ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟಿಎಂಸಿ ಮೇಲೆ ಕೇಂದ್ರದ ಕೆಂಗಣ್ಣು’

Last Updated 22 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಕೋಲ್ಕತ್ತಾ (ಐಎಎನ್‌ಎಸ್): ಶಾರದಾ ಚಿಟ್ ಫಂಡ್ ಹಗರಣದಲ್ಲಿ ಭಾಗಿ­­ಯಾದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ ಸಂಸದ ಸೃಂಜಯ್ ಬೋಸ್ ಅವರನ್ನು ಸಿಬಿಐ ಬಂಧಿಸಿರುವ ಬಗ್ಗೆ ಪಕ್ಷದ ಮುಖ್ಯಸ್ಥೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಅಸಮಾಧಾನ ವ್ಯಕ್ತ­ಪಡಿಸಿದ್ದಾರೆ.

‘ಕೇಂದ್ರ ಸರ್ಕಾರ ಪಕ್ಷಭೇದ ತೋರುತ್ತಿದೆ. ಜಾತ್ಯತೀತ ಪಕ್ಷಗಳ ಸಮ್ಮೇ­ಳನದಲ್ಲಿ ಭಾಗವಹಿಸಿದ್ದರ ವಿರುದ್ಧ ಸೇಡು ತೀರಿಸಿಕೊಳ್ಳಲು ನಮ್ಮ ಪಕ್ಷದವ­ರನ್ನು ಬಂಧಿಸಿದ್ದಾರೆ. ನಮ್ಮ ಪಕ್ಷ­ವನ್ನು ಹತ್ತಿಕ್ಕಲು ಬಿಜೆಪಿ ಪ್ರಯತ್ನಿ­ಸಿ­ದರೆ, ನಾವೂ ಪ್ರತೀಕಾರ ತೀರಿಸಿಕೊಳ್ಳುತ್ತೇವೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

‘ನಮ್ಮತ್ತ ಕೆಂಗಣ್ಣು ಬೀರಲು ಬರ­ಬೇಡಿ. ನಾವು ನಿಮ್ಮನ್ನು ಅವ­ಲಂಬಿ­ಸಿಲ್ಲ. ಹೆದರಿಕೆಯಿಂದ ಸೋನಿಯಾ ಗಾಂಧಿ ಅವರಂತಹ ಮುಖಂಡರು ಈ ಬಗ್ಗೆ ಪ್ರತಿಕ್ರಿಯಿ­ಸದೆ ಸುಮ್ಮನ್ನಿದ್ದಾರೆ. ಆದರೆ ನನಗೆ ಯಾವ ಭಯವೂ ಇಲ್ಲ, ನಾನು ಸುಮ್ಮನಿರುವುದೂ ಇಲ್ಲ. ಇದನ್ನು ವಿರೋಧಿಸಿ ನವೆಂಬರ್‌ 24ರಂದು ರ್‌್ಯಾಲಿ ಹಮ್ಮಿಕೊಂಡಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸ ಕುರಿತು ಟೀಕಿ­ಸಿದ ಮಮತಾ ಬ್ಯಾನರ್ಜಿ, ‘ದೇಶದ ಆಡಳಿತ ವಹಿಸಿಕೊಂಡಿರುವ ವ್ಯಕ್ತಿ ದೇಶ­ದೊಳಗೆ, ದೇಶದ ಜನ­ರೊಂ­ದಿಗೆ ಎಷ್ಟು ಸಮಯ ಕಳೆದಿದ್ದಾರೆ? ಅವರ ವಿರುದ್ಧವೇ ಹಲವು ಗಲಭೆಗಳಿಗೆ ಕಾರಣರಾದ ಬಗ್ಗೆ ಆರೋಪ­ವಿದೆ. ಹಾಗಿದ್ದಾಗ ನಮ್ಮೆಡೆಗೆ ಹೇಗೆ ಬೆರಳು ತೋರಿಸುತ್ತಾರೆ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT