ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೆಟ್‌’ ಚಟ: ಶೇ 6ರಷ್ಟು ಮಂದಿಗೆ ಆರೋಗ್ಯ ಸಮಸ್ಯೆ

Last Updated 19 ಡಿಸೆಂಬರ್ 2014, 13:24 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಐಎಎನ್‌ಎಸ್‌): ಜಗತ್ತಿನಾದ್ಯಂತ ಅಂತರ್ಜಾಲ ಬಳಸುವ ಶೇ 6ರಷ್ಟು ಮಂದಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ ಎಂದು ಇತ್ತೀಚಿನ ಸಂಶೋಧನೆಯೊಂದು ಹೇಳಿದೆ.

ಹಾಂಕಾಂಗ್‌ ವಿಶ್ವವಿದ್ಯಾಲಯದ ತಜ್ಞರ ತಂಡ ಈ ಸಂಶೋಧನೆ ನಡೆಸಿದ್ದು, 31 ದೇಶಗಳಲ್ಲಿ ಅಂತರ್ಜಾಲ ಬಳಸುವ 89 ಸಾವಿರ ಮಂದಿಯನ್ನು ಈ ಸಂಶೋಧನೆಗೆ ಒಳಪಡಿಸಲಾಗಿತ್ತು.

ಹೆಚ್ಚಿನ ಸಮಯ ಅಂತರ್ಜಾಲ ಬಳಸುವ ವ್ಯಸನಕ್ಕೆ ತುತ್ತಾಗಿರುವವರಲ್ಲಿ ರಕ್ತದೊತ್ತಡ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ. ಇದರಿಂದ ಗುಣಮಟ್ಟದ ಜೀವನದಿಂದ ಅವರು ವಂಚಿತರಾಗುತ್ತಿದ್ದಾರೆ ಎಂದು ಸಂಶೋಧಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT