ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೃತೀಯ ಲಿಂಗ’ಕ್ಕೆ ಮಾನ್ಯತೆ

Last Updated 20 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಸಲಿಂಗಕಾಮದ ಮೇಲೆ ಡಿಸೆಂಬರ್‌ ತಿಂಗಳಿನಲ್ಲಿ ನಿಷೇಧ ಹೇರಿ ಮಾನವ ಹಕ್ಕುಗಳ ಕಾರ್ಯಕರ್ತ­ರಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಸುಪ್ರೀಂ ಕೋರ್ಟ್‌, ಈಗ ನಪುಂಸಕರಿಗೆ ‘ತೃತೀಯ ಲಿಂಗ’ದವರು ಎಂದು ಮಾನ್ಯತೆ ನೀಡಿದೆ. ಅತ್ತ ಪುರುಷರೂ ಅಲ್ಲದ ಇತ್ತ ಸ್ತ್ರೀಯರೂ ಅಲ್ಲದ ನಪುಂಸಕರ ಬಗ್ಗೆ ಸುಪ್ರೀಂಕೋರ್ಟ್ ಹೊಸ ತೀರ್ಮಾನಕ್ಕೆ ಬಂದಿದ್ದು, ಅವರಿಗೆ ‘ತೃತೀಯ ಲಿಂಗ’ದವರು ಎನ್ನುವ ಕಾನೂನು ಮನ್ನಣೆಯನ್ನೂ ನೀಡಿದೆ.

ಮಾನವ ಹಕ್ಕುಗಳ ಸಂಘಟನೆಗಳು ಈ ಐತಿಹಾಸಿಕ ತೀರ್ಪನ್ನು ಶ್ಲಾಘಿಸಿದ್ದು, ’ತೃತೀಯ ಲಿಂಗ’ದವ­ರನ್ನೂ ಎಲ್ಲೆಡೆ ಅನ್ಯ ಲಿಂಗದವರಂತೆ (ಸ್ತ್ರೀ – ಪುರುಷ) ಪರಿಗಣಿಸಲು ಒತ್ತಾಯಿಸಿವೆ.

ಮಾನವ ಹಕ್ಕು ವಿಷಯ
ನಪುಂಸಕರನ್ನು ‘ತೃತೀಯ ಲಿಂಗ’­ದವರು ಎಂದು ಮಾನ್ಯತೆ ನೀಡುವುದು ಸಾಮಾಜಿಕ ಅಥವಾ ವೈದ್ಯಕೀಯ ವಿಷಯವಾಗಿಲ್ಲ. ಬದಲಿಗೆ ಅದೊಂದು ಮಾನವ ಹಕ್ಕು ವಿಷಯವಾಗಿದೆ ಎಂದು ಕೋರ್ಟ್‌ನ ದ್ವಿಸದಸ್ಯ ಪೀಠ ಸ್ಪಷ್ಟಪಡಿಸಿದೆ.

ಹಕ್ಕೊತ್ತಾಯ
ನಪುಂಸಕರ ಹಲವು ಸಂಘಟನೆ ಗಳು ತಮಗೂ ಮಾನ್ಯತೆ ನೀಡಬೇಕು, ಸಮಾನ ಹಕ್ಕುಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿ ಕೋರ್ಟ್‌ಗೆ ಮನವಿ ಸಲ್ಲಿಸಿದ್ದವು. ಜನ್ಮ ಪ್ರಮಾಣ ಪತ್ರ, ಪಾಸ್‌­ಪೋರ್ಟ್‌, ವಾಹನ ಚಾಲನಾ ಪತ್ರಗ­ಳಲ್ಲಿ ಸ್ತ್ರೀ – ಪುರುಷ ಲಿಂಗಗಳನ್ನು ಗುರುತಿಸುವಂತೆ ತಮ್ಮನ್ನೂ ಪ್ರತ್ಯೇಕ­ವಾಗಿ ಗುರುತಿಸ­ಬೇಕು ಎಂದು ಈ ಸಂಘಟನೆ­ಗಳು ಹಕ್ಕೊತ್ತಾಯ ಮಂಡಿಸಿದ್ದವು.

ಸರ್ಕಾರಿ ಸ್ವಾಮ್ಯದ ಉದ್ಯೋಗ ಅವಕಾಶ, ಶಾಲೆ – ಕಾಲೇಜುಗಳ ಪ್ರವೇಶದಲ್ಲೂ ಸೂಕ್ತ ಮೀಸಲಾತಿ  ಕಲ್ಪಿಸಬೇಕು ಎನ್ನುವ ಬೇಡಿಕೆಗೂ ಪೀಠ ಸಮ್ಮತಿ ನೀಡಿದೆ.

ವ್ಯಾಖ್ಯಾನ
ಈ `ತೃತೀಯ ಲಿಂಗ'ದವರ ಬಗ್ಗೆ ನಿರ್ದಿಷ್ಟ ವ್ಯಾಖ್ಯೆ ನೀಡಲು ಸಾಧ್ಯವಿಲ್ಲ. ‘ತೃತೀಯ ಲಿಂಗ’ದವರ  (Transg­ender) ಬಗೆಗಿನ ಹೊಸ ವ್ಯಾಖ್ಯಾನವು ಇವರು ತಮ್ಮ ಜನ್ಮದ ಜತೆಯಲ್ಲಿಯೇ ಹೊಂದಿದ ಲಿಂಗವನ್ನು ಸ್ಪಷ್ಟಪಡಿ­ಸುವುದಿಲ್ಲ.

ವ್ಯಕ್ತಿಯನ್ನು ಸ್ತ್ರೀ ಅಥವಾ ಪುರುಷ ಎಂದು ಗುರುತಿಸುವುದು ಆತ ಅಥವಾ ಆಕೆಯ ಆಂತರಿಕ ಪ್ರಜ್ಞೆ ಆತ ಅಥವಾ ಆಕೆಯನ್ನು ಏನೆಂದು ಪರಿಗಣಿಸುತ್ತದೆ ಎನ್ನುವುದನ್ನು ಆಧರಿಸಿರುತ್ತದೆ.

ತನ್ನ ವರ್ತನೆ ಮೂಲಕ ಆತ / ಆಕೆ, ಇತರರ ಜತೆ ಹೇಗೆ ವರ್ತಿಸುತ್ತಾನೆ/ಳೆ, ಕೇಶ ವಿನ್ಯಾಸ ಹೇಗಿದೆ, ಧ್ವನಿ ಹೇಗಿದೆ, ವರ್ತನೆ, ಧರಿಸುವ ಬಟ್ಟೆ ಬಗೆಗಿನ ಒಲವು  ಏನು ಇದೆ ಎನ್ನುವುದನ್ನು ಆಧರಿಸಿ ಪುರುಷ, ಸ್ತ್ರೀ ಅಥವಾ ಎರಡೂ ಅಲ್ಲದ ನಪುಂಸಕ ಎಂದು  ಗುರುತಿಸಲಾಗುತ್ತದೆ. ನಪುಂಸಕತ್ವ ಜೈವಿಕ, ಹಾರ್ಮೋನ್ ವ್ಯತ್ಯಾಸ, ಲಿಂಗ ವ್ಯತ್ಯಾಸ, ಮಾನಸಿಕ ಕಾರಣಗಳಿಂದ ಉಂಟಾಗಿರುತ್ತದೆ.

ಹಲವು ಬಗೆ ‘ತೃತೀಯ ಲಿಂಗ’ದವರನ್ನು, ಹೆಣ್ಣು ವೇಷ ಧರಿಸಲು ಬಯಸು­ವವನು, ಅನ್ಯ ಲಿಂಗ ವೇಷ ಧಾರಣೆ (ಹೆಣ್ಣು ಗಂಡಿನ ಹಾಗೆ, ಗಂಡು ಹೆಣ್ಣಿನ ಹಾಗೆ),  ತಮ್ಮ ಲಿಂಗದ ಬಗ್ಗೆಯೇ ಗೊಂದಲ ಹೊಂದಿ­ರುವ ಕೆಲವರು ಸ್ತ್ರೀ ಅಥವಾ ಪುರುಷ­ರಿಂದ ಲೈಂಗಿಕವಾಗಿ ಆಕರ್ಷಿತ­ನಾಗುವ ಅಥವಾ ಆಕರ್ಷಿಕಳಾಗು­ವವರು ಹೀಗೆ ‘ತೃತೀಯ ಲಿಂಗ’ದವರನ್ನು ಐದಾರು ಬಗೆಯಲ್ಲಿ ಗುರುತಿಸ­ಲಾಗುತ್ತದೆ.

ಜನಸಂಖ್ಯೆ ದೇಶದ ಒಟ್ಟು ಜನಸಂಖ್ಯೆಯಲ್ಲಿ 10 ಲಕ್ಷಕ್ಕೂ ಹೆಚ್ಚು ‘ತೃತೀಯ ಲಿಂಗ’ದವರು ಇದ್ದಾರೆ ಎನ್ನುವ ಅಂದಾಜು ಇದೆ.  40 ಸಾವಿರ ಜನ­ರಲ್ಲಿ ಒಬ್ಬರು ಅಥವಾ ಒಂದು ಲಕ್ಷ ಜನ­ರಲ್ಲಿ ಒಬ್ಬರು ‘ತೃತೀಯ ಲಿಂಗ’­ದವರು ಇರುವ ಅಂದಾಜು ಇದೆ. ಈ ಸಂಖ್ಯೆಯು ಅವರನ್ನುಹೇಗೆ ವ್ಯಾಖ್ಯಾನಿ­ಸಲಾಗುತ್ತಿದೆ ಎನ್ನುವುದನ್ನೂ ಆಧರಿಸಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT