ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೇಂದ್ರ, ರಾಜ್ಯ ಸರ್ಕಾರಕ್ಕೆ ಕಾಳಜಿ ಇಲ್ಲ’

15ನೇ ದಿನಕ್ಕೆ ಮುಂದುವರೆದ ಧರಣಿ ಶಾಂತಿಯುತ: ನವಕರ್ನಾಟಕ ವೇದಿಕೆ ಬೆಂಬಲ
Last Updated 31 ಜುಲೈ 2015, 11:10 IST
ಅಕ್ಷರ ಗಾತ್ರ

ನರಗುಂದ: ಮಹಾದಾಯಿ, ಕಳಸಾ ಬಂಡೂರಿಗಾಗಿ  ರೈತ ಸೇನಾ ಘಟಕದ ಮೂಲಕ ಕಳೆದ 15 ದಿನಗಳಿಂದ ಧರಣಿ, ಪ್ರತಿಭಟನೆ ನಡೆಯುತ್ತಿದೆ. ಆದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಪಷ್ಟ ನಿಲುವು  ತೋರುತ್ತಿಲ್ಲ ಎಂದು ನವ ಕರ್ನಾಟಕ ಜನಪರ ಅಭಿವೃದಧಿ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಸುಬ್ರಹ್ಮಣ್ಯಂ ರೆಡ್ಡಿ ಆಗ್ರಹಿಸಿದರು.

ರೈತ ಸೇನಾದ ಹಮ್ಮಿಕೊಂಡಿರುವ ಧರಣಿ ಗುರುವಾರ 15ನೇ ದಿನಕ್ಕೆ ಕಾಲಿಟ್ಟಿ ಸಂದರ್ಭದಲ್ಲಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರುರು. ಈ ಭಾಗದ ಜನಪ್ರತಿನಿಧಿಗಳು ನಿರಂತರ  ರಾಜ್ಯ ಹಾಗೂ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.
ಮಠಾಧೀಶರ ಬೆಂಬಲ: ಗುರುವಾರವೂ ಸಹಿತ ವಿವಿಧ ಮಠಾಧೀಶರು ಭಾಗ ವಹಿಸಿ ಈ ಧರಣಿಗೆ ಬೆಂಬಲ ವ್ಯಕ್ತಪಡಿಸಿ ದರು. ಈ ಸಂದರ್ಭದಲ್ಲಿ ರಾಮದುರ್ಗ ತಾಲ್ಲೂಕಿನ ಕಿಲ್ಲಾ ತೋರಗಲ್‌ ಗಚ್ಛಿನ ಮಠದ ಚನ್ನಮಲ್ಲ ಶಿವಾಚಾರ್ಯರು  ಮಾತನಾಡಿ, ರೈತರು ತಮ್ಮ  ಬೇಡಿಕೆಗಳ ಈಡೇರಿಕೆಗಾಗಿ ಧರಣಿ ನಡೆಸುತ್ತಿದ್ದಾರೆ. ಇದಕ್ಕೆ ಸರ್ಕಾರಗಳು ಕೂಡಲೇ ಗಮನ ಹರಿಸಬೇಕು.  ಈ ಭಾಗದ ಜನಪ್ರತಿನಿಧಿ ಗಳು ಸರ್ಕಾರದ ಮಟ್ಟದಲ್ಲಿ ಇದಕ್ಕೆ  ಪ್ರಯತ್ನ ಮಾಡಬೇಕು. ಪ್ರಧಾನಿ ಬಳಿ ರಾಜ್ಯದ ಮೂಲಕ ನಿಯೋಗ ಒಯ್ಯಲು ಪ್ರಯತ್ನಿಸಬೇಕು.

ಇಲ್ಲವಾದರೆ ನಾವೇ ರೈತರೊಡನೆ ದೆಹಲಿಗೆ ಶಾಂತಿಯುತವಾಗಿ ಬರಬೇಕಾಗುತ್ತದೆ. ಆದ್ದರಿಂದ ವಾಸ್ತವ ಸಮಸ್ಯೆ ಅರಿತು ಕೂಡಲೇ ಈ ಯೋಜೆನ ಅನುಷ್ಟಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಆಗ ಮಾತ್ರ ಇದರ ಸಾರ್ಥಕತೆ ಉಂಟಾಗುತ್ತದೆ ಎಂದರು. ಶಿರೋಳದ ತೋಂಟದಾರ್ಯ ಮಠದ ಗುರುಬಸವ ಸ್ವಾಮೀಜಿ ಮಾತ ನಾಡಿ, ರೈತರು ಸಂಘಟನಾತ್ಮಕವಾಗಿ ಹೋರಾಟ ಮಾಡುತ್ತಿದ್ದು, ಅದು ಶಾಂತಿ ಯುತವಾಗಿ ನಡೆಯಬೇಕು. ಶಾಂತಿ, ಸಮಾಧಾನದ ಮೂಲಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಂದಾಗ ಬೇಕು ಎಂದು ಸಲಹೆ ಮಾಡಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಸಾಬಳೆ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಕೂಡಲೇ ಈ ಯೋಜನೆ ಅನುಷ್ಟಾನಕ್ಕೆ ಮುಂದಾಗು ವಂತೆ ಆಗ್ರಹಿಸಿದರು. ಧರಣಿ ಉದ್ದೇಶಿಸಿ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ, ಪತ್ರಿವನಮಠದ ಸಿದ್ಧವೀರ ಶಿವಯೋಗಿ ಶಿವಾಚಾರ್ಯರು, ಪಂಚ ಗ್ರಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು, ನವಲಗುಂದದ ಬಸವಲಿಂಗ ಸ್ವಾಮೀಜಿ, ಅವರಾದಿ ಫಲ ಹಾರೇಶ್ವರ ಮಠದ ಶ್ರೀಗಳು ಮಾತನಾಡಿ ದರು.  

ಪ್ರತಿಭಟನೆಯಲ್ಲಿ ತಾಪಂ ಸದಸ್ಯೆ ಗುರುದೇವಿ ಶಾನವಾಡಮಠ, ನಾಗನ ಗೌಡ ತಿಮ್ಮನಗೌಡ್ರ, ಬಿ.ಎಸ್‌.ಉಪ್ಪಾರ, ರವಿ ಚಿಂತಾಲ, ಪರುಶರಾಮ ಜಂಬಗಿ, ರಾಜೇಶ್ವರಿ ಹಾದಿಮನಿ, ರೈತ ಸೇನಾ ರಾಜ್ಯಾಧ್ಯಕ್ಷ ವಿರೇಶ ಸೊಬರದಮಠ, ಶಂಕ್ರಣ್ಣ ಅಂಬಲಿ, ಶಿವಯ್ಯ ಪೂಜಾರ, ಬಸವರಾಜ ಗಿರಿಯನ್ನವರ, ರವಿ ಭಜಂತ್ರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಶಾಂತಿಯುತ ಧರಣಿ: ಬುಧವಾರ ಹಿಂಸೆಗೆ ತಿರುಗಿದ್ದ ಧರಣಿ ಗುರುವಾರ ಶಾಂತಿಯುತವಾಗಿ ಮುಂದುವರೆಯಿತು, ಪಟ್ಟಣಕ್ಕೆ ವಿವಿಧ ಹಳ್ಳಿಗಳಿಂದ ರೈತರು ಆಗಮಿಸಿದ್ದರೂ ಅವರು ಪ್ರತಿಭಟನಾ ಮೆರವಣಿಗೆ  ಮಾಡದೇ ನೇರವಾಗಿ ಧರಣಿ ಸ್ಥಳಕ್ಕೆ ಬಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT