ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಿಜಿಟಲ್ ಇಂಡಿಯಾ’ ಸಪ್ತಾಹಕ್ಕೆ ಚಾಲನೆ

Last Updated 4 ಜುಲೈ 2015, 10:10 IST
ಅಕ್ಷರ ಗಾತ್ರ

ದೇವನಹಳ್ಳಿ: ಪಟ್ಟಣದ ಮಿನಿವಿಧಾನಸೌಧ ಆವರಣದಲ್ಲಿ ಡಿಜಿಟಲ್ ಇಂಡಿಯಾ ಜಾಗೃತಿ ಬೀದಿನಾಟಕಕ್ಕೆ ತಹಶೀಲ್ದಾರ್ ಕೇಶವಮೂರ್ತಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಡಿಜಿಟಲ್ ಇಂಡಿಯಾ ಇಡಿ ದೇಶದಲ್ಲಿ ಸಮಗ್ರವಾಗಿ ಜಾರಿಯಾಗುವ ನಿಟ್ಟಿನಲ್ಲಿ ಕ್ರಮ ಕೈಗೊಂಡು ಪ್ರತಿ ತಾಲ್ಲೂಕಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಪ್ತಾಹ ಇದಾಗಿದೆ, ಅಧಾರ್ ಕಾರ್ಡ್, ಪದವಿ ಪ್ರಮಾಣ ಪತ್ರ, ಚಾಲನೆ ಪರವಾನಗಿ, ವಿದ್ಯುಚ್ಛಕ್ತಿ ಬಿಲ್‌, ಸರ್ಕಾರದ ಗುರುತಿನ ಚೀಟಿ, ವಾಸಸ್ಥಳ ಧೃಡಿಕರಣ ಪತ್ರ, ಮನೆಬಾಡಿಗೆ ರಸೀದಿ, ದೂರವಾಣಿ ಬಿಲ್‌, ನೀರಿನ ಬಿಲ್‌, ಚುನಾವಣೆ ಗುರುತಿನ ಚೀಟಿ ಸೇರಿದಂತೆ ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆಯ ಸಮಗ್ರ ಮಾಹಿತಿ ಅಂತರ್ಜಾಲ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳುವುದು ಮತ್ತು ಅಗತ್ಯ ಸಮಯದಲ್ಲಿ ಮಾಹಿತಿ ಪಡೆದುಕೊಳ್ಳವುದು ಇದರ ಉದ್ದೇಶವಾಗಿದೆ.

ಮಾಹಿತಿ ತಂತ್ರಜ್ಞಾನ ಪ್ರತಿಯೊಬ್ಬರಿಗೂ ಅವಶ್ಯಕತೆ ಇದೆ., ವಿವಿಧ ಇಲಾಖೆಯಲ್ಲಿ ಲಭ್ಯವಿರುವ ಯೋಜನೆ ಮತ್ತು ಸೇವಗಳು ಗ್ರಾಮೀಣ ಜನತೆಗೆ ತಿಳಿಯ ಬೇಕೆಂಬ ಉದ್ದೇಶ ಡಿಜಿಟಲ್ ಇಂಡಿಯಾ ಸಪ್ತಾಹ ಮೂಲಕ ತಿಳುವಳಿಕೆ ನೀಡಬೇಕಾಗಿದೆ ಇದರಿಂದ ತಾಲ್ಲೂಕು ಅಡಳಿತ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ 15 ಕಲಾವಿದರ ತಂಡ ಈ ಬಿದಿನಾಟಕದಲ್ಲಿ ಪಾಲ್ಗೊಂಡಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT