ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಾಂಪತ್ಯ ಕಲಹ ಬಡ್ತಿಗೆ ಅಡ್ಡಿಯಾಗದು’

Last Updated 26 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಪತಿ – ಪತ್ನಿ ನಡುವಣ ಕೌಟುಂಬಿಕ ಕಲಹ ಉದ್ಯೋಗಿಯು ಬಡ್ತಿ  ಪಡೆ­ಯುವುದಕ್ಕೆ ಅಡ್ಡಿಯಾಗದು ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ. ಚೆನ್ನೈನಲ್ಲಿರುವ ತಮಿಳುನಾಡು ಉತ್ಪಾದನೆ ಮತ್ತು ವಿತರಣೆ ನಿಗಮ (ಟಿಎಎನ್‌­ಜಿಇಡಿಸಿಓ)­ದ ಅಡಿಟ್‌ ವಿಭಾಗದಲ್ಲಿ ಸಹಾಯಕ ಲೆಕ್ಕಪರಿಶೋಧಕ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಎ. ವೆಲುಸ್ವಾಮಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ. ಹರಿಪರಂಥಮನ್‌ ಈ ಆದೇಶ ನೀಡಿದ್ದಾರೆ.

ಆಂತರಿಕ ಲೆಕ್ಕ ಪರಿಶೋಧಕ ಹುದ್ದೆಯ ಬಡ್ತಿಗೆ ತನ್ನ ಹೆಸರನ್ನೂ ಪರಿಗಣಿಸುವಂತೆ ನಿರ್ದೇಶನ ನೀಡಬೇಕು ಎಂದು ವೆಲುಸ್ವಾಮಿ ಅರ್ಜಿಯಲ್ಲಿ ಮನವಿ ಮಾಡಿದ್ದರು. ‘ಮದುವೆಗೆ ಸಂಬಂಧಿಸಿದಂತೆ ಅರ್ಜಿ­ದಾರ ಮತ್ತು ಆತನ ಪತ್ನಿಯ ಮಧ್ಯೆ ಕೌಟುಂಬಿಕ ಕಲಹ ಇದ್ದರೆ. ಇದು ಅರ್ಜಿದಾರನ ಬಡ್ತಿಗೆ ಅಡ್ಡಿಯಾ­ಗುವುದಿಲ್ಲ. ದ್ವಿಪತ್ನಿತ್ವ ವಿಷಯಕ್ಕೆ ಸಂಬಂ­ಧಿ­ಸಿದ ದೂರಿನ ವಿಚಾರಣೆ ಬಾಕಿ­ ಇದ್ದರೂ ಬಡ್ತಿಗೆ ಅದು ಅನ್ವಯ­ವಾಗುವುದಿಲ್ಲ’ ಎಂದು ನ್ಯಾಯ­ಮೂರ್ತಿ­ಆದೇಶದಲ್ಲಿ ತಿಳಿಸಿದ್ದಾರೆ.

ವೆಲುಸ್ವಾಮಿ ಎರಡನೇ ಮದುವೆ ಮಾಡಿಕೊಂಡಿದ್ದು, ಅವರ ಹೆಸರನ್ನು ಬಡ್ತಿಗೆ ಪರಿಗಣಿಸದಂತೆ ನಿರ್ದೇಶನ ನೀಡಬೇಕು ಎಂದು ಕೋರಿ ವೇಲುಸ್ವಾಮಿ ಮೊದಲ ಪತ್ನಿ ನ್ಯಾಯಾಲಯದ ಮೊರೆ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT