ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕತ್ರಿನಾ ಕೈಫ್‌ ಗಲ್ಲದಂತೆ ರಸ್ತೆಗಳು’

Last Updated 23 ನವೆಂಬರ್ 2014, 19:30 IST
ಅಕ್ಷರ ಗಾತ್ರ

ರಾಂಚಿ: ಪ್ರಸ್ತುತ ಜಾರ್ಖಂಡ್‌ನ ರಸ್ತೆ­ಗಳು  ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಅವರ ಗಲ್ಲದಂತೆ ಇದೆ ಎಂದು ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ ಅವರ ಕಿರಿಯ ಸಹೋದರ ಬಸಂತ್‌ ಸೊರೆನ್‌ ಹೇಳಿದ್ದಾರೆ.

ದುಮ್ಕಾದ ಕಿಜುರಿಯಾದಲ್ಲಿ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಬಸಂತ್‌, ‘ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ ಅವರ 14 ತಿಂಗಳ ಅಧಿಕಾರದಲ್ಲಿ ಜಾರ್ಖಂಡ್‌ ಸಾಕಷ್ಟು ಅಭಿವೃದ್ಧಿ ಕಂಡಿದೆ. ಅದರಲ್ಲೂ ರಸ್ತೆಗಳ ಸ್ಥಿತಿ ಬಹಳಷ್ಟು ಸುಧಾರಿಸಿದ್ದು, ಅವರು ನಟಿ ಕತ್ರಿನಾ ಕೈಫ್‌ ಗಲ್ಲದಷ್ಟು ನಯವಾಗಿವೆ’ ಎಂದಿದ್ದಾರೆ.

ಎರಡು ದಶಕಗಳ ಹಿಂದೆ ಲಾಲೂ ಪ್ರಸಾದ್‌, ‘ಬಿಹಾರದ ರಸ್ತೆಗಳನ್ನು ಹೇಮಾಮಾಲಿನಿ ಗಲ್ಲದಂತೆ ನಿರ್ಮಿಸಿದ್ದೇನೆ’ ಎಂದು ಪ್ರತಿಕ್ರಿಯಿಸಿ­ದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT