ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊಲಿಜಿಯಂ ವ್ಯವಸ್ಥೆಯೇ ಸೂಕ್ತ’

ಸುಪ್ರೀಂಕೋರ್ಟ್‌ – ಹೈಕೋರ್ಟ್‌ ನ್ಯಾಯಮೂರ್ತಿಗಳ ನೇಮಕ
Last Updated 26 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಗೆ  ಈವರೆಗೆ  ಜಾರಿಯಲ್ಲಿದ್ದ ಕೊಲಿಜಿಯಂ ವ್ಯವಸ್ಥೆಯೇ ಸೂಕ್ತ’ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಆರ್‌.ಎಂ. ಲೋಧಾ  ಅಭಿಪ್ರಾಯಪಟ್ಟಿದ್ದಾರೆ.

ದಶಕಗಳಷ್ಟು ಹಳೆಯದಾದ ಕೊಲಿಜಿಯಂ ವ್ಯವಸ್ಥೆ ರದ್ದುಗೊಳಿಸಿ ಅದಕ್ಕೆ ಪರ್ಯಾಯವಾಗಿ ನ್ಯಾಯಾಂಗ ನೇಮಕಾತಿ ಆಯೋಗ ರಚಿಸಲು ಮುಂದಾ-ಗಿರುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ  ಅಸಮಾಧಾನ ಹೊರ ಹಾಕಿದ್ದಾರೆ.

ಸೇವೆಯಿಂದ ನಿವೃತ್ತರಾಗುವ ಮುನ್ನಾ-ದಿನ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸರ್ಕಾರದ ನಿರ್ಧಾರದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. 

ಉನ್ನತ ನ್ಯಾಯಾಲಯಗಳ ನ್ಯಾಯ-ಮೂರ್ತಿಗಳನ್ನು ನೇಮಕ ಮಾಡುವ ವ್ಯವಸ್ಥೆಯಲ್ಲಿ ನ್ಯಾಯಾಂಗದಲ್ಲಿ ಅನು-ಭವ ಇಲ್ಲದ ವ್ಯಕ್ತಿಗಳಿದ್ದರೆ ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಲೋಧಾ ಅವರು ಖಂಡತುಂಡವಾಗಿ ಹೇಳಿದರು. ನ್ಯಾಯಮೂರ್ತಿಗಳು ಮಾತ್ರ ಉತ್ತಮ ನ್ಯಾಯ­ಮೂರ್ತಿ­ಗಳನ್ನು ಆಯ್ಕೆ  ಮಾಡಲು ಸಾಧ್ಯ. ಇಂಥ ವ್ಯವಸ್ಥೆ ಬಿಟ್ಟು ಪರ್ಯಾಯ ವ್ಯವಸ್ಥೆ ಮೂಲಕ ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡು­ವು­ದರಿಂದ ನ್ಯಾಯಾಂಗ ವ್ಯವಸ್ಥೆ ಮೇಲೂ ವ್ಯತಿರಿಕ್ತ ಪರಿಣಾಮ-ವಾಗು­ತ್ತದೆ ಎಂದು ತರಾಟೆಗೆ ತೆಗೆದು­ಕೊಂಡರು.

‘ನ್ಯಾಯಮೂರ್ತಿಗಳು ಮಾತ್ರ ಇತರ ನ್ಯಾಯಾಧೀಶರ ಕೌಶಲ, ಕಾನೂನು ಜ್ಞಾನ, ಹಿನ್ನೆಲೆ, ವರ್ತನೆ ಹಾಗೂ ಸಾಮರ್ಥ್ಯ ಅರಿತಿರುತ್ತಾರೆ. ನ್ಯಾಯ-ಮೂರ್ತಿಗಳ ಆಯ್ಕೆಗೆ ನ್ಯಾಯ-ಮೂರ್ತಿ­ಗಳೇ ಸೂಕ್ತ ಆಯ್ಕೆಯೇ ಹೊರತು ಅವರಿಗಿಂತ ಮತ್ತೊಬ್ಬ ಬೇರೆ ಸೂಕ್ತ ವ್ಯಕ್ತಿ  ಸಿಗಲಾರರು’ ಎಂದರು.

ಉನ್ನತ ನ್ಯಾಯಾಲಯಗಳ ನ್ಯಾಯ-ಮೂರ್ತಿಗಳು ಸೇವೆಯಿಂದ ನಿವೃತ್ತ-ರಾದ ಕನಿಷ್ಠ ಎರಡು ವರ್ಷಗಳ ವರೆಗೆ  ಅವರನ್ನು ಯಾವುದೇ ಸಾಂವಿಧಾನಿಕ ಹುದ್ದೆ ಅಥವಾ ಸರ್ಕಾರದ ಜವಾ-ಬ್ದಾರಿ-ಯುತ ಹುದ್ದೆಗೆ ಪರಿಗಣಿಸ-ಬಾರದು. ನ್ಯಾಯಮೂರ್ತಿಗಳು ಕೂಡ ಅಂತಹ ಆಹ್ವಾನವನ್ನು ಒಪ್ಪಿಕೊಳ್ಳ-ಬಾರದು ಎಂದು ಲೋಧಾ ಸಲಹೆ ಮಾಡಿದರು.

ಹಿರಿಯ ಮತ್ತು ಸಮರ್ಥ ವಕೀಲರನ್ನು ನೇರವಾಗಿ ಸುಪ್ರೀಂಕೋರ್ಟ್‌ ನ್ಯಾಯ­ಮೂರ್ತಿಗಳ ಹುದ್ದೆಗೆ ನೇಮಕ ಮಾಡು­ವಂತೆಯೂ ಅವರು ಇದೇ ವೇಳೆ ಪ್ರಬಲವಾಗಿ ಪ್ರತಿಪಾದಿಸಿದರು.

ತಾವು ಅನುಸರಿಸಿದ ಈ ನೀತಿಯನ್ನು ತಮ್ಮ ಉತ್ತರಾಧಿಕಾರಿಗಳು ಅನುಸರಿಸು­ತ್ತಾರೆ ಎಂಬ ವಿಶ್ವಾಸವನ್ನೂ ಆಶಯ ವ್ಯಕ್ತಪಡಿಸಿದರು.
‘ನಾನು ಒಟ್ಟು ಐವರು ವಕೀಲರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಹುದ್ದೆಗೆ ಶಿಫಾರಸು ಮಾಡಿದ್ದೆ. ಆ ಪೈಕಿ ಇಬ್ಬರಿಗೆ ನ್ಯಾಯಮೂರ್ತಿ-ಗಳಾಗುವ ಅಕಾಶ ದೊರೆಯಿತು.

ಈ ಸಂಪ್ರದಾಯ ಮುಂದುವರೆಯಬೇಕು.ವೈಯಕ್ತಿಕ ಹಾಗೂ ಇನ್ನಿತರ ಕಾರಣ-ದಿಂದ ­ಮೂವರ ಹೆಸರನ್ನು ಸರ್ಕಾರ ಪರಿಗಣಿ-ಸಿರ-ಲಿಲ್ಲ. ಯಾವುದೇ ಕಾರಣ-ಕ್ಕೂ ವಕೀಲರ ಸಾಮರ್ಥ್ಯವನ್ನು ಕಡೆ-ಗಣಿಸ-ಬಾರದು’  ಎಂದು ಸಲಹೆ ಮಾಡಿ-ದರು. ಸುಪ್ರೀಂಕೋರ್ಟ್ ವಕೀಲ-ರಾಗಿದ್ದ ಆರ್‌.ಎಫ್‌. ನಾರಿ-ಮನ್, ಯು.ಯು.-ಲಲಿತ್ ಅವರನ್ನು  ನ್ಯಾಯ-ಮೂರ್ತಿ-ಹುದ್ದೆಗೆ ನೇಮಕ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT