ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನಿಷ್ಠ 150 ಸ್ಥಾನಗಳಲ್ಲಿ ಶಿವಸೇನಾ ಸ್ಪರ್ಧೆ’

Last Updated 24 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 150 ಸ್ಥಾನಗಳಲ್ಲಿ ಸ್ಪರ್ಧಿಸುವ ನಿರ್ಧಾರ­ದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಶಿವಸೇನಾ ಬುಧವಾರ ಹೇಳಿದೆ. ಸ್ಥಾನಗಳ ಹಂಚಿಕೆ ಬಗ್ಗೆ ಮೈತ್ರಿ­ಕೂಟದ ಪಕ್ಷಗಳೊಂದಿಗೆ ಮಂಗಳವಾರ ನಡೆದ ಸಭೆ ಅಪೂರ್ಣವಾಗಿದೆ.

‘150 ಸ್ಥಾನಗಳಿಗಿಂತ ಕಡಿಮೆ ಸ್ಥಾನ­ಗಳಲ್ಲಿ ಶಿವಸೇನಾ ಕಣಕ್ಕಿಳಿಯಲು ಸಾಧ್ಯ­ವಿಲ್ಲ. ಮಹಾಮೈತ್ರಿಯ ಇತರ ನಾಲ್ಕು ಪಕ್ಷ­ಗ­ಳನ್ನು ಒಟ್ಟಾಗಿ ಉಳಿಸಿಕೊಳ್ಳುವ ಹೊಣೆಗಾರಿಕೆಯನ್ನು ಬಿಜೆಪಿ ಹೊರ­ಬೇಕು ಎಂದು ಸೇನಾ ನಾಯಕ ರಾಮ­ದಾಸ್‌ ಕದಂ ವರದಿಗಾರರಿಗೆ ತಿಳಿಸಿದ್ದಾರೆ.

ಸಣ್ಣ ಪಕ್ಷಗಳೊಂದಿಗಿನ ಬಿಕ್ಕಟ್ಟು ಶಮನ: ವಿಧಾನಸಭಾ ಚುನಾವಣೆಯಲ್ಲಿ 18 ಸ್ಥಾನಗಳನ್ನು ಬಿಟ್ಟು ಕೊಡುವ ಭರವಸೆ­ಯನ್ನು ಉದ್ಧವ ಠಾಕ್ರೆ ನೀಡಿದ್ದರಿಂದ ಮಹಾಮೈತ್ರಿ (ಶಿವಸೇನಾ,ಬಿಜೆಪಿ, ಮತ್ತು ಇತರ ನಾಲ್ಕು ಸಣ್ಣ ಪಕ್ಷಗಳು) ತೊರೆ­ಯುವ ನಿರ್ಧಾರ­­ದಿಂದ ಅದರ ನಾಲ್ಕು ಸಣ್ಣ ಪಕ್ಷಗಳು ಹಿಂದೆ ಸರಿದಿವೆ.

‘ಉದ್ಧವ ಠಾಕ್ರೆ ಅವರೊಂದಿಗೆ ನಡೆ­ಸಿದ ಸಭೆ ಯಶಸ್ವಿಯಾಗಿದೆ. 150 ಸ್ಥಾನ­ಗಳನ್ನು ನೀವಿಟ್ಟುಕೊಳ್ಳಿ, 120 ಬಿಜೆಪಿಗೆ ನೀಡಿ ಮತ್ತು ನಮಗೆ 18 ಸ್ಥಾನಗಳನ್ನು ನೀಡಿ ಎನ್ನುವ ನಮ್ಮ ಸೂತ್ರ ಫಲ ನೀಡಿದೆ’ ಎಂದು ಸ್ವಾಭಿಮಾನಿ ಶೇತ್ಕಾರಿ ಸಂಘ­ಟನೆಯ ನಾಯಕ ಮತ್ತು ಸಂಸದ ರಾಜು ಶೆಟ್ಟಿ ತಿಳಿಸಿದ್ದಾರೆ.

‘ಮೈತ್ರಿಯಲ್ಲಿರುವ ಸಣ್ಣ ಪಕ್ಷ ಗಳು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿ­ಸಲು ಏಳಕ್ಕಿಂತಲೂ ಹೆಚ್ಚು ಸೀಟು ಪಡೆ­ದುಕೊಳ್ಳಲಿವೆ’ ಎಂದು ಶಿವ ಸಂಗ್ರಾಮ ಪಕ್ಷದ ವಿನಾಯಕ ಮೆಟೆ ಹೇಳಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಏರ್ಪ­ಟ್ಟಿ­ರುವ ಮಹಾಮೈತ್ರಿಯಲ್ಲಿ ಸ್ವಾಭಿ­­­­­ಮಾನಿ ಶೇತ್ಕರಿ ಸಂಘಟನೆ, ರಾಷ್ಟ್ರೀಯ ಸಮಾಜ ಪಾರ್ಟಿ, ಶಿವ ಸಂಗ್ರಾಮ ಮತ್ತು ರಿಪಬ್ಲಿಕ್‌ ಪಾರ್ಟಿ ಆಫ್‌ ಇಂಡಿಯಾ ಪಕ್ಷಗಳಿವೆ.

ಭೇಟಿ ರದ್ದು: ಮೈತ್ರಿಯ ಮಿತ್ರ ಪಕ್ಷ­ಗಳಲ್ಲಿ ಸ್ಥಾನ ಹಂಚಿಕೆ ಬಿಕ್ಕಟ್ಟು ಶಮನ­ಗೊಂಡಿ­ದ್ದರಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಮುಂಬೈ ಭೇಟಿ­ಯನ್ನು ರದ್ದುಗೊಳಿ­ಸಿದ್ದಾರೆ ಎಂದು ಪಕ್ಷದ ವಕ್ತಾರ ಕೇಶವ ಉಪಾಧ್ಯೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT