ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಸ್ಪರ ವಿರೋಧಾರ್ಥ ಇಲ್ಲ’

Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ರೋಹಿತ್ ಚಕ್ರತೀರ್ಥ ಅವರ  ‘...ದ್ವಂದ್ವ­ವಲ್ಲ, ಯುಗ್ಮತೆ’ ಲೇಖನಕ್ಕೆ (ಸಂಗತ, ಸೆ. 17) ಪ್ರತಿಕ್ರಿಯೆ. ‘ಯುಗ್ಮ’ ಎಂದರೆ ‘ಜೊತೆ’, ‘ಜೋಡಿ’, ‘ದಂಪತಿ’ ಎಂಬಂಥ ಸರಳ ಅರ್ಥ ಬರು­ತ್ತ­ದೆಯೇ ಹೊರತು, ‘ಒಂದು ಪೂರ್ವಕ್ಕೆ, ಇನ್ನೊಂದು ಪಶ್ಚಿಮಕ್ಕೆ’ ಎನ್ನುವ ಪರಸ್ಪರ ವಿರೋ­ಧಾರ್ಥ ಬರುವುದೇ ಇಲ್ಲ.

ಹೀಗೆ ಒಂದಕ್ಕೊಂದು ವಿರುದ್ಧ ದಿಕ್ಕಿನಲ್ಲಿರು­ವಂಥವು ಜೋಡಿಯಾಗಿ­ರುವ ವಿಶೇಷ ಗುಣ­ಕ್ಕೆಂದೇ ‘ದ್ವಂದ್ವ’ (‘ಅ ಪೇರ್ ಆಫ್‌ ಆಪೋ­ಸಿಟ್ಸ್’) ಎಂಬ ಪ್ರತ್ಯೇಕ, ಜನಪ್ರಿಯ ಪದವು ಸಿದ್ಧವಾಗಿರುವಾಗ, ಅದನ್ನು ಸರಿಯಲ್ಲ­ವೆಂದು ತ್ಯಜಿಸಿ, ‘ಯುಗ್ಮ’ ಎಂಬ ಸಾದಾ ಪದ­ವನ್ನು ಆ ಜಾಗದಲ್ಲಿ ಬಳಸುವುದು, ಸುಮ್ಮನೆ ಜೋಡಿ­ ಸಂಕೇತಿಸಿ, ಅಲ್ಲಿರುವ ಪರ­ಸ್ಪರ ವಿರುದ್ಧ ಗುಣವೈಶಿಷ್ಟ್ಯವನ್ನೇ ಮರೆ­ಮಾಚಿ­ದಂತಾ­ಗುತ್ತದೆ.
‘ಯುಗ್ಮ’ ಅರ್ಥಾತ್ ‘ನೊಗ’ವನ್ನು ಹೊತ್ತಿ­ರುವ ಜೋಡೆತ್ತುಗಳಿಗೆ, ‘ಒಂದು ಪೂರ್ವಕ್ಕೆ, ಇನ್ನೊಂದು ಪಶ್ಚಿಮಕ್ಕೆ’ ಎಂದು ಇಲ್ಲಿರುವ ಅರ್ಥ­ವಿವರಣೆಯನ್ನೇ ಅನ್ವಯಿಸಿ­ದರೆ, ಇಲ್ಲಿನ ‘ಯುಗ್ಮತೆ’ ವ್ಯಾಖ್ಯಾನವು ಎಷ್ಟು ಆಭಾಸಕರ ಎನ್ನುವುದು ಸ್ಪಷ್ಟವಾಗುತ್ತದೆ.

‘ಇದನ್ನು ಬಿಟ್ಟು ಅದಕ್ಕೆ, ಅದರ ಹೊರತು ಇದಕ್ಕೆ ಅಸ್ತಿತ್ವ, ಅರ್ಥ­ಗಳಿಲ್ಲ’ ಎಂದು ಲೇಖನ ಉದ್ದೇಶಿಸಿರುವ  ಸಂಬಂಧ­ವನ್ನೇ ವರ್ಣಿಸಬೇಕಾಗಿದ್ದಲ್ಲಿ, ‘ಪರಸ್ಪ­ರತೆ’ (ಮ್ಯೂಚುವಲ್ ಅಥವಾ ರೆಸಿಪ್ರೊಕಲ್) ಎನ್ನಬಹುದು. ಹಾಗೆಯೇ, ‘ಯುಗ್ಮತೆ’ ಎನ್ನು­ವು­ದಕ್ಕೆ ಇಂಗ್ಲಿಷ್‌ನಲ್ಲಿ entanglement  ಎಂದಾಗು­ವು­­ದಿಲ್ಲ;

entanglement ಎಂಬುದಕ್ಕೆ ‘ತೊಡಕಿ­ನಲ್ಲಿ ತೊಡರಿಕೊಂಡಿರುವ’ ಅಥವಾ ‘ತೊಂದರೆ­ಯಲ್ಲಿ ಸಿಕ್ಕಿಹಾಕಿಕೊಂಡಿರುವ’ ಎಂಬ  ‘ಆಭಾಸ­ಕರ’ ಅರ್ಥ ಬರುವುದೇ ಹೊರತು, ‘ಯುಗ್ಮ’ದ ಮೂಲ ಅರ್ಥವಾದ ‘ಸಾಧಾರಣ ಜೋಡಿ’ ಅಥವಾ ಲೇಖಕರು ಇಲ್ಲಿ ಕೊಟ್ಟಿರುವ ‘ಪೂರ್ವ-ಪಶ್ಚಿಮ ಹೆಣಿಗೆ’ ಈ ಎರಡೂ ಅರ್ಥಗಳು ಖಂಡಿ­ತವಾಗಿಯೂ ಅಲ್ಲ. ಬೇಕಾದರೆ, ‘ಯುಗ್ಮತೆ’ ಎನ್ನುವುದಕ್ಕೆ ‘ಅಕಪ­ಲ್‍ಮಂಟ್’ (ಜೋಡಿಯಾಗಿ­ರು­ವಿಕೆ) ಎನ್ನುವ ಶಬ್ದವನ್ನು ಬಳಸಬಹುದು.
-  –ಎಸ್.ಜಿ. ಸೀತಾರಾಮ್,  ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT