ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರಾಮದ ನೈರ್ಮಲ್ಯ ಗಮನಿಸಿ’

ತಾಲ್ಲೂಕು ಪಂಚಾಯ್ತಿ ತ್ರೈಮಾಸಿಕ ಸಭೆ
Last Updated 6 ಮಾರ್ಚ್ 2015, 7:21 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ 22 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ನೈರ್ಮಲ್ಯ,  ಕುರಿತಂತೆ ಆಯಾ ಗ್ರಾಮ ಪಂಚಾಯ್ತಿಗಳ ಪಿಡಿಓಗಳು ಗಮನ ಹರಿಸುವಂತೆ ಶಾಸಕ ಎಸ್. ಭೀಮಾನಾಯ್ಕ ಸೂಚಿಸಿದರು.

ತಾಲ್ಲೂಕು ಪಂಚಾಯ್ತಿಯಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಶೀಲನೆ ಸಭೆಯಲ್ಲಿ ಬುಧವಾರ ಅವರು ಮಾತನಾಡಿದರು. ತಾಲ್ಲೂಕಿನ ಮಗಿಮಾವಿನಹಳ್ಳಿ, ಹಲಗಾಪುರ , ರಾಯರಾಳು ತಾಂಡಾದಲ್ಲಿ ಚರಂಡಿಗಳಿಂದ ಜನರು ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಜಿ.ಪಂ.ಸದಸ್ಯ ರೋಗಾಣಿ ಹುಲುಗಪ್ಪ ಸಭೆಯ ಗಮನ ಸೆಳೆದಾಗ ಕೂಡಲೆ ಚರಂಡಿ ಸ್ವಚ್ಛತೆ, ತಿಪ್ಪೆಗುಂಡಿಗಳ ಸ್ಥಳಾಂತರ ಮತ್ತು ಕುಡಿವ ನೀರಿನ ಪೈಪ್‌ಲೈನ್‌ಗಳ ದುರಸ್ತಿ ಕೈಗೊಳ್ಳುವಂತೆ ಮರಬ್ಬಿಹಾಳು, ಹಲಗಾಪುರ ಪಿಡಿಓ ಗಳಿಗೆ ಆದೇಶಿಸಿದರು. ಪಿಂಜಾರ್ ಹೆಗ್ಡಾಳ್ ಗ್ರಾಮದಲ್ಲಿ  ೨೩ ಜನರು ಚಿಕೂನ್‌ಗುನ್ಯಾದಿಂದ ಬಳಲುತ್ತಿದ್ದು. ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ವೈದ್ಯಾಧಿಕಾರಿ ಡಾ.ಸುಲೋಚನಾ ತಿಳಿಸಿದರು.

ಚಿಂತ್ರಪಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇಂದಿರಾ ಆವಾಸ್ ವಸತಿ ಯೋಜನೆಯ ಫಲಾನುಭವಿಗಳನ್ನು ಗ್ರಾಮಸಭೆಯಲ್ಲಿ ಆಯ್ಕೆ ಮಾಡಿರುವ ಕುರಿತಂತೆ ಕೆಲ ಸದಸ್ಯರು ವಿರೋಧಿಸಿದ ಹಿನ್ನೆಲೆಯಲ್ಲಿ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಬೇಕು ಎಂದರು. ಈ ಕುರಿತಂತೆ ಮಾಹಿತಿ ಒದಗಿಸಲು ಪಿಡಿಓ ಪುಷ್ಪಲತಾ ಅವರಿಗೆ ಸೂಚಿಸಿದರು. ತಾ.ಪಂ.ಇಓ ಟಿ. ವೆಂಕೋಬಪ್ಪ, ಇತ್ತೀಚೆಗೆ ನಡೆದ ಗ್ರಾಮಸಭೆಯಲ್ಲಿ ಚೀಟಿ ಪ್ರಕ್ರಿಯೆ ನಡೆಸಲು ಹಲವು ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ೯೭ ಫಲಾನುಭವಿಗಳ ಆಯ್ಕೆಗೆ ೨೫೫ ಜನರು ಅರ್ಜಿ ಸಲ್ಲಿಸಿದ್ದಾರೆ ಎಂದರು. ವಟ್ಟಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆ ಕಟ್ಟಡ ನಿರ್ಮಾಣ ಕಳಪೆಯಾಗಿದ್ದು ಈ ಕುರಿತಂತೆ ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಶಾಸಕ ಹೇಳಿದರು.

ಹೊಳೆ ಮುತ್ಕೂರು ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿವೆ ಎಂದು ತಾ.ಪಂ. ತ್ರೈಮಾಸಿಕ ಸಭೆಯ ನಾಮ ನಿರ್ದೇಶಿತ ಸದಸ್ಯ ಅಕ್ಕಿ ತೋಟೇಶ್ ಹೇಳಿದರು. ಪಿಡಿಓ ಚೆನ್ನನಾಯ್ಕ, ಘಟಕದಿಂದ ಕೇವಲ ₨ ೩ಸಾವಿರ ಮಾತ್ರ ಸಂಗ್ರಹವಾಗುತ್ತಿದ್ದು, ನಿರ್ವಹಣೆಗೆ ಪ್ರತಿ ತಿಂಗಳು ₨೩.5 ಸಾವಿರ ನೀಡಬೇಕಿದೆ ಎಂದರು. ೧೩ನೇ ಹಣಕಾಸು ಯೋಜನೆಯಡಿ ನಿರ್ವಹಣೆ ಮಾಡುವಂತೆ ಶಾಸಕರು ಸೂಚಿಸಿದರು. ಇನ್ನು ೬೫ ಶುದ್ಧ ಕುಡಿವ ನೀರಿನ ಘಟಕಗಳನ್ನು ನಿರ್ಮಿಸಲಾಗುವುದು ಎಂದರು.
ಬನ್ನಿಗೋಳ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಬಿಸಿಯೂಟದಲ್ಲಿ ಹಲ್ಲಿಬಿದ್ದ ಪ್ರಕರಣ ಮರುಕಳಿಸದಂತೆ ಎಚ್ಚರಿಕೆವಹಿಸಬೇಕು ಎಂದು ಬಿಇಓ ಪಾರಿ ಬಸವರಾಜ ಅವರಿಗೆ ಸೂಚಿಸಿದರು. ಅಂಗನವಾಡಿ ಕೇಂದ್ರಗಳಿಗೆ ಪೂರೈಸಲಾಗುವ ಆಹಾರ ಕಳಪೆ ಇದೆ, ಈ ಕುರಿತಂತೆ ಸಿಡಿಪಿಓ ಎಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದರು.

ಜೈಲು ರುಚಿ ತೋರಿಸಬೇಕಾ?
ಏತ ನೀರಾವರಿ ಯೋಜನೆಗಳ ವಾರ್ಷಿಕ ನಿರ್ವಹಣೆಯಲ್ಲಿ ಶೇಕಡ ೫೦ರಷ್ಟು ಹಣ ಕೊಡಬೇಕು ಅಂತಾ ಕೇಳ್ತಿರಂತಲ್ರೀ? ಜೈಲು ರುಚಿ ತೋರಿಸಬೇಕೇನು? ಎಂದು ಸಣ್ಣ ನೀರಾವರಿ ಇಲಾಖೆಯ ಎಇ ಪರಮೇಶ್ವರಪ್ಪ ವಿರುದ್ಧ ಶಾಸಕ ಕಿಡಿಕಾರಿದರು. ₨ ೫.೯೪ ಕೋಟಿ ಬಿಡುಗಡೆಯಾಗಿದ್ದರೂ ನಿರ್ವಹಣೆ ಮೊತ್ತ ನೀಡಿಲ್ಲ ಏಕೆ ಎಂದು ಪ್ರಶ್ನಿಸಿ­ದರು. ಪ್ರತಿ ವರ್ಷ ಫೆಬ್ರುವರಿ, ಮಾರ್ಚ್ ತಿಂಗಳಲ್ಲಿ ನಿರ್ವಹಣೆ ಮೊತ್ತ ಬಿಡುಗಡೆ ಆಗುತ್ತಿದೆ ಎಂದು ಎಇ ಪ್ರತಿಕ್ರಿಯಿಸಿದರು.

ತಾಲ್ಲೂಕು ಪಂಚಾಯ್ತಿ ಸದಸ್ಯ ಉಪ್ಪಾರ ಬಾಲು, ಎಂ.ಎಂ. ಶಿವ­ಕುಮಾರ್, ನಾಮನಿರ್ದೇಶಿತ ಸದಸ್ಯ ಅಲಬೂರು ಮಂಜುನಾಥ, ದೇವೇಂದ್ರಪ್ಪ, ತಹಶೀಲ್ದಾರ್ ಆನಂದಪ್ಪ ನಾಯಕ, ಸಮಾಜ ಕಲ್ಯಾ­ಣಾ­ಧಿಕಾರಿ ದ್ಯಾಮಪ್ಪ, ತೋಟಗಾರಿಕೆ ಸಹಾಯಕ ನಿರ್ದೇಶಕ ಜಿ. ಪರಮೇಶ್ವರ್, ಜಿ.ಪಂ. ಎಇಇ ಆಂಜನೇಯ ಶೆಟ್ಟಿ, ಜೆಸ್ಕಾಂ ಶಾಖಾಧಿ­ಕಾರಿ ಹೇಮರೆಡ್ಡಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT