ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನಾ ಜತೆ ನಟಿಸಲು ಅದೃಷ್ಟ ಬೇಕು’

Last Updated 20 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ನಾನಾ ಪಾಟೇಕರ್‌ ಅವರಂತಹ ಮೇರು ನಟರೊಂದಿಗೆ ನಟಿಸುವ ಅದೃಷ್ಟ ತಮ್ಮದಾಗಿದ್ದಕ್ಕೆ ನಟಿ ಗುಲ್‌ ಪನಾಗ್‌ ಸಂತಸ ವ್ಯಕ್ತಪಡಿಸಿದ್ದಾರೆ.

‘ಅಬ್‌ ತಕ್‌ ಛಪ್ಪನ್‌ 2’ ಚಿತ್ರದಲ್ಲಿ ನಟಿಸಲು ನಾನು ಒಪ್ಪಿಕೊಂಡಿದ್ದು ಎರಡು ಕಾರಣಕ್ಕೆ. ಒಂದು ಅದರಲ್ಲಿನ ನನ್ನ ಪಾತ್ರದ ಮಹತ್ವಕ್ಕಾಗಿ ಮತ್ತು ನಾನಾ ಪಾಟೇಕರ್‌ ಅವರ ಜತೆ ಅಭಿನಯಿಸಲು ಅವಕಾಶ ಸಿಗುತ್ತದೆ ಎಂಬುದಕ್ಕಾಗಿ’ ಎಂದು ಗುಲ್‌ ಹೇಳಿಕೊಂಡಿದ್ದಾರೆ.
‘ಅಬ್‌ ತಕ್‌ ಛಪ್ಪನ್‌ 2’ ಇದು ಶಿಮಿತ್‌ ಅಮಿನ್‌ ನಿರ್ದೇಶನದಲ್ಲಿ 2004ರಲ್ಲಿ ಬಂದಿದ್ದ ‘ಅಬ್‌ ತಕ್‌ ಛಪ್ಪನ್‌’ ಚಿತ್ರದ ಮುಂದುವರಿದ ಭಾಗ. ಮೊದಲನೇ ಭಾಗದಲ್ಲಿ ನಾನಾ ಪಾಟೇಕರ್‌ ಮತ್ತು ಮೋಹನ್‌ ಅಗಾಶೆ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.

ಎರಡನೇ ಭಾಗದಲ್ಲಿ ಗುಲ್‌ ಪನಾಗ್‌ ತನಿಖಾ ವರದಿಗಾರ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾನಾ ಪಾಟೇಕರ್‌ ತನಿಖಾ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ.

‘ಈ ಚಿತ್ರಕ್ಕೆ ಒಪ್ಪಿಕೊಳ್ಳುವ ಮುನ್ನ ನನ್ನ ಮೊದಲ ಪ್ರಶ್ನೆ ಈ ಚಿತ್ರದಲ್ಲಿ ನನ್ನ ಪಾತ್ರ ಏನು? ಎಂಬುದಾಗಿತ್ತು. ಯಾಕೆಂದರೆ ಹಿಂದಿನ ಭಾಗ ಎನ್‌ಕೌಂಟರ್‌ ಮತ್ತು ತನಿಖಾ ತಂಡದ ಸುತ್ತಲೇ ಕಥೆ ಹೆಣೆದುಕೊಂಡಿತ್ತು. ಪುರುಷರ ಪಾತ್ರಕ್ಕೆ ಹೆಚ್ಚು ಮಹತ್ವವಿತ್ತು. ಆದರೆ ಈ ಎರಡನೇ ಭಾಗದಲ್ಲಿ ನನ್ನದು ತನಿಖಾ ವರದಿಗಾರ್ತಿಯ ಪಾತ್ರ. ನನ್ನ ಪಾತ್ರಕ್ಕೂ ಸಾಕಷ್ಟು ಮಹತ್ವವಿದೆ’ ಎಂದು 36 ವರ್ಷ ವಯಸ್ಸಿನ ಗುಲ್‌ ತಮ್ಮ ಪಾತ್ರದ ಕುರಿತು ವಿವರಿಸುತ್ತಾರೆ.

‘ನಾನಾ ಪಾಟೇಕರ್‌ ಅವರೊಂದಿಗೆ ಈ ಸಿನಿಮಾದಲ್ಲಿ ನಟಿಸುತ್ತಿರುವುದು ನನಗೆ ರೋಮಾಂಚನ ಹುಟ್ಟಿಸಿದೆ. ತನಿಖಾ ವರದಿಗಾರ್ತಿ ಪಾತ್ರ ಮತ್ತು ನಾನಾ ಪಾಟೇಕರ್‌ ಅವರೊಂದಿಗಿನ ನಟನೆ ಇವೆರಡೂ ಅಪೂರ್ವ ಅವಕಾಶಗಳನ್ನು ನನಗೆ ಈ ಸಿನಿಮಾ ನೀಡಿದೆ’ ಎಂದು ಅವರು ಖುಷಿ ವ್ಯಕ್ತಪಡಿಸುತ್ತಾರೆ.

ನಾನಾ ಪಾಟೇಕರ್‌ ಅವರೊಂದಿಗೆ ನಟಿಸಲು ಅವಕಾಶ ಸಿಗುವುದು ಅದೃಷ್ಟದ ಬಾಬತ್ತು ಎನ್ನುವುದು ಗುಲ್‌ ಅನಿಸಿಕೆ.
‘ನಾನಾ ಅವರೊಂದಿಗೆ ಕೆಲಸ ಮಾಡುವುದು ಅದ್ಭುತ ಅನುಭವ. ಅವರೊಂದಿಗೆ ನಟಿಸುವ ಅವಕಾಶ ಸಿಗಲು ಅದೃಷ್ಟ ಬೇಕು’ ಎಂದು ಅವರು ನಾನಾ ಪಾಟೇಕರ್‌ ಅವರನ್ನು ಮುಕ್ತವಾಗಿ ಪ್ರಶಂಸಿಸಿದ್ದಾರೆ. ಎಜಾಜ್‌ ಗುಲಾಬ್‌ ನಿರ್ದೇಶಿಸಿರುವ ‘ಅಬ್‌ ತಕ್‌ ಛಪ್ಪನ್‌ 2’ ಚಿತ್ರ ಫೆ. 27ಕ್ಕೆ ತೆರೆಕಾಣುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT