ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೇಚರ್ಸ್ ಥರ್ಡ್ ಸೈಕಲ್’ ಬಿಡುಗಡೆ

Last Updated 5 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸೂರ್ಯನ ಹೊರಮೈ ಮೇಲೆ ಕಾಣಿಸಿಕೊಳ್ಳುವ ಮಚ್ಚೆಗಳ (ಸೌರ ಕಲೆಗಳು) ಬಗ್ಗೆ ಕಳೆದ ಮೂರು ದಶಕಗಳಿಂದ ಆಳ ಅಧ್ಯಯನ ನಡೆಸಿ­ರುವ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಭೌತವಿಜ್ಞಾನ ಪ್ರಾಧ್ಯಾ­ಪಕ ಪ್ರೊ.ಅರ್ನಬ್ ಚೌಧರಿ ಅವರು ಬರೆದ ‘ನೇಚರ್ಸ್ ಥರ್ಡ್ ಸೈಕಲ್’ ಪುಸ್ತಕವನ್ನು ಹಿರಿಯ ವಿಜ್ಞಾನಿ ಪ್ರೊ. ರೊದ್ದಂ ನರಸಿಂಹ ಅವರು ಬುಧವಾರ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ನರಸಿಂಹ ಅವರು, ‘ಹನ್ನೊಂದು ವರ್ಷ­ಕ್ಕೊಮ್ಮೆ ಕಾಣಿ­ಸಿಕೊಳ್ಳುವ ಸೌರ ಕಲೆಗಳು ಸೌರ ಭೌತವಿಜ್ಞಾನ ಕ್ಷೇತ್ರದ ವಿಜ್ಞಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸುತ್ತವೆ. ಅವುಗಳ  ಕುರಿತು ಅರ್ನಬ್ ಅವರು ರಚಿಸಿರುವ ಪುಸ್ತಕ ಅದ್ಭುತವಾಗಿದೆ. 30 ವರ್ಷಗಳ ಅವರ ಶ್ರಮವನ್ನು ಈ ಪುಸ್ತಕದಲ್ಲಿ ಕಾಣಬಹುದು’ ಎಂದು ಹೇಳಿದರು.

‘ಗಣಿತ ಸೂತ್ರಗಳ ಗೋಜಲು ಇಲ್ಲದ  ಈ ಪುಸ್ತಕವನ್ನು ಜನಸಾಮಾನ್ಯರು ಸರ­ಳವಾಗಿ ಅರ್ಥೈಸಿಕೊಳ್ಳುವಂತೆ ಬರೆ­ಯ­ಲಾಗಿದೆ. ಪುಸ್ತಕದಲ್ಲಿ ಸೌರ ಕಲೆಗಳ ಬಗ್ಗೆ ಮಾತ್ರವಲ್ಲದೇ ವಿಜ್ಞಾನ ಪ್ರಪಂಚ ಹೇಗೆ ಮುಂದುವರಿಯುತ್ತದೆ, ವಿಜ್ಞಾನಿ­ಗಳ ಕಷ್ಟ­ಸುಖಗಳೇನು ಇತ್ಯಾದಿ ಅನೇಕ ಅಂಶಗಳಿವೆ’ ಎಂದರು.

ಪ್ರೊ.ಅರ್ನಬ್ ಚೌಧರಿ ಮಾತನಾಡಿ, ‘ಷಿಕಾಗೊ ವಿವಿಯಲ್ಲಿ ಪಿಎಚ್.ಡಿ ಮಾಡು­ತ್ತಿದ್ದ ದಿನಗಳಿಂದಲೂ ನನ್ನನ್ನು ಕುತೂಹಲಗೊಳಿಸುತ್ತ ಬಂದಿರುವ ಸೌರ ಕಲೆಗಳ ವಿದ್ಯಮಾನದ ಕೌತುಕವನ್ನು ಜನಸಾಮಾನ್ಯರಿಗೆ ತಿಳಿಸಬೇಕೆಂಬ ಆಶಯದಿಂದ ಪುಸ್ತಕ ರಚನೆಗೆ ಮುಂದಾದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT