ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಿನಾಕಾ’ ಪರೀಕ್ಷೆ ಯಶಸ್ವಿ

Last Updated 29 ಮೇ 2014, 19:30 IST
ಅಕ್ಷರ ಗಾತ್ರ

ಬಾಲಾಸೋರ್, ಒಡಿಶಾ (ಪಿಟಿಐ): ಸ್ವದೇಶಿ ನಿರ್ಮಿತ ಪಿನಾಕಾ ಕ್ಷಿಪಣಿ­ಯನ್ನು ಗುರುವಾರ ಪ್ರಯೋಗಾರ್ಥ­ವಾಗಿ ಉಡಾವಣೆ  ನಡೆಸಲಾಗಿದ್ದು, ಯಶಸ್ವಿ­ಯಾಗಿದೆ. ‘ಚಂಡಿಪುರದ ಪ್ರಾಯೋಗಿಕ ಕೇಂದ್ರ­ದಿಂದ ಪಿನಾಕಾ ಕ್ಷಿಪಣಿಯನ್ನು ಮೂರು ಬಾರಿ ಪ್ರಯೋಗಾರ್ಥ ಉಡಾ­ವಣೆ ಮಾಡಲಾಗಿದ್ದು, ಯಶಸ್ವಿಯಾಗಿದೆ’ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.

ರೈಲಿನಿಂದ ತಳ್ಳಿದ ಟಿಕೆಟ್‌ ತಪಾಸಕ
ಜಲಗಾಂವ್‌ (ಮಹಾರಾಷ್ಟ್ರ) (ಪಿಟಿಐ):
ರೈಲು ಟಿಕೆಟ್‌ ತಪಾಸಕರೊಬ್ಬರು ಕುಡಿದ ಅಮಲಿನಲ್ಲಿ  ಮಹಿಳಾ ಪ್ರಯಾಣಿಕರೊಬ್ಬರನ್ನು ಚಲಿಸುತ್ತಿದ್ದ ರೈಲಿನಿಂದ ತಳ್ಳಿ ಸಾಯಿಸಿರುವ ಘಟನೆ ಜಲಗಾಂವ್‌ ಜಿಲ್ಲೆಯಲ್ಲಿ ನಡೆದಿದೆ. ಸಂಪತ್‌ ಸೋಲುಂಕೆ ಮಹಿಳೆಯನ್ನು ರೈಲಿ­ನಿಂದ ಕೆಳಕ್ಕೆ ತಳ್ಳಿದ ಟಿಕೆಟ್‌ ತಪಾಸಕ ಎಂದು ಗುರುತಿಸಲಾಗಿದೆ.


‘ಸಾಮಾನ್ಯ ಟಿಕೆಟ್‌ ಪಡೆದಿದ್ದ ಮಹಿಳೆ ಹವಾನಿಯಂತ್ರಿತ ಬೋಗಿಗೆ ಹತ್ತಲು ಯತ್ನಿಸಿದ ಸಂದರ್ಭದಲ್ಲಿ ಘಟನೆ ನಡೆದಿದೆ. ಈ ಸಂಬಂಧ ಮೃತ ಮಹಿಳೆ ಉಜ್ವಲಾ ಪಾಂಡೆ (38) ಅವರ ಸೋದರಳಿಯ ದೂರು ದಾಖಲಿಸಿದ್ದು,  ಟಿಕೆಟ್‌ ತಪಾಸಕರನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT