ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೆರವು ಜಾಸ್ತಿ, ಪ್ರಗತಿ ನಾಸ್ತಿ’

Last Updated 27 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾಲ ಮಾಡಿ ಕೆಲವರಿಗೆ ಮಾತ್ರ ಹೋಳಿಗೆ–ತುಪ್ಪ ನೀಡುವುದು ಸರಿಯೇ?’ ಬಿಜೆಪಿಯ ಸಿ.ಟಿ. ರವಿ ವಿಧಾನಸಭೆಯಲ್ಲಿ ಶುಕ್ರವಾರ ಮುಖ್ಯಮಂತ್ರಿ ಮುಂದಿಟ್ಟ ಪ್ರಶ್ನೆ ಇದು.

‘ಈ ಹಿಂದೆ ಸಾಲ ಮಾಡಿ ರಾಜ್ಯವನ್ನು ಹಾಳು ಮಾಡ್ತಿರೇನ್ರಿ ಎಂದು ಗದರಿಸಿದ್ದ ನೀವೇ ಈಗೇಕೆ ಹೀಗೆ ಸಾಲ ಮಾಡುತ್ತಿದ್ದೀರಿ’ ಎಂದು ಕೆಣಕಿದರು. ‘ಸರ್ಕಾರ ನೀಡಿರುವ ಹಲವು ‘ಭಾಗ್ಯ’ಗಳಿಂದ ಜನ ಉದ್ಯೋಗಕ್ಕೆ ಹೋಗಲು ಮನಸ್ಸು ಮಾಡುತ್ತಿಲ್ಲ.

ಹೀಗಾಗಿ ಆದಾಯ ಹೆಚ್ಚುತ್ತಿಲ್ಲ. ಹೀಗೆ ಉಚಿತ ಕೊಡುಗೆಗಳನ್ನು ನೀಡುವ ಬದಲು ಜನರನ್ನು ಸ್ವಾವಲಂಬಿ ಮಾಡುವ ಸುಸ್ಥಿರ ಯೋಜನೆಗಳನ್ನು ತರಬೇಕು’ ಎಂದು ಸಲಹೆ ನೀಡಿದರು. 

‘ಇದುವರೆಗಿನ ಸರ್ಕಾರಗಳು ಹಳ್ಳಿಗರನ್ನು ಊರು ಬಿಡಿಸುವ ಕೆಲಸ ಮಾಡಿದ್ದು ಸಾಕು, ಪ್ರತಿ ಗ್ರಾಮದಲ್ಲೂ ಕೈಗಾರಿಕಾ ವಸಾಹತು ಸ್ಥಾಪಿಸಬೇಕು, ಆ ಮೂಲಕ ಉದ್ಯೋಗ ಸೃಷ್ಟಿಸಬೇಕು’ ಎಂದು ಆಗ್ರಹಿಸಿದರು. ‘ಅನುದಾನ ಜಾಸ್ತಿ, ಅಭಿವೃದ್ಧಿ ನಾಸ್ತಿ. ಇದು ಈ ಸಲದ ಬಜೆಟ್‌’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT