ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾರಂಪರಿಕ ಸ್ಥಳಗಳ ರಕ್ಷಣೆಗೆ ಮುಂದಾಗಲಿ’

Last Updated 25 ಅಕ್ಟೋಬರ್ 2014, 19:58 IST
ಅಕ್ಷರ ಗಾತ್ರ

ಬೆಂಗಳೂರು: ‘ಪಾರಂಪರಿಕ ಬಾಲ­ಬ್ರೂಯಿ ಕಟ್ಟಡದ  ಜಾಗದಲ್ಲಿ ಶಾಸಕ­ರಿಗಾಗಿ ‘ಕಾನ್‌ಸ್ಟಿಟ್ಯೂಷನ್‌ ಕ್ಲಬ್‌’ನ್ನು ನಿರ್ಮಿಸಲು ನೀಡಿದ ಸೂಚನೆಯನ್ನು ಕೂಡಲೇ ಮುಖ್ಯಮಂತ್ರಿಗಳು ಹಿಂಪಡೆ­ಯ­ಬೇಕು’ ಎಂದು ಬಾಲಬ್ರೂಯಿ ಉಳಿಸಿ ಸಮಿತಿಯ ಸಂಯೋಜಕ ಶ್ರೀನಿ­ವಾಸ ಜಿ. ಕಪ್ಪಣ್ಣ  ಮುಖ್ಯ­ಮಂತ್ರಿ­ಯವ­ರನ್ನು  ಒತ್ತಾಯಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತ­ನಾಡಿದ ಅವರು ‘ಶಾಸಕರಿಗಾಗಿ ಕ್ಲಬ್‌ ನಿರ್ಮಿಸಲು ನಗರದಲ್ಲಿ ಹಲ­ವಾರು ಸ್ಥಳಗಳಿವೆ. ಆದ್ದರಿಂದ ಮುಖ್ಯ­ಮಂತ್ರಿಗಳು ನಗರದ ಪಾರಂಪರಿಕ ಕಟ್ಟಡಗಳ ರಕ್ಷಣೆಗೆ ಮುಂದಾಗಬೇಕು. ಪಾರಂಪರಿಕ ಸ್ಥಳಗಳನ್ನು ಉಳಿಸಲು ಭಾನುವಾರ (ಅ.26) ಬಾಲಬ್ರೂಯಿ ಕಟ್ಟಡದ ಮುಂದೆ ಬಾಲಬ್ರೂಯಿಯಲ್ಲಿ ವಾಸವಿದ್ದು ರಾಜ್ಯವನ್ನು ಮುನ್ನಡೆಸಿದ ಮಹನಿಯರ ಹೆಸರಿನ ಫಲಕಗಳನ್ನು ಹಿಡಿದು ಮೌನ ಮೆರವಣಿಗೆ ನಡೆಸಲಾ­ಗುವುದು ’ ಎಂದರು.

ಚಿತ್ರ ನಿರ್ದೇಶಕ ಬಿ.ಸುರೇಶ್‌ ‘ಬಾಲ­ಬ್ರೂಯಿ ಕಟ್ಟಡದಲ್ಲಿ ರವೀಂದ್ರನಾಥ ಠಾಕೂರ್‌ ಸೇರಿದಂತೆ ರಾಜ್ಯದ ಹಲವು ಪ್ರಸಿದ್ಧ ಮುಖ್ಯಮಂತ್ರಿಗಳು ವಾಸ್ತವ್ಯ ಹೂಡಿದ್ದಾರೆ. ಆದ್ದರಿಂದ ಅದರ ಇತಿಹಾಸ ಮುಂದಿನ ಯುವ ಪೀಳಿಗೆಗೆ ತಿಳಿಸಲು ಆ ಜಾಗದಲ್ಲಿ ಶಾಸಕರಿಗಾಗಿ ‘ಕಾನ್‌ಸ್ಟಿಟ್ಯೂಷನ್‌ ಕ್ಲಬ್‌’ ನಿರ್ಮಿಸಲು ಅನುಮತಿ ನೀಡಬಾರದು ಎಂದು ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗುವುದು’ ಎಂದರು.

ಸಮಿತಿಯ ಸಂಯೋಜಕ ಎಸ್‌.ಜಿ. ಗೋಪಾಲ್‌ ‘ಪಾರಂಪರಿಕ ಕಟ್ಟಡ, ಕೆರೆ, ಉದ್ಯಾನವನ ಇವೆಲ್ಲವೂ ನಗರದ ಸೌಂದರ್ಯ ಮಾತ್ರವಲ್ಲ, ನಾಗರಿಕರ ಆರೋಗ್ಯದ ದೃಷ್ಟಿಯಿಂದಲೂ ಅತ್ಯವ­ಶ್ಯಕ. ಆದ್ದರಿಂದ ಸರ್ಕಾರ ಅವುಗಳ ರಕ್ಷಣೆಗೆ ಮುಂದಾಗಬೇಕು’ ಎಂದರು. ವಾಸ್ತುಶಿಲ್ಪಿ ನರೇಶ್‌ ವಿ.ನರಸಿಂಹನ್‌ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT