ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದುರಂತ ತಡೆಗೆ ಸುರಕ್ಷತಾ ಕ್ರಮ’

Last Updated 19 ಮೇ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ):  ಭವಿಷ್ಯ­ದಲ್ಲಿ ನೌಕಾ ಪಡೆಯಲ್ಲಿ ಸಂಭವಿಸಬಹು­ದಾದ ಅನಾ­ಹುತ­ಗಳನ್ನು ತಪ್ಪಿಸಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳ­ಲಾಗಿದೆ ಎಂದು ಭಾರತೀಯ ನೌಕಾ­ಪಡೆ ಮುಖ್ಯಸ್ಥ ಅಡ್ಮಿರಲ್‌ ಆರ್‌.ಕೆ. ಧವನ್‌ ಹೇಳಿದರು.

ಇತ್ತೀಚೆಗೆ ನಡೆದಿರುವ ಎಲ್ಲಾ ದುರಂ­ತ­ಗಳನ್ನು ಕೂಲಂಕಷವಾಗಿ ವಿಶ್ಲೇ­ಷಿ­ಸ­ಲಾ­ಗಿದೆ. ನೌಕಾ ಪಡೆಯು ಎಲ್ಲಾ ರೀತಿಯ ಕಾರ್ಯ­­ನಿರ್ವಹಣಾ ಮಾನ­ದಂಡ­ ಪಾಲಿಸುತ್ತಿದೆ ಎಂದರು.

‘ಈಚೆಗೆ ಸಂಭವಿಸಿದ ದುರ್ಘಟನೆ­ಗಳ ಪ್ರತಿ ಹಂತವನ್ನೂ ಸೂಕ್ಷ್ಮವಾಗಿ ವಿಶ್ಲೇಷಿಸ­ಲಾಗಿದೆ. ಸುರಕ್ಷತೆ ಬಗ್ಗೆ ನಿಗಾ ಇಡಲು ಪರಿಶೋಧನಾ ಸಂಸ್ಥೆ­ಯನ್ನೂ ಸ್ಥಾಪಿಸ­ಲಾಗಿದೆ’ ಎಂದು ಧವನ್‌ ತಿಳಿಸಿದರು.

ದುರ್ಘಟನೆಗಳ ತನಿಖಾ ಪ್ರಗತಿ ಬಗ್ಗೆ ಕೇಳಿದ್ದಕ್ಕೆ, ‘ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ಜಾರಿಗೊಳಿಸಬೇಕು ಎಂಬ ದೃಢ ನಿರ್ಧಾರವನ್ನು ತನಿಖೆ ಮುಗಿ­ಯು­ವುದಕ್ಕೂ ಮುನ್ನವೇ ನಾವು ಕೈ­ಗೊಂ­ಡಿದ್ದೆವು’ ಎಂದು ಧವನ್‌ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT