ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆಎಸ್‌ಆರ್‌ಟಿಸಿ’ ಹೆಸರು ಕರ್ನಾಟಕ, ಕೇರಳ ಸಮರ

Last Updated 29 ನವೆಂಬರ್ 2014, 19:30 IST
ಅಕ್ಷರ ಗಾತ್ರ

ತಿರುವನಂತಪುರ (ಪಿಟಿಐ): ‘ಕೆಎಸ್‌­ಆರ್‌­ಟಿಸಿ’ ಹೆಸರಿನ ವಿಷಯವಾಗಿ ಕರ್ನಾ­ಟಕ ಹಾಗೂ ಕೇರಳ ರಾಜ್ಯಗಳ ನಡುವಿನ  ಕಾನೂನು ಸಮರ ತೀವ್ರವಾಗುತ್ತಿದೆ. ಎರಡೂ ರಾಜ್ಯಗಳ ರಸ್ತೆ ಸಾರಿಗೆ ಸಂಸ್ಥೆ­­ಗಳಿಗೆ ಇದೇ ಹೆಸರು ಬಳಕೆಯಲ್ಲಿ­ರು­ವುದು ವಿವಾದಕ್ಕೆ ಕಾರಣವಾಗಿದೆ.

‘ಕೆಎಸ್‌ಆರ್‌ಟಿಸಿ’ ಹೆಸರು ಬಳಕೆ ಮಾಡ­ದಿರುವಂತೆ ಕಳೆದ ವಾರ ಕರ್ನಾ­ಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಕೇರಳ ಸರ್ಕಾರಕ್ಕೆ ಪತ್ರ ಬರೆದಿತ್ತು.

‘ನಮಗೆ ಈ ಸಂಬಂಧ ಕರ್ನಾಟಕ­ದಿಂದ ಪತ್ರ ಬಂದಿದೆ. ನಾವು ಟ್ರೇಡ್‌್ ಮಾರ್ಕ್‌್ ನೋಂದಣಿ ಪ್ರಾಧಿಕಾರದ  ಮುಂದೆ (ಟಿಎಂಆರ್) ಆಕ್ಷೇಪಣೆ ಸಲ್ಲಿ­ಸು­ತ್ತೇವೆ’ ಎಂದು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ವ್ಯವ­ಸ್ಥಾಪಕ ನಿರ್ದೇಶಕ ಆಂಟನಿ ಚಾಕೊ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಕೇರಳವು ಈ ಹೆಸರನ್ನು ೧೯೫೩­ರಿಂ­ದಲೂ ಬಳಸುತ್ತಾ ಬಂದಿದೆ. ಕರ್ನಾ­ಟ­ಕವು ಕಳೆದ ವರ್ಷವಷ್ಟೇ  ಈ ಹೆಸ­ರನ್ನು ನೋಂದಣಿ ಮಾಡಿಕೊಂಡಿದೆ. ಆದ್ದ­ರಿಂದ ನಾವು ಈ ಬಗ್ಗೆ ಆಕ್ಷೇಪಣೆ ಸಲ್ಲಿ­ಸುತ್ತೇವೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT