ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಡೋಜ’ ಗೌರವಕ್ಕೆ ಮೂವರ ಆಯ್ಕೆ

Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಹೊಸಪೇಟೆ: ‘ಈ ಬಾರಿ ‘ನಾಡೋಜ’ ಗೌರವಕ್ಕೆ ಕಲಬುರ್ಗಿಯ ವೈದ್ಯ ಸಾಹಿತಿ ಡಾ.ಪಿ.ಎಸ್‌. ಶಂಕರ್‌, ಸಾಹಿತಿ ಹಾಗೂ ಕಲಾ ವಿಮರ್ಶಕ ಬೆಂಗಳೂ­ರಿನ ಪ್ರೊ.ಎಂ.ಎಚ್‌. ಕೃಷ್ಣಯ್ಯ, ಸಾಹಿತಿ, ಪತ್ರಕರ್ತ ಎಸ್‌.ಆರ್‌. ರಾಮ­ಸ್ವಾಮಿ ಅವರನ್ನು ಆಯ್ಕೆ ಮಾಡಲಾ­ಗಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾ­ಲ­ಯದ ಕುಲಪತಿ ಪ್ರೊ ಹಿ.ಚಿ. ಬೋರ­ಲಿಂಗಯ್ಯ ಸೋಮವಾರ ಪತ್ರಿಕಾ­ಗೋಷ್ಠಿಯಲ್ಲಿ ತಿಳಿಸಿದರು.

‘ಇದೇ 6ರಂದು ಸಂಜೆ ವಿಶ್ವವಿದ್ಯಾ­ಲ­ಯದ ‘ನವರಂಗ’ ಬಯಲು ರಂಗ­ಮಂದಿ­­ರದಲ್ಲಿ ನಡೆಯಲಿರುವ ನುಡಿ­ಹಬ್ಬ (ಘಟಿ­ಕೋ­ತ್ಸವ) ಸಮಾ­ರಂಭ­ದಲ್ಲಿ ರಾಜ್ಯ­ಪಾಲ ವಜು­ಭಾಯಿ ವಾಲಾ ಅವರು  ನಾಡೋಜ ಪ್ರದಾನ ಮಾಡಲಿ­ದ್ದಾರೆ’ ಎಂದರು. ‘ವಿಶ್ರಾಂತ ಕುಲಪತಿ ಚಿದಾನಂದ­ಗೌಡ  ನೇತೃತ್ವದ ಸಮಿತಿ ‘ನಾಡೋಜ’ ಗಣ್ಯರ ಪಟ್ಟಿಯನ್ನು ಅಂತಿಮ­ಗೊಳಿಸಿತ್ತು.

ಈ ಪಟ್ಟಿಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ಆಯಾ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ಗುರುತಿಸಿ ಗೌರವ ಪದವಿ ಪ್ರದಾನ ಮಾಡಲು ವಿಶ್ವ­ವಿದ್ಯಾಲಯದ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ’ ಎಂದು ಹೇಳಿದರು. ‘ಅಂಕಣಕಾರ, ನವದೆಹಲಿಯ ಜವಾಹರ­ಲಾಲ್‌ ನೆಹರೂ ವಿಶ್ವವಿದ್ಯಾ­ಲಯದ ಪ್ರಾಧ್ಯಾಪಕ ಪ್ರೊ.ಎಚ್‌.ಎಸ್‌.­ಶಿವಪ್ರಕಾಶ್‌ ನುಡಿಹಬ್ಬ ಭಾಷಣ ಮಾಡಲಿದ್ದಾರೆ’ ಎಂದು  ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT