ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಲ ವಿವಾದ ಜೀವಂತ ಇಡುವ ಪ್ರಯತ್ನ’

Last Updated 3 ಅಕ್ಟೋಬರ್ 2015, 19:49 IST
ಅಕ್ಷರ ಗಾತ್ರ

ಶಿರಸಿ: ಕಳಸಾ– ಬಂಡೂರಿ ಯೋಜನೆ ನಿರ್ಮಾಣಕ್ಕೆ ಅಗತ್ಯವಿರುವ 228 ಹೆಕ್ಟೇರ್ ಅರಣ್ಯ ಭೂಮಿಯನ್ನು ರಾಜ್ಯಕ್ಕೆ ನೀಡಲು ಕೇಂದ್ರದ ಪರಿಸರ ಅರಣ್ಯ ಇಲಾಖೆ ದಶಕದ ಹಿಂದೆಯೇ ಒಪ್ಪಿಗೆ ನೀಡಿದೆ. ಆದರೆ ಈ ಮಾಹಿತಿಯನ್ನು ಬಚ್ಚಿಟ್ಟು ಜಲ ವಿವಾದವನ್ನು ಜೀವಂತ ಇಡುವ ಪ್ರಯತ್ನ ನಡೆದಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಎಚ್‌.ಕೆ. ಪಾಟೀಲ ಆರೋಪಿಸಿದರು.

ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರವು ತಾಲ್ಲೂಕಿನ ಕಳವೆಯ ಕಾನ್ಮನೆಯಲ್ಲಿ ಆಯೋಜಿಸಿರುವ ಎರಡು ದಿನಗಳ ಜಲ ವರ್ತಮಾನ ಹಾಗೂ ನಾಳಿನ ಭವಿಷ್ಯದ ಕುರಿತ ವಿಚಾರ ಗೋಷ್ಠಿಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. 2003 ಆಗಸ್ಟ್‌ 8ರಂದು ನಡೆದ ಅರಣ್ಯ ಸಲಹಾ ಸಮಿತಿ ಸಭೆಯಲ್ಲಿ ಈ ಅರಣ್ಯ ಭೂಮಿಯನ್ನು ಕರ್ನಾಟಕಕ್ಕೆ ಹಸ್ತಾಂತರಿಸುವ ಮಹತ್ವದ ನಿರ್ಣಯ ಸ್ವೀಕರಿಸಲಾಗಿದೆ.

ಈ ಬಚ್ಚಿಟ್ಟ ಮಾಹಿತಿಯು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಬಹಿರಂಗಗೊಂಡಿದ್ದು, ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು. 

‘ಕರ್ನಾಟಕಕ್ಕೆ ಸಂಬಂಧಿಸಿದ ಜಲ ವಿವಾದಗಳನ್ನು ಜೀವಂತವಾಗಿರಿಸುವ ಪ್ರಯತ್ನಗಳು ಹಲವಾರು ಕಾರಣಗಳಿಂದ ನಡೆಯುತ್ತಿವೆ. ಕೃಷ್ಣಾ ಜಲವಿವಾದ ಮುಗಿದ ನಂತರವೂ ಒಂದಿಲ್ಲೊಂದು ನದಿ ನೀರಿನ ವಿವಾದ ಮೇಲೇಳುತ್ತಿದೆ. ಅಂತರ ರಾಜ್ಯ ಜಲ ವಿವಾದದಿಂದ ಬಹು ಚರ್ಚಿತ ಮಹಾದಾಯಿ ನದಿಯ 200 ಟಿಎಂಸಿ ಅಡಿ ನೀರು ವ್ಯರ್ಥವಾಗಿ ಸಮುದ್ರಕ್ಕೆ ಸೇರುತ್ತಿದೆ. ಮಹಾದಾಯಿ ತಿರುವು ಯೋಜನೆ ಸೇರಿದಂತೆ ಪಶ್ಚಿಮ ದಿಕ್ಕಿನಲ್ಲಿ ಹರಿಯುವ ನೀರಿನ ಕೆಲ ಭಾಗವನ್ನು ಪೂರ್ವಾಭಿಮುಖವಾಗಿ ಹರಿಸಿದರೆ ಕನ್ನಡ ನಾಡಿನ ಜಲ ಕೊರತೆಗೆ ಶಾಶ್ವತ ಪರಿಹಾರ ಸಿಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT