ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿತ್ರಗಳೇ ಮಾತಾಡುವಂತೆ ಮಾಡಿದ ಸಾಧಕ ವಿ.ಕೆ.ಮೂರ್ತಿ’

Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಅತ್ಯಂತ ಸೂಕ್ಷ್ಮ ವಿಧಾನಗಳ ಮೂಲಕ ಛಾಯಾಗ್ರಹಣಕ್ಕೆ ಶ್ರೀಮಂತ ಹಾಗೂ ಕಲಾತ್ಮಕ ಮೆರುಗನ್ನು ತಂದುಕೊಟ್ಟ ಹಿರಿಮೆ ವಿ.ಕೆ.ಮೂರ್ತಿ ಅವರಿಗೆ ಸಲ್ಲುತ್ತದೆ. ಅವರು ಚಿತ್ರಗಳೇ ಮಾತಾಡುವಂತೆ ಮಾಡಿದ್ದರು’ ಎಂದು ಹಿರಿಯ ಛಾಯಾಗ್ರಾಹಕ ಜಿ.ಎಸ್‌.ಭಾಸ್ಕರ್‌ ಬಣ್ಣಿಸಿದರು.

ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯ­ದಲ್ಲಿ ಶುಕ್ರವಾರ ನಡೆದ ‘ವಿ.ಕೆ.ಮೂರ್ತಿ ಅವರಿಗೆ ಒಂದು ಗೌರವ ಸಮರ್ಪಣೆ’ ಹಾಗೂ ವಿ.ಕೆ.ಮೂರ್ತಿ ಅವರ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನದಲ್ಲಿ ಅವರು ಮಾತನಾಡಿದರು.

‘ವಿ.ಕೆ.ಮೂರ್ತಿ ಅವರು ಪ್ರತಿ ಚಿತ್ರೀಕರಣದಲ್ಲಿಯೂ ದೃಶ್ಯವನ್ನು ಕಟ್ಟಿ­ಕೊಡಲು ಮಾಡುತ್ತಿದ್ದ ಪ್ರಯತ್ನ ಅನನ್ಯ­ವಾದುದು. ಪ್ರತಿ ಬಾರಿಯೂ ಅವರು ಹೊಸತನವನ್ನು ಹುಡುಕುತ್ತಿದ್ದರು. ಚಿತ್ರೀಕರಣದಲ್ಲಿ ಪ್ರಯೋಗ ಮಾಡುತ್ತಿ­ದ್ದರು. ಆ ಕುರಿತು  ಕೇಳಿದರೆ, ‘ಏನೋ ಸ್ಟಂಟ್‌ ಮಾಡ್ತೇವೆ’ ಎಂಬುದು ಅವರ ಸಾಮಾನ್ಯ ಡೈಲಾಗ್‌ ಆಗಿರುತ್ತಿತ್ತು’ ಎಂದರು.

‘ಬಾಜಿ, ಜಾಲ್, ಪ್ಯಾಸಾ, ಕಾಗಜ್‌ ಕಾ ಫೂಲ್‌, ಸಾಹಿಬ್‌, ಬಿವಿ ಔರ್‌ ಗುಲಾಮ್‌, 12 ಒ ಕ್ಲಾಕ್, ಜಿದ್ದಿ, ಲವ್ ಇನ್ ಟೋಕಿಯೋ ಇತ್ಯಾದಿ ಚಿತ್ರಗಳಲ್ಲಿ ಮೂಡಿಬಂದ ದೃಶ್ಯ ಕಾವ್ಯಗಳು ಮೂರ್ತಿ ಅವರ ಕಲಾಪ್ರೌಢಿಮೆಗೆ ಸಾಕ್ಷಿಯಾಗಿ ನಿಂತಿವೆ. ಗುರುದತ್ ಅವರ ಚಿತ್ರಗಳಿಗೆ ಕಲಾತ್ಮಕತೆ, ಕಾವ್ಯ ಗುಣ ದೊರೆಯು­ವಲ್ಲಿ ಮೂರ್ತಿಯವರ ಕೊಡುಗೆ ಅನುಪಮವಾದದ್ದು’ ಎಂದರು.

‘ಕಪ್ಪು ಬಿಳುಪಿನಲ್ಲಿ ತಯಾರಾದ ಚಿತ್ರಗಳಲ್ಲಿಯೂ ಮೂರ್ತಿ ಅವರ ಕ್ಯಾಮೆರಾ ಕೈಚಳಕವೇ ಪ್ರಧಾನ ಭೂಮಿಕೆಯನ್ನು ಪಡೆದುಕೊಂಡಿದೆ. ಅವರು ದೃಶ್ಯವನ್ನು ಚಿತ್ರೀಕರಿಸುವಲ್ಲಿ ಹೊರಹೊಮ್ಮಿಸಿದ ಪ್ರತಿಭಾವಂತಿಕೆ­ಯಿಂದ ಉಳಿದೆಲ್ಲ ಕ್ಯಾಮೆರಾಮನ್‌­ಗಳಿಗಿಂತ ಭಿನ್ನವಾಗಿ ಕಾಣುತ್ತಿದ್ದರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT