಿರುದ್ಧ-ವಾಗಿದೆ’ ಎಂದು ನ್ಯಾಯ-ಮೂರ್ತಿ ಜೆ.ಚಲಮೇ-ಶ್ವರ್‌ ಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT