ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇದೆ’

ನಕ್ಸಲ್‌ ಚಟುವಟಿಕೆ– ನಕ್ಸಲ್‌ ನಿಗ್ರಹ ದಳದಿಂದ ಸುಳ್ಳು ಆರೋಪ
Last Updated 21 ಮೇ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ನಕ್ಸಲ್‌ ಚಟುವ ಟಿಕೆಗಳಲ್ಲಿ ಪಾಲ್ಗೊಂಡಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟುಕೊಂ ಡಿದ್ದೇನೆ. ಹೀಗಾಗಿಯೇ ಕೆಎಎಸ್‌ ಪರೀಕ್ಷೆಯನ್ನು ತೆಗೆದುಕೊಂಡಿದ್ದೇನೆ ಮತ್ತು ಗ್ರಾಮ ಪಂಚಾಯತ್‌ ಚುನಾ ವಣೆಗೆ ಸ್ಪರ್ಧಿಸುತ್ತಿದ್ದೇನೆ’ ಎಂದು ವಿಠ್ಠಲ ಮಲೆಕುಡಿಯ ಹೇಳಿದರು.

ಪತ್ರಕರ್ತರ ಅಧ್ಯಯನ ಕೇಂದ್ರ ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಅವರು ಮಾತನಾಡಿದರು.
‘ಸರ್ಕಾರ ಹಾಗೂ ನಕ್ಸಲ್‌ ನಿಗ್ರಹ ದಳ (ಎಎನ್‌ಎಫ್‌) ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಿದ್ದು, ನಾನು ಯಾವುದೇ ನಕ್ಸಲ್‌ ಚುಟುವಟಿಕೆಯಲ್ಲಿ ಭಾಗವಹಿಸಿಲ್ಲ. ನಮ್ಮ ಸಮಸ್ಯೆಗಳ ಕುರಿತು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಹೋರಾಟ ಮಾಡಿದ್ದೇನೆ’ ಎಂದರು.
‘ಕುದುರೆಮುಖ ಪ್ರದೇಶದಲ್ಲಿ ಕಳೆದ 4 ವರ್ಷಗಳಿಂದ ನಕ್ಸಲ್‌ ಚಟುವಟಿಕೆ ಸಂಪೂರ್ಣವಾಗಿ ನಿಂತಿದೆ. ಅಲ್ಲಿನ ಆದಿವಾಸಿಗಳನ್ನು ಎತ್ತಂಗಡಿ ಮಾಡಲು ಎಎನ್‌ಎಫ್‌ ಅಮಾಯಕರಿಗೆ ನಕ್ಸಲ್‌ ಹಣೆಪಟ್ಟಿ ಕಟ್ಟುತ್ತಿದೆ’ ಎಂದು ದೂರಿ ದರು.

‘ನಮ್ಮ ಮನೆಯಲ್ಲಿ ದೊರೆತ ಸಕ್ಕರೆ, ಬೆಲ್ಲ, ಅಕ್ಕಿ, ಟೀಪುಡಿ, ಸ್ವಲ್ಪ ನಗದು ಹಾಗೂ ಭಗತ್‌ಸಿಂಗ್ ಕುರಿತ ಪುಸ್ತಕವನ್ನೇ ಆಧಾರವಾಗಿಸಿ ಪ್ರಕರಣ ದಾಖಲಿ ಸಲಾಗಿದೆ. ರಾಜದ್ರೋಹದಂತಹ ಪ್ರಕರಣಕ್ಕೆ ಇಂತಹ ಸಾಕ್ಷಗಳು ಆಧಾರವಾ ಗುತ್ತವೆಯೇ’ ಎಂದು ಅವರು ಪ್ರಶ್ನಿಸಿ ದರು.

‘ಸರ್ಕಾರ ನನ್ನ ಮೇಲೆ ರಾಜ್ಯ ದ್ರೋಹದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದು, ವಿನಾ ಕಾರಣ ನನ್ನನ್ನು ನಕ್ಸಲ್‌ ಎಂದು ಬಿಂಬಿಸಲಾ ಗುತ್ತಿದೆ. ಸರ್ಕಾರ ನನ್ನ ಮೇಲಿನ ಕೇಸುಗಳನ್ನು ಹಿಂಪಡೆದು ಮುಕ್ತವಾಗಿ ಬದುಕಲು ಅವಕಾಶ ನೀಡಬೇಕು’ಎಂದು ಅವರು ಒತ್ತಾಯಿಸಿದರು.

ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌(ಡಿವೈಎಫ್‌ಐ) ರಾಜ್ಯ ಘಟಕದ ಅಧ್ಯಕ್ಷ ಮುನೀರ್‌ ಕಾಟಿಪಾಳ್ಯ ‘ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಅಲೋಕ್‌ ಕುಮಾರ್‌ ಅವರು ಬಡ್ತಿ ಪಡೆಯಲು ಮತ್ತು ಆಯಕಟ್ಟಿನ ಸ್ಥಳಗಳಿಗೆ ವರ್ಗ ಮಾಡಿಸಿಕೊಳ್ಳಲು ನಕ್ಸಲ್‌ ಹೆಸರಿನಲ್ಲಿ ಅಮಾಯಕ ಯುವಕರ ಮೇಲೆ ಪ್ರಕರಣಗಳನ್ನು ದಾಖಲಿಸಿದ್ದಾರೆ’ ಎಂದು ದೂರಿದರು.

‘ಅಲೋಕ್‌ಕುಮಾರ್‌,  ಕುದುರೆ ಮುಖ ಅರಣ್ಯ ಪ್ರದೇಶದಲ್ಲಿ ಅಮಾಯಕ ಆದಿವಾಸಿ ಯುವಕರನ್ನು  ನಕ್ಸಲರೆಂದು ಬಿಂಬಿಸಿದರು. ಅಲ್ಲದೇ, ಹುಬ್ಬಳ್ಳಿಯ 18 ಮಂದಿ ಯುವಕರು ಅಫ್ಘಾನಿಸ್ತಾನದ ಭಯೋತ್ಪಾದಕರೊಂದಿಗೆ ನಂಟು ಹೊಂದಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಿದ್ದರು.  ಆದರೆ, ಈ ಆರೋಪ ಸುಳ್ಳು ಎಂದು ನ್ಯಾಯಾಲಯ ತೀರ್ಪು ನೀಡಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT