ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಲಿತರ ಮನೆಯಲ್ಲಿ ರಾಹುಲ್‌ ಮಧುಚಂದ್ರ’

Last Updated 25 ಏಪ್ರಿಲ್ 2014, 20:04 IST
ಅಕ್ಷರ ಗಾತ್ರ

ಲಖನೌ (ಪಿಟಿಐ): ‘ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಮಧುಚಂದ್ರ ಹಾಗೂ ಪಿಕ್‌ನಿಕ್‌ಗೂ ದಲಿತರ ಮನೆಗೆ ಹೋಗುತ್ತಾರೆ’ ಎಂದು ಹೇಳುವ ಮೂಲಕ ಯೋಗ ಗುರು ಬಾಬಾ ರಾಮದೇವ್‌ ಇನ್ನೊಂದು ವಿವಾದ ಸೃಷ್ಟಿಸಿದ್ದಾರೆ.

‘ರಾಹುಲ್‌ ದಲಿತ ಯುವತಿಯನ್ನು ಮದುವೆಯಾಗಿದ್ದರೆ ಅವರ ಅದೃಷ್ಟ ಖುಲಾಯಿಸುತ್ತಿತ್ತು ಮತ್ತು ಈ ದೇಶ ಪ್ರಧಾನಿಯೂ ಆಗುತ್ತಿದ್ದರೇನೋ’ ಎಂದು ಅವರು ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.

‘ರಾಮದೇವ್‌ ಅಥವಾ ನರೇಂದ್ರ ಮೋದಿ ರಾಹುಲ್‌ ತರಹ ಒತ್ತಡಕ್ಕೆ ಒಳಗಾಗಿ ಅವಿ­ವಾಹಿತರಾಗಿ ಉಳಿದಿಲ್ಲ. ಉಸ್‌ ಬೆಚಾರೆ ಕಿ ಭಿ ಕಿಸ್ಮತ್‌ ಖರಾಬ್‌  ಹೈ (ರಾಹುಲ್‌ಗೆ ಅದೃಷ್ಟ ಇಲ್ಲ) ಎಂದೂ ರಾಮದೇವ್‌ ವ್ಯಂಗ್ಯವಾಡಿದರು.

‘ನೀನು ವಿದೇಶಿ ಹುಡುಗಿಯನ್ನು ಮದುವೆ­ಯಾದರೆ ಈ ದೇಶದ ಪ್ರಧಾನಿ­ಯಾಗಲು ಸಾಧ್ಯವಿಲ್ಲ. ಮೊದಲು ಪ್ರಧಾನಿಯಾಗು, ನಂತರ ವಿದೇಶಿ ಹುಡುಗಿಯನ್ನು ಮದುವೆಯಾಗು ಎಂದು ರಾಹುಲ್‌ ಅಮ್ಮ  ಹೇಳು­ತ್ತಾರೆ. ಆದರೆ ಈ ಹುಡುಗನಿಗೆ ಭಾರತದ ಯುವತಿಯನ್ನು ಮದುವೆ­ಯಾಗಲು ಇಷ್ಟ ಇಲ್ಲ’ ಎಂದೂ  ಅವರು ಲೇವಡಿ ಮಾಡಿದರು.

ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು ಗೊತ್ತಾಗಿದ್ದೇ ತಡ ರಾಮದೇವ್‌,   ‘ಕೆಟ್ಟ ಭಾವನೆಯಿಂದ ಆ ಮಾತು ಆಡಿಲ್ಲ, ದಲಿತರಿಗೆ ನೋವಾದರೆ ಹೇಳಿಕೆಯನ್ನು ವಾಪಸ್‌ ಪಡೆಯುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT