ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೀಟ’ಬಾಧೆ ನಿವಾರಿಸಿ

Last Updated 1 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತ್ಯ ಸಮ್ಮೇಳನಗಳನ್ನು ಹಲವು ದಶಕಗಳಿಂದ ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿದೆ. ಇದು ಸಂತಸದ ವಿಷಯ.

ಸಾಹಿತ್ಯವು ವಾಕ್ಯ, ಪದ, ಅರ್ಥ, ಭಾವ ಮತ್ತು ಅಕ್ಷರಗಳನ್ನು ಅವಲಂಬಿಸಿದೆ. ಈ ಅಕ್ಷರಗಳು ಮರದ ಬೇರುಗಳಿದ್ದಂತೆ. ಮರದ ಬೇರಿಗೆ ನೀರು ಮತ್ತು ಗೊಬ್ಬರ ಹಾಕಿ ಬೆಳೆಸುವಂತೆ ಕನ್ನಡ ಅಕ್ಷರ ಕಲಿಕೆಗೆ ಹೆಚ್ಚು ಗಮನಹರಿಸಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

ಸಾಹಿತ್ಯ ಫಲ ಪುಷ್ಪಗಳಿದ್ದಂತೆ. ಈ ಕನ್ನಡ ಫಲ ಪುಷ್ಪಗಳ ಅಂದ, ಸ್ವಾದ ವರ್ಣನೆಗೆ ನಿಲುಕದ್ದು. ಇದನ್ನು ಅನುಭವಿಸಿ, ಆನಂದಪಡುವ ಕನ್ನಡಿಗರು ಧನ್ಯರು. ಆದರೆ ಈ ‘ಕನ್ನಡವೃಕ್ಷ’ಕ್ಕೆ ‘ಕೀಟ’ಬಾಧೆ ಹೆಚ್ಚಾಗುತ್ತಿದೆ.

ಹೊರ­ರಾಜ್ಯಗಳಿಂದ  ಬಂದು ಇಲ್ಲಿ ನೆಲೆಸಿ ಕನ್ನಡ ಕಲಿಯದೇ ಇರುವ ಮತ್ತು ಕನ್ನಡ ಭಾಷೆಯನ್ನು ಹಿಂದಕ್ಕೆ ಸರಿಸಿ ಇಂಗ್ಲಿಷ್‌ ಭಾಷೆ ಕಲಿಸಲು  ಹೋರಾಡುತ್ತಿರುವವರ ಬಾಧೆಯನ್ನು ಹೋಗಲಾಡಿಸಬೇಕಾಗಿದೆ. ಅಲ್ಲವೆ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT