ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುಟ್ಕಾ ನಿಷೇಧದಿಂದ ಉತ್ತಮ ಪರಿಣಾಮ’

Last Updated 17 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಮಂಬೈ (ಪಿಟಿಐ): ಗುಟ್ಕಾ ಉತ್ಪನ್ನ­ಗಳ ಮೇಲೆ ನಿಷೇಧ ಹೇರಲು ರಾಜ್ಯ ಸರ್ಕಾರ­ಗಳು ಕಾನೂನು ರೂಪಿಸಿರು­ವು­ದರಿಂದ ಗುಟ್ಕಾ ಉತ್ಪಾ­ದನೆ ಕಡಿಮೆಯಾಗಿ ಅದರ ಸೇವನೆಯೂ ಇಳಿದಿದಿ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಹೇಳಿದೆ.

ಈ ಕುರಿತು ಅಸ್ಸಾಂ, ಬಿಹಾರ, ಗುಜ­ರಾತ್‌, ಕರ್ನಾಟಕ, ಮಧ್ಯ­ಪ್ರದೇಶ, ಮಹಾರಾಷ್ಟ್ರ, ಒಡಿಶಾ ರಾಜ್ಯ­ಗಳಲ್ಲಿ ವಿಶ್ವಸಂಸ್ಥೆ ಸಮೀಕ್ಷೆ ನಡೆ­ಸಿದ್ದು, ಶೇ 92ರಷ್ಟು ಜನ ಗುಟ್ಕಾ ಮಾರಾಟ ನಿಷೇಧ ಬೆಂಬಲಿ­ಸಿದ್ದಾರೆ.

ಗುಟ್ಕಾ ನಿಷೇಧಿ­ಸಿ­ರುವುದು ಭಾರತದ ಯುವಕರ ಆರೋಗ್ಯದ ದೃಷ್ಟಿಯಿಂದ ಉತ್ತಮ ಎಂಬುದನ್ನು ಶೇ 99ರಷ್ಟು ಜನ ಅಭಿಪ್ರಾಯ­ಪಟ್ಟಿ­ದ್ದಾರೆ ಎಂದು ಸಮೀಕ್ಷೆಯಿಂದ ಗೊತ್ತಾಗಿದೆ.

‘ಗುಟ್ಕಾ ನಿಷೇಧ ಅದರ ಸೇವನೆ ಕಡಿಮೆ ಮಾಡಲಿದೆ ಎನ್ನುವುದು ಸಂಶೋಧನೆಯಿಂದ ತಿಳಿದು ಬಂದಿದೆ’ ಎಂದು ಡಬ್ಲುಎಚ್‌ಒದ ಭಾರತದ ಪ್ರತಿನಿಧಿ ಡಾ. ನತಾ ಮಿನಾಬ್ದೆ  ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT