ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಓದಿನ ಜತೆಗೆ ಸಾಂಸ್ಕೃತಿಕ ನೆಲೆಗಟ್ಟು ಅಗತ್ಯ’

Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಕೆಂಗೇರಿ: ‘ವಿದ್ಯಾರ್ಥಿಗಳಿಗೆ ಓದಿನ ಜತೆಗೆ ಸಾಂಸ್ಕೃತಿಕ ನೆಲೆಗಟ್ಟು ರೂಪಿಸಬೇಕು. ಹೀಗಾಗಿ, ನಮ್ಮ ರಾಜ್ಯದ ಶಾಲಾ ಕಾಲೇಜುಗಳಲ್ಲಿ ಅನೇಕ ಯೋಜನೆ­ಗಳನ್ನು ಜಾರಿಗೆ ತಂದಿರುವುದು ಒಳ್ಳೆಯ ಬೆಳವಣಿಗೆ ಎಂದು ಬೆಂಗಳೂರು ವಿ.ವಿಯ ನಿವೃತ್ತ ಕುಲಪತಿ ಡಾ. ಸಿದ್ದಪ್ಪ ಹೇಳಿದರು.

ಮಲ್ಲತ್ತಹಳ್ಳಿಯ ಕಲಾ­ಗ್ರಾಮ­ದಲ್ಲಿ 2015ನೇ ಸಾಲಿನ ವಿಭಾ­ಗೀಯ ಮಟ್ಟದ ಕಾಲೇಜು ರಂಗೋ­ತ್ಸವ ಉದ್ಘಾಟಿಸಿ ಮಾತನಾಡಿದರು.
‘ಈ ಹಿಂದೆ ರಂಗಭೂಮಿ ಕಲಾವಿದರು­ಗಳಿಗೆ ಅಷ್ಟೇನೂ ಗೌರವ ಇರಲಿಲ್ಲ. ವಿದ್ಯಾರ್ಥಿ ಜೀವನದಲ್ಲಿಯೇ ಸಾಂಸ್ಕೃತಿಕ ಚಟುವಟಿಕೆಗಳನ್ನು ರೂಪಿಸಿ­ಕೊಡುವ ಮತ್ತು ಅದನ್ನು ಉತ್ತೇಜಿಸುವ ಕಾಲೇಜು ಶಿಕ್ಷಣವೂ ಅಗತ್ಯವಾಗಿ ಬೇಕು’ ಎಂದು ಅವರು ಹೇಳಿದರು.

ರಂಗನಟ ಬಿ.ವಿ. ರಾಜರಾಂ, ‘ವ್ಯಕ್ತಿಗೆ ನಾಯಕತ್ವದ ಗುಣ ಹಾಗೂ ಶಕ್ತಿಯನ್ನು ರಂಗಭೂಮಿ ನೀಡ­ಬಲ್ಲದು. ರಂಗಭೂ­ಮಿಯ ಒಡನಾಟ­ದಿಂದಾಗಿ ಸಮಾಜ­ದಲ್ಲಿ ಉನ್ನತ ಸ್ಥಾನ ಪಡೆಯುವ ಅವಕಾಶಗಳಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT