ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಂಪೆನಿಗಳ ಪಾತ್ರ ಮಹತ್ವದ್ದು’

ಜಾಗತಿಕ ಹವಾಮಾನ ಬದಲಾವಣೆ ನಿಯಂತ್ರಿಸಲು ಕರೆ
Last Updated 19 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಜಾಗತಿಕ ಹವಾಮಾನ ಬದಲಾವಣೆಯಿಂದ ಹಲವು ದುಷ್ಪರಿ ಣಾಮಗಳು ಉಂಟಾಗುತ್ತಿವೆ. ಇದನ್ನು ನಿಯಂತ್ರಿಸಲು ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ (ಐಸಿಟಿ) ಕ್ಷೇತ್ರದ ಕಂಪೆನಿಗಳು ಪ್ರಮುಖ ಪಾತ್ರ ನಿಭಾಯಿಸ ಬೇಕಾಗಿದೆ’ ಎಂದು ಬೆಂಗಳೂರಿನ ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆ (ಐಐಎಂ–ಬಿ) ಪ್ರಾಧ್ಯಾಪಕ ಪ್ರೊ. ಪಿ.ಡಿ. ಜೋಸ್‌ ತಿಳಿಸಿದರು.

ನಗರದ ಐಐಎಂ–ಬಿನಲ್ಲಿ ‘ಹವಾ ಮಾನ ಬದಲಾವಣೆ ನಿಯಂತ್ರಿಸುವಲ್ಲಿ ಐಸಿಟಿ ಕ್ಷೇತ್ರದ ಪಾತ್ರ’ದ ಬಗೆಗಿನ ಸಿಡಿಪಿ–ಐಐಎಂ–ಬಿ ವರದಿಯನ್ನು ಬಿಡು ಗಡೆಗೊಳಿಸಿ  ಅವರು ಮಾತ ನಾಡಿದರು.

ಐಐಎಂ–ಬಿ ನಿರ್ದೇಶಕ ಸುಶೀಲ್‌ ವಚನಿ ವರದಿ ಬಿಡುಗಡೆ ಗೊಳಿಸಿದರು. ಐಐಎಂ–ಬಿ ಸಹಯೋಗ ದೊಂದಿಗೆ ಕಾರ್ಬನ್‌ ಡಿಸ್‌ಕ್ಲೋಸರ್‌ ಪ್ರಾಜೆಕ್ಟ್‌ (ಸಿಡಿಪಿ) ಸಂಸ್ಥೆಯು ಸುಮಾರು 35 ದೇಶಗಳ ಪ್ರಮುಖ ಐಟಿ ಕಂಪೆನಿಗಳ ಪ್ರತಿಕ್ರಿಯೆಯನ್ನು ವಿಶ್ಲೇಷಿಸಿ ಈ ವರದಿ ಸಿದ್ಧಪಡಿಸಿದೆ. ಅದರಲ್ಲಿ ಇನ್ಫೊಸಿಸ್‌, ಟಿಸಿಎಸ್‌, ವಿಪ್ರೊ. ಅಸೆಂಚರ್‌, ಬಿಟಿ, ಗೂಗಲ್‌, ಐಬಿಎಂ, ಮೈಕ್ರೊಸಾಫ್ಟ್‌ ಕಂಪೆನಿಗಳೂ ಸೇರಿವೆ.

‘ಹವಾಮಾನ ಬದಲಾವಣೆಯ ಆತಂಕ ಕಂಪೆನಿಗಳನ್ನು ಕಾಡುತ್ತಿದೆ. ಈ ಪ್ರಯುಕ್ತ ತಮ್ಮ ಮಂಡಳಿಯ ಸಭೆಗಳಲ್ಲಿ ಈ  ಅಂಶಕ್ಕೆ ಒತ್ತು ನೀಡುತ್ತಿವೆ’ ಎಂದು ಸಿಡಿಪಿ ಇಂಡಿಯಾದ ನಿರ್ದೇಶಕ ದಮಣದೀಪ್‌ ಸಿಂಗ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT