ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಿಚ್‌ ನೋಡಿ ತಂಡ ಆಯ್ಕೆ’

Last Updated 24 ನವೆಂಬರ್ 2015, 19:34 IST
ಅಕ್ಷರ ಗಾತ್ರ

ನಾಗಪುರ:  ಸ್ಥಳೀಯ ಅಭಿಮಾನಿಗಳ ಅನಿಸಿಕೆಗೆ ಅನುಗುಣವಾಗಿ ತಂಡವನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ಪಂದ್ಯ ಆರಂಭವಾಗುವ ದಿನದ ಬೆಳಿಗ್ಗೆ ಪಿಚ್‌ ಸ್ಥಿತಿ ತಿಳಿದು ಅಗತ್ಯಕ್ಕೆ ತಕ್ಕಂತೆ 11 ಜನರ ತಂಡವನ್ನು ಆಯ್ಕೆ ಮಾಡಲಾಗುತ್ತದೆ ಎಂದು  ನಾಯಕ ವಿರಾಟ್ ಕೊಹ್ಲಿ ಹೇಳಿದರು. 

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ನಾಗಪುರದ ಆಟಗಾರ ಉಮೇಶ್ ಯಾದವ್ ಅವರಿಗೆ ಅವಕಾಶ ಸಿಗಲಿದೆಯೇ ಎಂಬ ಪ್ರಶ್ನೆಗೆ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದರು.

‘ಪಂದ್ಯ ಗೆಲ್ಲುವುದು ಮುಖ್ಯ. ಆದ್ದರಿಂದ ತಂಡದ ಆಯ್ಕೆಯನ್ನು ಅಗತ್ಯಕ್ಕೆ ಅನುಗುಣವಾಗಿ ಮಾಡು ವುದೂ ಮುಖ್ಯ. ಪಂದ್ಯ ಆರಂಭ ವಾಗುವ ಒಂದು ತಾಸಿಗೂ ಮುನ್ನ ಆಯ್ಕೆ ಪ್ರಕಟವಾಗುತ್ತದೆ. ಪಂದ್ಯದ ಹಿಂದಿನ ಎರಡು ದಿನ ಎಲ್ಲ ಆಟ ಗಾರರಿಗೂ ಸಂಪೂರ್ಣ ಅವಧಿಯ ತಾಲೀಮು ನೀಡಲಾಗಿರುತ್ತದೆ. ಇದರಿಂದ ಎಲ್ಲರೂ  ಪಂದ್ಯ ಆಡಲು ಸಿದ್ಧರಾಗಿರುತ್ತಾರೆ’ ಎಂದು ಹೇಳಿದರು.

ಗುಲಾಬಿ ಚೆಂಡು; ಮಹತ್ವದ ಮೈಲುಗಲ್ಲು: ಟೆಸ್ಟ್‌ ಪಂದ್ಯದಲ್ಲಿ ಗುಲಾಬಿ ಚೆಂಡಿನ ಬಳಕೆಯ ಪ್ರಯೋಗ ನಡೆಯುತ್ತಿರುವ ಆಸ್ಟ್ರೇಲಿಯಾ –ನ್ಯೂಜಿಲೆಂಡ್ ತಂಡಗಳ ನಡುವಣ ಟೆಸ್ಟ್ ಪಂದ್ಯವು ಮಹತ್ವದ ಮೈಲುಗಲ್ಲು  ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT