ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೋಷಕಾಂಶ ಕೊರತೆಯಿಂದ ಹತ್ತಿ ಬೆಳೆಗೆ ಕುತ್ತು’

Last Updated 2 ಆಗಸ್ಟ್ 2014, 6:07 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಸಮೀಪದ ಶಿಗ್ಲಿಯ ಸಾವ­ಯವ ಕೃಷಿಕ ಶಿವಾನಂದ ಮೂಲಿಮನಿ ಅವರ ರೋಗಬಾಧಿತ ಬಿಟಿ ಹತ್ತಿ ಹೊಲಕ್ಕೆ ತಾಲ್ಲೂಕು ಸಹಾಯಕ ಕೃಷಿ ನಿರ್ದೆಶಕ ಎಸ್‌.ಬಿ. ಪಾಟೀಲ ಶುಕ್ರ­ವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹತ್ತಿಗೆ ರೋಗ ಬಂದು ಗಿಡದಲ್ಲಿನ ಮೋಪುಗಳು ಉದುರುತ್ತಿರುವ  ಕುರಿತು ಜು.27ರಂದು ಪ್ರಜಾವಾಣಿಯಲ್ಲಿ ‘ಹತ್ತಿಗೆ ಹತ್ತು ಕುತ್ತು, ರೈತರಿಗೆ ತಪ್ಪದ ಆಪತ್ತು’ ಎಂಬ ಶಿರ್ಷಿಕೆಯಡಿ ಸಚಿತ್ರ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆ­ಯಲ್ಲಿ ಅಧಿಕಾರಿಗಳು ರೈತರ ಹೊಲಕ್ಕೆ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು  ಈ ಬಾರಿ ತಾಲ್ಲೂಕಿನಲ್ಲಿ ರೋಗ ಬಾಧೆಯಿಂದಾಗಿ ಹೆಸರು ಬೆಳೆ ಹಾನಿಗೀಡಾಗಿದ್ದು ಈ ಕುರಿತು ಈಗಾ­ಗಲೇ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಪ್ರಸ್ತುತ ವರ್ಷ 14,525 ಹೆಕ್ಟೇರ್‌ನಲ್ಲಿ ರೈತರು ಹೆಸರು ಬಿತ್ತಿದ್ದು ರೋಗಗಳ ಕಾಟದಿಂದಾಗಿ ಇಳು­ವರಿಯಲ್ಲಿ ಬಹಳಷ್ಟು ಕುಸಿತ­ವಾಗಿದೆ.

ಅದರಂತೆ ಪೋಷಕಾಂಶಗಳ ಕೊರತೆಯಿಂದಾಗಿ ಹತ್ತಿ ಗಿಡದಲ್ಲಿನ ಮೋಪುಗಳು ಉದುರಿ ಬೀಳುತ್ತಿವೆ. ಇದರ ಹತೋಟಿಗಾಗಿ ಕ್ರಮಕೈಗೊಳ್ಳು­ವುದರ ಕುರಿತು ರೈತರಿಗೆ ತಿಳಿಸಲಾಗಿದೆ ಎಂದ ಅವರು ಬಿಟಿ ಹತ್ತಿಗೆ 13 ಪೋಷಕಾಂಶಗಳ ಅಗತ್ಯ ಇದೆ. ಇದರಲ್ಲಿ ಯಾವುದಾದರೊಂದು ಪೋಷಕಾಂಶ‌ ಕಡಿಮೆಯಾದರೂ ಅದಕ್ಕೆ ರೋಗ ಬರುತ್ತದೆ. ಈ ಬಗ್ಗೆ ರೈತರು ಎಚ್ಚರಿಕೆ ವಹಿಸಬೇಕು.

ಹಿಂದೆ ಕೃಷಿ ಇಲಾಖೆ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡುತ್ತಿ­ದ್ದರು. ಆದರೆ ಈಗ ಯಾವೊಬ್ಬ ಅಧಿಕಾರಿಯೂ ರೈತರ ಹೊಲದತ್ತ ಸುಳಿಯುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಸಿಬ್ಬಂದಿಗಳ ಕೊರತೆಯಿಂದಾಗಿ ಅಧಿಕಾರಿಗಳು ರೈತರ ಹೊಲಗಳಿಗೆ ಬರಲು ಆಗುತ್ತಿಲ್ಲ ಎಂದು ತಮ್ಮ ಅಸ­ಹಾಯಕತೆ ತೋಡಿಕೊಂಡರು.

ಶಿಗ್ಲಿಯ ಭೂಮ್ಯಾಕಾಶ ನೈಸರ್ಗಿಕ ಕೃಷಿಕರ ಸಂಘದ ಅಧ್ಯಕ್ಷ ವಕೀಲ ಎಸ್‌.ಪಿ. ಬಳಿಗಾರ, ಕೃಷಿ ಸಹಾಯಕ ಸೋಮಣ್ಣ ಲಮಾಣಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT