ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನಸಾಮಾನ್ಯ’ನ ಸೃಷ್ಟಿಕರ್ತ ಇನ್ನಿಲ್ಲ

Last Updated 26 ಜನವರಿ 2015, 19:51 IST
ಅಕ್ಷರ ಗಾತ್ರ

ಪುಣೆ (ಪಿಟಿಐ): ಖ್ಯಾತ ವ್ಯಂಗ್ಯಚಿತ್ರಕಾರ ಆರ್‌.ಕೆ. ಲಕ್ಷ್ಮಣ್‌ ಇಲ್ಲಿನ ದೀನಾನಾಥ್‌ ಮಂಗೇಶ್ಕರ್‌ ಆಸ್ಪತ್ರೆ­ಯಲ್ಲಿ ಸೋಮ­ವಾರ ಸಂಜೆ 6.50ರ ಹೊತ್ತಿಗೆ  ಕೊನೆ­ಯು­ಸಿರೆಳೆದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ಪತ್ನಿ ಕಮಲಾ (89), ನಿವೃತ್ತ ಪತ್ರಕರ್ತ ಮಗ ಶ್ರೀನಿವಾಸ್‌ ಹಾಗೂ ಸೊಸೆ ಉಷಾ ಅವರನ್ನು ಲಕ್ಷ್ಮಣ್‌ ಅಗಲಿ­ದ್ದಾರೆ.

ಮೂತ್ರ­ನಾಳದ ಸೋಂಕು ಹಾಗೂ ಶ್ವಾಸಕೋಶದ ತೊಂದರೆಯಿಂದ ಬಳಲು­ತ್ತಿದ್ದ ಅವರನ್ನು ಇದೇ 17 ರಂದು ಆಸ್ಪತ್ರೆಗೆ ಸೇರಿಸಲಾ­ಗಿತ್ತು. ಅಂಗಾಂಗ ವೈಫಲ್ಯದ ಕಾರಣ ಜೀವ­ರಕ್ಷಕ ಸಾಧನ ಅಳವಡಿಸ­ಲಾ­ಗಿತ್ತು.

ಶಾಲಾ ಶಿಕ್ಷಕ ಕೃಷ್ಣಸ್ವಾಮಿ ಅವರ ಮಗನಾಗಿದ್ದ ಲಕ್ಷ್ಮಣ್‌, ಮೈಸೂರಿನಲ್ಲಿ ಜನಿಸಿ­ದ್ದರು. ಪ್ರಖ್ಯಾತ ಇಂಗ್ಲಿಷ್‌ ಕಾದಂಬರಿಕಾರ  ದಿವಂಗತ ಆರ್‌.ಕೆ. ನಾರಾಯಣ್‌ ಅವರು, ಲಕ್ಷ್ಮಣ್‌ ಅವರ ಹಿರಿಯಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT