ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಶ್ಮೀರಕ್ಕೆ ಸರ್ಕಾರ ಸಮಗ್ರ ನೀತಿ ಸಿದ್ಧ ಪಡಿಸುತ್ತಿದೆ’

Last Updated 28 ಸೆಪ್ಟೆಂಬರ್ 2014, 11:17 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಣಿವೆ ರಾಜ್ಯ ಕಾಶ್ಮೀರ ಬಗ್ಗೆ ಎನ್‌ಡಿಎ ಸರ್ಕಾರ ಒಂದು ಸಮಗ್ರ ನೀತಿ ರೂಪಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ತಿಳಿಸಿದ್ದಾರೆ.

‘ಕಾಶ್ಮೀರದ ಬಗ್ಗೆ ನಾವು ಒಂದು ಸಮಗ್ರ ನೀತಿಯನ್ನು ಸಿದ್ಧಪಡಿಸುತ್ತಿದ್ದೇವೆ. ಶೀಘ್ರವೇ ಅದನ್ನು ಪ್ರಕಟಿಸಲಿದ್ದೇವೆ’ ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಇದೇ ವೇಳೆ ಈಶಾನ್ಯ ರಾಜ್ಯಗಳೊಂದಿಗೆ ಮಾತುಕತೆಗಾಗಿ ನೇಮಿಸಿದಂತೆ ಜಮ್ಮು ಮತ್ತು ಕಾಶ್ಮೀರಕ್ಕೂ ಯಾರಾದರನ್ನು ನೇಮಿಸಲಾಗುವುದೇ ಎಂಬ ಪ್ರಶ್ನೆಗೆ ಸಿಂಗ್‌ ಅವರು ‘ಅಂತಹ ಯೋಚನೆ ಇಲ್ಲ’ ಎಂದಿದ್ದಾರೆ.


ಚುನಾವಣೆ: ಪ್ರವಾಹದಿಂದ ತತ್ತರಿಸಿದ ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆ ಬಗ್ಗೆ ಅಲ್ಲಿನ ಚುನಾವಣಾ ಆಯೋಗ ನೀಡುವ ವರದಿ ಆಧರಿಸಿ ನಿರ್ಧರಿಸುವುದಾಗಿ ಕೇಂದ್ರ ಚುನಾವಣಾ ಆಯೋಗ ಭಾನುವಾರ ತಿಳಿಸಿದೆ.

87 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಅವಧಿ 2015ರ ಜನವರಿ 19ರಂದು ಮುಕ್ತಾಯಗೊಳ್ಳಲಿದೆ.

‘ಅಕ್ಟೋಬರ್‌ 15ರ ವೇಳೆಗೆ ಅಲ್ಲಿನ ಮುಖ್ಯ ಚುನಾವಣಾಧಿಕಾರಿ ತಮ್ಮ ವರದಿ ಸಲ್ಲಿಸುವ ನಿರೀಕ್ಷೆಗಳಿವೆ. ವರದಿ ಪಡೆದ ಬಳಿಕ ಚುನಾವಣಾ  ಸಮಯವನ್ನು ನಿರ್ಧರಿಸಲಿದ್ದೇವೆ’ ಎಂದು ಆಯೋಗ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT