ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನರಿಗೆ ತಲುಪದ ಬರಹ ವ್ಯರ್ಥ’

Last Updated 18 ಡಿಸೆಂಬರ್ 2014, 20:16 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರತಿಯೊಬ್ಬ ಕೃಷಿ ತಜ್ಞರ  ಸಂಶೋಧನಾ ಬರಹಗಳನ್ನು ಪುಸ್ತಕ ರೂಪದಲ್ಲಿ ಮುದ್ರಿಸಿ ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ನಡೆಯಬೇಕು’ ಎಂದು ಸಾಹಿತಿ ಡಾ.ಕೋ.ಚೆನ್ನಬಸಪ್ಪ ಅಭಿಪ್ರಾಯಪಟ್ಟರು. ಕೃಷಿ ತಂತ್ರಜ್ಞರ ಸಂಸ್ಥೆ (ಐಎಟಿ) ನಗರದಲ್ಲಿ ಗುರುವಾರ ಆಯೋಜಿಸಿದ್ದ 46ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಬರಹ ಎಂದಿಗೂ ನಶಿಸಲಾರದು. ಅದರ ಮೂಲಕ ಮುಂದಿನ ಪೀಳಿಗೆಗೆ ಕೃಷಿ ತಜ್ಞರ ಮಹತ್ಕಾರ್ಯವನ್ನು ದಾಖಲಿಸಿಡುವ ಜತೆಗೆ ಜನರಿಗೆ ತಲುಪಿಸುವ ಕಾರ್ಯವನ್ನು ಸಂಸ್ಥೆ ಮಾಡಬೇಕು. ಜನಸಾಮಾನ್ಯರಿಗೆ ಅರ್ಥ­ವಾಗುವ ಸರಳ ಭಾಷೆಯಲ್ಲಿಯೇ ಕೃಷಿ ಸಂಬಂಧಿ ಆಕಾಶವಾಣಿ ಕಾರ್ಯ­ಕ್ರಮ ರೂಪಿಸಬೇಕು. ಪ್ರತಿಭಾವಂತ­ರನ್ನು ಗುರುತಿಸಿ ಗೌರವಿಸಬೇಕು’ ಎಂದು ಹೇಳಿದರು.

‘ಕೃಷಿ ವಿಜ್ಞಾನದಲ್ಲಿ ಮಹಿಳೆ­ಯ­ರಿಗೂ ಸಮನಾದ ಪಾಲು ದೊರೆಯ­ಬೇಕು. ಈ ಸಂಸ್ಥೆಯಲ್ಲಿರುವ ಎಲ್ಲರಲ್ಲಿ ಕಾಣುವ ಸಾಮರಸ್ಯ ಹೊರಗಡೆಯೂ ಕಾಣಿಸಿಕೊಳ್ಳಬೇಕು. ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡಿನ ಜನ­ರೊಂದಿಗೆ ಸಾಮರಸ್ಯದಿಂದ ಸಮಸ್ಯೆ­ಯನ್ನು ಬಗೆಹರಿಸುವ ಪ್ರಯತ್ನ ಮಾಡ­ಬೇಕು’ ಎಂದು ತಿಳಿಸಿದರು.

‘ಶೇ 80ರಷ್ಟು ಒಕ್ಕಲುತನ ಹೊಂದಿ­ರುವ ನಮ್ಮ ದೇಶದಲ್ಲಿ ಬಹು­ರಾಷ್ಟ್ರೀಯ ಕಂಪೆನಿಗಳು, ಭೂ ಬ್ಯಾಂಕ್‌-­ಗಳಿಂದಾಗಿ ಕೃಷಿ ಕಣ್ಮರೆ­ಯಾಗುತ್ತಿದೆ. ವಿದೇಶಿ ಉತ್ಪನ್ನಗಳ ಆಮದು ಹೆಚ್ಚು­ತ್ತಿದೆ. ಹಳ್ಳಿಯ ಜನರು ಉದ್ಯೋಗ ಅರಸಿ ಪಟ್ಟಣಗಳಿಗೆ ವಲಸೆ ಬರುತ್ತಿ­ದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಕೃಷಿ ತಜ್ಞರು ಜನರನ್ನು ಎಚ್ಚರಗೊಳಿಸ­ಬೇಕು’ ಎಂದರು. ಕಾರ್ಯಕ್ರಮದಲ್ಲಿ 47 ಜನ ಹಿರಿಯ ಕೃಷಿ ತಂತ್ರಜ್ಞರನ್ನು  ಸನ್ಮಾನಿಸಲಾಯಿತು.

ಕಂಬಳಕ್ಕೆ ತಡೆ ಬೇಡ
‘ದಕ್ಷಿಣ ಕನ್ನಡದಲ್ಲಿ ನಡೆಯುವ ಕಂಬಳವನ್ನು ಸುಪ್ರೀಂ ಕೋರ್ಟ್‌ ನಿಷೇಧಿಸಿರುವುದು ಸರಿಯಲ್ಲ. ಎಂದೋ ಒಂದು ಬಾರಿ ಕೋಣಕ್ಕೆ ಸ್ವಲ್ಪ ಹೊಡೆದರೆ ಅದು ಪ್ರಾಣಿ ಹಿಂಸೆ ಹೇಗಾಗುತ್ತದೆ’ ಎಂದು ಚೆನ್ನಬಸಪ್ಪ ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT