ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖೂಬ್‌ಸೂರತ್‌’ ಹುಡುಗನ ಆತಂಕ

Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬಾಲಿವುಡ್‌ ಅಂಗಳದಲ್ಲಿ ‘ಖೂಬ್‌ಸೂರತ್‌’ ಹೆಜ್ಜೆಯಿಡಲು ಸಿದ್ಧರಾಗಿರುವ ಪಾಕಿಸ್ತಾನಿ ನಟ ಫವಾದ್‌ ಖಾನ್‌ ಅವರಿಗೆ ಚಿತ್ರ ಬಿಡುಗಡೆಯ ಕುರಿತು ನಿರೀಕ್ಷೆಯಷ್ಟೇ ಆತಂಕವು ಇದೆಯಂತೆ.

ಪಾಕಿಸ್ತಾನಿ ಕಿರುತೆರೆ ಮತ್ತು ಸಿನಿಮಾಗಳಲ್ಲಿ ಖಾನ್‌ ಈಗಾಗಲೇ ಸಾಕಷ್ಟು ಜನಪ್ರಿಯ ನಟರಾಗಿದ್ದರೂ ಬಾಲಿವುಡ್ ಜಗತ್ತಿನಲ್ಲಿ  ‘ಖೂಬ್‌ಸೂರತ್‌’ ಮೊದಲ ಹೆಜ್ಜೆ. ‘ಬಾಲಿವುಡ್‌ನ ನನಗೆ ಬಹುತೇಕ ಅಪರಿಚಿತ ಆಗಿರುವುದೇ ನನ್ನ ಆತಂಕಕ್ಕೆ ಕಾರಣ’ ಎನ್ನುತ್ತಾರೆ ಫವಾದ್‌.

‘ಬಾಲಿವುಡ್‌ಗೆ ಬರಬೇಕು ಎನ್ನುವುದು ಎಂದಿಗೂ ನನ್ನ ಸಿನಿ ಬದುಕಿನ ಯೋಜನೆ ಆಗಿರಲಿಲ್ಲ. ಇಲ್ಲಿಗೆ ಬಂದಿದ್ದು ಆಕಸ್ಮಿಕ. ಬಾಲಿವುಡ್‌ ನಾನು ಇದುವರೆಗೂ ಕೆಲಸ ಮಾಡದಿರುವ ಮನರಂಜನಾ ಜಗತ್ತು’ ಎಂದು ತಮ್ಮ ಬಾಲಿವುಡ್‌ ಪಯಣದ ಕುರಿತು ಮಾತನಾಡುವ ಖಾನ್‌ ಅವರಿಗೆ ಎಲ್ಲಿ ಕೆಲಸ ಮಾಡುತ್ತಿದ್ದೇವೆ ಅನ್ನುವುದಕ್ಕಿಂತ ಎಷ್ಟು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇವೆ ಅನ್ನುವುದೇ ಮುಖ್ಯವಂತೆ.

‘‘ಬಾಲಿವುಡ್‌ ನನಗೆ ಇನ್ನೂ ಅಪರಿಚಿತವಾಗಿರುವುದರಿಂದಲೇ ಕೊಂಚ ಭಯವೂ ಇದೆ. ಆದರೆ ಒಬ್ಬ ಕಲಾವಿದ ಅವನ ಕೆಲಸ ಎಲ್ಲಿಗೆ ಕರೆದೊಯ್ಯುತ್ತದೆಯೋ ಅಲ್ಲಿಗೆ ಹೋಗುತ್ತಿರಬೇಕು. ನಾನು ‘ಖೂಬ್‌ಸೂರತ್‌’ ಚಿತ್ರದ ಭಾಗವಾಗಿರುವುದಕ್ಕೂ ಇದೇ ಕಾರಣ’’ ಎನ್ನುವುದು ಅವರ ವಿವರಣೆ.

ಮಹಿಳಾ ಕೇಂದ್ರಿತ ಚಿತ್ರವೊಂದರಲ್ಲಿ ನಟಿಸುತ್ತಿರುವುದಕ್ಕೆ ಫವಾದ್‌ ಅವರಿಗೆ ಬೇಸರವೇನೂ ಇಲ್ಲವಂತೆ. ಬದಲಿಗೆ ‘ಭಾರತ ಚಿತ್ರರಂಗದಲ್ಲಿ ಇದು ನನ್ನ ಮೊದಲ ಚಿತ್ರವಾದ್ದರಿಂದ ನಾನು ಸುರಕ್ಷಿತ ಹೆಜ್ಜೆಯನ್ನೇ ಇರಿಸಿದ್ದೇನೆ’ ಎಂಬ ವಿಶ್ವಾಸ ಅವರದು.

ಲಾಹೋರ್‌ನಲ್ಲಿ ಜನಿಸಿದ 32 ವರ್ಷದ ಫವಾದ್‌ ಖಾನ್‌ 14 ವರ್ಷಗಳ ಹಿಂದೆ ‘ದಸ್ತಾನ್‌’ ಎಂಬ ಪಾಕಿಸ್ತಾನಿ ಚಿತ್ರವೊಂದರ ಮೂಲಕ ತಮ್ಮ ಬಣ್ಣದ ಬದುಕನ್ನು ಆರಂಭಿಸಿದರು. ಅವರನ್ನು ಭಾರತ ಚಿತ್ರರಂಗಕ್ಕೆ ಪರಿಚಯಿಸುತ್ತಿರುವ ‘ಖೂಬ್‌ಸೂರತ್‌’ ಚಿತ್ರ 80ರ ದಶಕದಲ್ಲಿ ಇದೇ ಹೆಸರಲ್ಲಿ ತೆರೆಕಂಡ ಹಾಸ್ಯಚಿತ್ರವೊಂದರ ಮರು ಅವತರಣಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT