ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀರು ಕೊಡಿ ಇಲ್ಲವೇ ಎನ್‌ಒಸಿ ಕೊಡಿ’

ಉಮದಿಯಿಂದ ಸಾಂಗ್ಲಿಗೆ 6 ದಿನಗಳ ಪಾದಯಾತ್ರೆಗೆ ಇಂದು ಚಾಲನೆ
Last Updated 30 ಜೂನ್ 2015, 19:30 IST
ಅಕ್ಷರ ಗಾತ್ರ

ವಿಜಯಪುರ: ‘ಮೈಶಾಳ್ ಯೋಜನೆ ಮುಂದುವರೆಸಿ; ನೀರು ಕೊಟ್ಟು ನಮ್ಮನ್ನು ಮಹಾರಾಷ್ಟ್ರದಲ್ಲೇ ಉಳಿಸಿ. ಇಲ್ಲದಿದ್ದರೆ ರಾಜಕೀಯ ಹಿತಾಸಕ್ತಿಗಾಗಿ ತಂಟೆ–ತಕರಾರು ತೆಗೆಯದೆ ಸುಮ್ಮನೆ ನಿರಾಕ್ಷೇ ಪಣಾ ಪತ್ರ ನೀಡುವ ಮೂಲಕ ಕರ್ನಾಟಕ ರಾಜ್ಯಕ್ಕೆ ಸೇರ್ಪಡೆಗೊಳ್ಳಲು ಅವಕಾಶ ನೀಡಿ...’

ಇದು ಉಮದಿಯಿಂದ ಸಾಂಗ್ಲಿಗೆ ಪಾದಯಾತ್ರೆಗೆ ಹೊರಟಿರುವ  ಜತ್ತ ತಾಲ್ಲೂಕಿನ 42 ಹಳ್ಳಿಗಳ ಕನ್ನಡಿಗರ ಬೇಡಿಕೆ. ‘ನೀರಿಗಾಗಿ ಒಂದೂವರೆ ವರ್ಷದ ಹಿಂದೆ 6 ದಿನ ನಡೆಸಿದ ಉಪವಾಸವೂ ಪ್ರಯೋಜನವಿಲ್ಲದಾಗಿದೆ. ಸರ್ಕಾರ ಬದಲಾದರೂ ಭರವಸೆ  ಈಡೇರಿಲ್ಲ. ವರ್ಷ ಗತಿಸಿ ಮತ್ತೆ 6 ತಿಂಗಳು ಕಳೆದಿವೆ. ನಮ್ಮ ಹಿತರಕ್ಷಣೆಗೆ ಯಾರೊಬ್ಬರೂ ಮುಂದಾಗಿಲ್ಲ...’

‘ಗಡಿಯಲ್ಲಿರುವ ನಮ್ಮ ಸ್ಥಿತಿ ವರ್ಷ ದಿಂದ ವರ್ಷಕ್ಕೆ ಅಧೋಗತಿಗೆ ಇಳಿದಿದೆ. ನೀರಿಲ್ಲದೆ ಪರದಾಡುತ್ತಿದ್ದೇವೆ. 50 ಎಕರೆ ಜಮೀನಿದ್ದರೂ ಕೂಲಿ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದೇವೆ. ಸಾವಿರ ಅಡಿ ಆಳ ಭೂಮಿ ಕೊರೆದರೂ ನೀರು ಸಿಗುತ್ತಿಲ್ಲ. ಸಾಲ ಹೆಚ್ಚುತ್ತಿದೆ. ಬದುಕು ಕಷ್ಟವಾಗಿ ದ್ದರಿಂದ ಅನಿವಾರ್ಯವಾಗಿ ಬೀದಿಗೆ ಇಳಿದಿದ್ದೇವೆ’   ಎಂದು ಅಳಲು ತೋಡಿ ಕೊಳ್ಳುವ ಈ ಗ್ರಾಮಸ್ಥರು, ಗಡಿಯ ಲ್ಲಿರುವ ಕನ್ನಡಿಗರ ರಕ್ಷಣೆಗೆ ಕರ್ನಾಟಕ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸುತ್ತಾರೆ.

42 ಹಳ್ಳಿಗಳ ಮುಖಂಡರನ್ನು ಒಡಗೂಡಿಸಿಕೊಂಡು ಪಾದಯಾತ್ರೆಗೆ ಸಜ್ಜಾಗಿರುವ ಜತ್ತ ತಾಲ್ಲೂಕು ಜಲ ಸಂಘರ್ಷ ಸಮಿತಿಯ ಅಧ್ಯಕ್ಷ ಸುನೀಲ ಪೋತದಾರ ಮಂಗಳವಾರ ‘ಪ್ರಜಾವಾಣಿ’ ಜತೆ ಹೋರಾಟದ ಮಾಹಿ ತಿಯನ್ನು ಹಂಚಿಕೊಂಡರು. ‘ನಾವು ಮಾಡಿದ ಮನವಿಗೆ ಮಹಾರಾಷ್ಟ್ರ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ. ಅಂತಿಮವಾಗಿ ಬೀದಿಗಿಳಿದಿದ್ದೇವೆ. ಜುಲೈ 1ರಿಂದ 6 ದಿನ ಗಡಿ ಕನ್ನಡಿಗರು ಸೇರಿದಂತೆ ಈ ಭಾಗದ ಮರಾಠಿಗರು ಒಟ್ಟಾಗಿ 150 ಕಿ.ಮೀ. ಪಾದಯಾತ್ರೆ ನಡೆಸುವ ಮೂಲಕ ಹೋರಾಟಕ್ಕಿಳಿ ದಿದ್ದೇವೆ’ ಎನ್ನುತ್ತಾರೆ ಅವರು.

‘ಹೋರಾಟದ ಕೇಂದ್ರ ಸ್ಥಾನ ವಾಗಿರುವ ಉಮದಿಯಿಂದ ಪಾದ ಯಾತ್ರೆಗೆ ಚಾಲನೆ ನೀಡಲಾಗುವುದು. ಗ್ರಾಮದಲ್ಲಿ ಬಂದ್‌ ಆಚರಿಸುವ ಮೂಲಕ ಸ್ಥಳೀಯರು ಬೆಂಬಲ ವ್ಯಕ್ತಪಡಿಸಲಿದ್ದಾರೆ. ಸುತ್ತಮುತ್ತಲಿನ 28 ಗ್ರಾಮಗಳ ಜನತೆ ಇಲ್ಲಿಂದಲೇ ಪಾದಯಾತ್ರೆಗೆ ಸಾಥ್‌ ನೀಡಲಿದ್ದಾರೆ’ ಎಂದರು.

ಪಾದಯಾತ್ರೆಯ ಮಾರ್ಗದಲ್ಲಿ ಮಾಡಗ್ಯಾಳ,ಜತ್ತ, ಪೋಕಳ, ಲಾಂಡ ಗೆವಾಡಿ, ಮೀರಜ್‌ನಲ್ಲಿ ವಾಸ್ತವ್ಯ ಮಾಡಿ, ಆರನೇ ದಿನ ಮೀರಜ್‌ನಿಂದ ಹೊರಡುವ ಪಾದಯಾತ್ರೆಯು ಸಾಂಗ್ಲಿ ಜಿಲ್ಲಾಧಿಕಾರಿ ಕಚೇರಿ ತಲುಪಲಿದ್ದು, ಅಲ್ಲಿ ಪ್ರತಿಭಟನಾ ಸಮಾವೇಶ ನಡೆಯಲಿದೆ ಎಂದರು.

ಮಾರ್ಗ ಮಧ್ಯೆ ಸಿಗುವ ಪೋಕಳ, ಲಾಂಡಗೆವಾಡಿ, ಮೀರಜ್‌ನಲ್ಲಿ ಉಳಿದ 3 ದಿನ ವಸತಿ ಮಾಡಲಾಗುವುದು. ಆರನೇ ದಿನ ಮೀರಜ್‌ನಿಂದ ನೇರವಾಗಿ 11 ಕಿ.ಮೀ. ಪಾದಯಾತ್ರೆ ಮೂಲಕ ಸಾಂಗ್ಲಿ ಜಿಲ್ಲಾಧಿಕಾರಿ ಕಚೇರಿ ತಲುಪಿ ಪ್ರತಿಭಟನಾ ಸಮಾವೇಶ ನಡೆಸಲಾಗುವುದು. ಈ ಪಾದಯಾತ್ರೆಗೆ ಕನ್ನಡಿಗರು–ಮರಾಠಿಗರು ಎನ್ನದೇ ಎಲ್ಲರೂ ಬೆಂಬಲ ನೀಡಿದ್ದಾರೆ.
*
ಕನ್ನಡಿಗರೇ ಹೆಚ್ಚಿರುವ ಜತ್ತ ತಾಲ್ಲೂಕಿನ 42 ಹಳ್ಳಿಗಳ ಮುಖಂಡರ ನಿಯೋಗದ ಜತೆ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಭೇಟಿಯಾಗಿ ಅಲ್ಲಿನ ಸಮಸ್ಯೆ ಗಮನಕ್ಕೆ ತರಲಾಗುವುದು.
-ಸುಭಾಷ ಛಾಯಾಗೋಳ,
ಗಡಿ ಪ್ರಾಧಿಕಾರದ ಅಧ್ಯಕ್ಷ

*
ಪಾದಯಾತ್ರೆಗೆ ಶಿವಸೇನೆಯು ಕಿರಿಕಿರಿ ಶುರು ಮಾಡಿದೆ. ರಾಜಕೀಯ ಸ್ವರೂಪ ನೀಡುತ್ತಿದೆ. ಆದರೂ ಶಾಂತಿ ಸ್ವರೂಪದಲ್ಲಿ ಉಗ್ರ ಹೋರಾಟ ನಡೆಸುತ್ತೇವೆ.
-ಸುನೀಲ ಪೋತದಾರ,
ಜಲ ಸಂಘರ್ಷ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT