ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪತ್ನಿ ಪ್ರೇಮಿ’ಗಳ ಭಿತ್ತಿಪತ್ರ ಬಿಡುಗಡೆ ಮಾಡಿದ ಬಿಜೆಪಿ!

Last Updated 11 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ವಾರಾಣಸಿ (ಪಿಟಿಐ): ನರೇಂದ್ರ ಮೋದಿ ಅವರ ವೈವಾಹಿಕ ಮಾಹಿತಿ ಪ್ರಸ್ತಾಪಿಸಿ ಕಾಂಗ್ರೆಸ್‌ ದಾಳಿ ಮಾಡಿದ ಬೆನ್ನಲ್ಲೇ ಬಿಜೆಪಿ ಬೆಂಬಲಿಗರು  ಅದಕ್ಕೆ ಪ್ರತ್ಯುತ್ತರ­ವೆಂಬಂತೆ ಹುಬ್ಬೇರಿಸುವಂತಹ ಭಿತ್ತಿಪತ್ರ­ಗಳನ್ನು ಬಿಡುಗಡೆ ಮಾಡಿದ್ದಾರೆ.

ಈ ಭಿತ್ತಿಪತ್ರಗಳಲ್ಲಿ ಮೋದಿ ಅವ­ರನ್ನು ‘ದೇಶಪ್ರೇಮಿ’ ಎಂದು ಹೇಳಲಾ­ಗಿದ್ದರೆ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷದ ನಾಯಕರನ್ನು ‘ಪತ್ನಿ ಪ್ರೇಮಿ’ಗಳು ಎಂದು ಬಿಂಬಿಸಲಾಗಿದೆ.

ಜವಾಹರಲಾಲ್‌ ನೆಹರೂ ಅವರು ಲಾರ್ಡ್‌ ಮೌಂಟ್‌ಬ್ಯಾಟೆನ್‌ ಅವರ ಪತ್ನಿ ಎಡ್ವಿನಾ ಜತೆ ಇರುವ, ರಾಹುಲ್‌ ಗಾಂಧಿ ಅವರನ್ನು ಪಕ್ಷದ ಕಾರ್ಯಕರ್ತೆ­ಯೊಬ್ಬರು ಅಪ್ಪಿಕೊಂಡಿರುವ ಮತ್ತು ಶಶಿ ತರೂರ್‌ ಅವರು ಪತ್ನಿ ಸುನಂದಾ ಪುಷ್ಕರ್‌ (ಈಗ ದಿವಂಗತರು) ಜತೆ ಇರುವ  ಚಿತ್ರಗಳೂ ಈ ಪೋಸ್ಟರ್‌­ನಲ್ಲಿದೆ.

ಅಲ್ಲದೆ, ಕಾಂಗ್ರೆಸ್‌ನ ದಿಗ್ವಿಜಯ್‌ ಸಿಂಗ್‌, ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌, ಮೊಹಮ್ಮದ್‌ ಅಜಂ ಖಾನ್‌ ಅವರ ಚಿತ್ರಗಳನ್ನು ಭಿತ್ತಿಪತ್ರದಲ್ಲಿ ಅಚ್ಚುಹಾಕ­ಲಾಗಿದೆ.

ನಗರದಲ್ಲಿ ಮೋದಿ ಚುನಾವಣಾ ಪ್ರಚಾರದ ಮೇಲ್ವಿಚಾರಕರಾದ ಅಶೋಕ್‌ ಚೌರಾಸಿಯಾ ಅವರು ಈ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿ­ದರು. ‘ಈ ಚುನಾವಣೆಯು ರಾಷ್ಟ್ರ­ಕ್ಕಾಗಿ ಮನೆ– ಕುಟುಂಬವನ್ನು ತೊರೆದ ವ್ಯಕ್ತಿ ಹಾಗೂ ರಾಷ್ಟ್ರವನ್ನು ಮರೆತು ಪತ್ನಿಯರನ್ನು ಮಾತ್ರ ಪ್ರೀತಿಸುವವರ ನಡುವಿನ ಸಮರವಾಗಿದೆ’ ಎಂದು ಚೌರಾಸಿಯಾ  ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT