ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಲ್ಯಾಣ’ ನಗರ!

Last Updated 28 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಇಂದು ಬೆಂಗಳೂರೆಂಬ ಮಹಾನಗರದಲ್ಲಿ ಕಸ, ತ್ಯಾಜ್ಯ, ಪ್ಲಾಸ್ಟಿಕ್ ಬಳಕೆ ಮುಂತಾದ ಪರಿಸರ ಹಾನಿಯ ಮಾತೇ ಎಲ್ಲೆಡೆ ಕೇಳಿ ಬರುತ್ತಿದೆ. ಮಹಾನಗರದ ಮೂಲೆ ಮೂಲೆಯಲ್ಲಿ ಇಂದು ಕಸ ಸಮಸ್ಯೆಯ ಕೂಗು ಪ್ರತಿಧ್ವನಿಸುತ್ತಿದೆ. ಕಸ ವಿಲೇವಾರಿಯ ಈ ಅಳಲನ್ನು ನಿವಾರಿಸಿ, ತಾವಿರುವ ಬಡಾವಣೆ ಹಾಗೂ ಸುತ್ತಮುತ್ತಲಿನ ಪರಿಸರವನ್ನಾದರೂ  ಸಚ್ಛವಾಗಿಟ್ಟು­ಕೊಳ್ಳಬೇಕು ಎಂಬ ಧ್ಯೇಯದಿಂದ ಹುಟ್ಟಿಕೊಂಡ ಸಂಸ್ಥೆ ಕಲ್ಯಾಣನಗರ ವೆಲ್‌ಫೇರ್ ಅಸೋಸಿಯೇಶನ್.

ಕೇವಲ ೮ರಿಂದ 10 ಜನ, ೪೦-ರಿಂದ ೫೦ ವಯಸ್ಸಿನ ಆಸುಪಾಸಿನವರು ತಮ್ಮ ಏರಿಯಾದಲ್ಲಿನ ಮನೆಯವರು ಕಸವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು  ತಪ್ಪಿಸಿ ಕಲ್ಯಾಣನಗರವನ್ನು ಕಲ್ಯಾಣಗೊಳಿಸ­ಬೇಕು ಎಂಬ ಸದುದ್ದೇಶದಿಂದ ೧೯೮೫ರಲ್ಲಿ ಈ ಸಂಸ್ಥೆಯನ್ನು ಹುಟ್ಟು ಹಾಕಿದರು. ತಮ್ಮ ಏರಿಯಾದ ಸುತ್ತಮುತ್ತಲಿನ ಪ್ರತಿಯೊಬ್ಬರಿಂದ ಕಸ ಸಂಗ್ರಹಿಸಿ, ಅದನ್ನು ಹಸಿಕಸ ಹಾಗೂ ಒಣಕಸವಾಗಿ ವಿಂಗಡಿಸಿ ಅದರಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸಿ ಅದನ್ನು ಮಾರಾಟ ಮಾಡುತ್ತಾರೆ. ಅದರಿಂದ ಬಂದ ಹಣದಿಂದ  ತಮ್ಮ ಸಂಸ್ಥೆಯ ನಿರ್ವಹಣೆ ಮಾಡುತ್ತಿದ್ದೇವೆ ಎನ್ನುತ್ತಾರೆ ಸಂಸ್ಥೆಯ ಮೇಲ್ವಿಚಾರಕರು. 

  ಸಂಸ್ಥೆ ಪ್ರಾರಂಭ ಹಂತದಲ್ಲಿ ಅಂತ ಅಭಿವೃದ್ಧಿ ಕಾಣದಿದ್ದರೂ ಸಂಪೂರ್ಣವಾಗಿ ಕಾರ್ಯ­ಪ್ರವೃತ್ತವಾಗಿದ್ದು ೧೯೮೯ರಿಂದ. ಆ

ನಾವು ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ಮರಳಿಸಬೇಕು. ಪರಿಸರ ಸಂರಕ್ಷಣೆಯ ಮೂಲಕ ಸಮಾಜದ ಆರೋಗ್ಯ ಕಾಪಾಡಬೇಕು. ಯುವ ಜನತೆ ಹೆಚ್ಚು ಹೆಚ್ಚು ಪರಿಸರ ಸಂರಕ್ಷಣೆಯ ಕುರಿತು ಕಾಳಜಿ ವಹಿಸಬೇಕು. ಇದರಿಂದ ಸ್ವಚ್ಛ ನಿರ್ಮಲ ಪರಿಸರ ನೋಡಲು ಸಾಧ್ಯ.
      –ಸಿಎ.ಎಂ.ಸುಬ್ಬಯ್ಯ, ಸಂಸ್ಥೆಯ ಅಧ್ಯಕ್ಷರು

ಸಂದರ್ಭದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈ ಅಸೋಸಿಯೇಶನ್‌ಗೆ ಕಸ ವಿಲೇವಾರಿಗೆ ಬೇಕಾದ ಪರಿಕರಗಳನ್ನು ಒದಗಿಸಿತ್ತು. ಇದು ಖಾಸಗಿ ಸಂಸ್ಥೆಯಾಗಿದ್ದು, ಬೆಂಗಳೂರು ಮಹಾನಗರ ಪಾಲಿಕೆ ಈ ಸಂಸ್ಥೆಗೆ ಇಲ್ಲಿಯವರೆಗೆ ವರ್ಷಕ್ಕೆ ೨೦ರಿಂದ ೨೫ ಸಾವಿರ ರೂಪಾಯಿ ಧನ ಸಹಾಯ ನೀಡುತ್ತಿತ್ತು. ಈ  ಬಾರಿಯಿಂದ ಆ ಮೊತ್ತ ₨೧,೩೯,೯೭೫ಕ್ಕೆ ಏರಿಕೆಯಾಗಿದೆ ಎನ್ನುವುದು ಸಂತೋಷದ ವಿಷಯ ಎನ್ನುತ್ತಾರೆ ಸಂಸ್ಥೆಯವರು.

ಉದ್ದೇಶ
ಕೊಳೆತು ನಾರುತ್ತಿರುವ ಕಸದ ರಾಶಿ, ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಗಬ್ಬೆದ್ದು ಹೋಗಿರುವ ಬೆಂಗಳೂರನ್ನು ಸ್ವಚ್ಛಗೊಳಿಸಲಾಗದಿದ್ದರೂ ಮೊದಲು ತಮ್ಮ ಸುತ್ತಲಿನ ಪರಿಸರವನ್ನು ಶುಚಿಯಾಗಿರಿಸಿಕೊಳ್ಳಬೇಕು. ತಾವಿರುವ ನಗರವನ್ನು ಕಸಮುಕ್ತ ನಗರವನ್ನಾಗಿಸಬೇಕು ಎಂಬ ಕನಸಿನೊಂದಿಗೆ ತಮ್ಮದೇ ಶ್ರಮ, ಆರ್ಥಿಕ ಬಲದೊಂದಿಗೆ ಪ್ರಾರಂಭಿಸಿದ ಸಂಸ್ಥೆ ಕಲ್ಯಾಣನಗರ ವೆಲ್‌ಫೇರ್ ಅಸೋಸಿಯೇಶನ್. ಕೇವಲ ಕಸ ವಿಂಗಡಣೆ ಅಷ್ಟೇ ಅಲ್ಲದೆ ಚರಂಡಿ ಸ್ವಚ್ಛಗೊಳಿಸುವುದು, ಕುಳಿತುಕೊಳ್ಳಲು ಕಲ್ಲು ಬೆಂಚುಗಳನ್ನು ನಿರ್ಮಿಸುವುದು ಮುಂತಾದ ಪರಿಸರ ಸ್ನೇಹಿ ಕೆಲಸಗಳನ್ನು ಇವರು ತಮ್ಮ ಅಸೋಸಿಯೇಶನ್ ವತಿಯಿಂದ ನಡೆಸುತ್ತಾರೆ.

ಸಂಸ್ಥೆಯೊಂದಿಗೆ ಹೆಜ್ಜೆ ಹಾಕುತ್ತಿರುವ ನಿಷ್ಠಾವಂತ ಕೆಲಸಗಾರರು: ಕಲ್ಯಾಣನಗರ ವೆಲ್‌ಫೇರ್ ಅಸೋಸಿಯೇಶನ್‌ನಲ್ಲಿ ಒಟ್ಟು ೨೫ ಕೆಲಸಗಾರರಿದ್ದು, ಇವರೆಲ್ಲ ೧೦-೧೫ ವರ್ಷದಿಂದ ಈ ಸಂಸ್ಥೆಯಲ್ಲಿ ದುಡಿಯುತ್ತಿದ್ದಾರೆ. ಇಲ್ಲಿನ  ಕೆಲಸಗಾರರು ಅತ್ಯಂತ ಕಷ್ಟದ ಜೀವನ ಸಾಗಿಸುತ್ತಿದ್ದು, ಮಹಿಳೆಯರೇ ಇಲ್ಲಿ ಪ್ರಧಾನವಾಗಿದ್ದಾರೆ.  ಇವರು ಕಲ್ಯಾಣನಗರ ಸಮೀಪದ ಕಸ್ತೂರಿನಗರ, ಭುವನಗಿರಿ, ಬೃಂದಾವನ, ಕಲ್ಯಾಣನಗರ, ಲಿಂಗರಾಜಪುರ ಮುಂತಾದ ಏರಿಯಾಗಳ 3,000 ಮನೆಗಳಿಂದ ಕಸ ಸಂಗ್ರಹಿಸುತ್ತಾರೆ. ಪ್ರತಿ ಮನೆ ಮನೆಗಳಿಗೂ ತೆರಳಿ ಕಸವನ್ನು ಶೇಖರಿಸುವ ಇವರು, ಪ್ರತಿದಿನ ಬೆಳಗ್ಗೆ ೭.೩೦ರಿಂದ ಸಂಜೆ ೪ ಗಂಟೆಯ ತನಕ ಕೆಲಸ ನಿರ್ವಹಿಸುತ್ತಾರೆ. ಪ್ರತಿ ಮನೆಗೂ ಹೋಗಿ ಕಸ ಸಂಗ್ರಹಿಸುವುದು, ಕಸ ವಿಂಗಡಣೆ ಅತ್ಯಂತ ಕೆಟ್ಟ ಹಾಗೂ ಕಠಿಣ ಕೆಲಸವಾಗಿದ್ದು, ತಮ್ಮ ಕೆಲಸಗಾರರು ಎಂದಿಗೂ ಅದನ್ನು ಬೇಸರಿಸದೆ ಅನುಸರಿಕೊಂಡು ಹೋಗುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಪ್ರಧಾನ ಕಾರ್ಯದರ್ಶಿ ಜಿ.ಬಿ.ಕರವೀರ್‌.

ಸಂಸ್ಥೆಯ ನಿರ್ವಹಣೆ, ಕೆಲಸಗಾರರು ಹಾಗೂ ಕಸ ವಿಲೇವಾರಿಗೆ ಬೇಕಾಗುವ ಬಕೆಟ್, ತ್ರಿಚಕ್ರ ವಾಹನ, ಸೋಪು ಮುಂತಾದ ಸಲಕರಣೆಗಳಿಗಾಗಿ ಸಂಸ್ಥೆ ತಿಂಗಳಿಗೆ ಪ್ರತಿ ಮನೆಯಿಂದ ೨೫ ರೂಪಾಯಿ ಸಂಗ್ರಹ ಮಾಡುತ್ತಿದೆ.  ಇಂದು ಕಲ್ಯಾಣ ನಗರ ಕಸ ಮುಕ್ತವಾಗಿ ಸುಂದರ, ಸ್ವಚ್ಛ ಬಡಾವಣೆ ಎನ್ನಿಸಿಕೊಂಡಿದೆ. ಸರ್ಕಾರ ಮಾಡಲಾಗದ ಕೆಲಸವನ್ನು ತಮ್ಮ ಸಂಸ್ಥೆ ಮಾಡಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಸಂಸ್ಥೆಯ ಮೇಲ್ವಿಚಾರಕರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT