ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಾಜೆಕ್ಟ್’ ಹೊರೆ ಇಳಿಸಿ

ಅಕ್ಷರ ಗಾತ್ರ

ನೂತನ ಪರೀಕ್ಷಾ ನೀತಿಯ ಪ್ರಕಾರ ಎಸ್‌.ಎಸ್‌.ಎಲ್‌.ಸಿ. ಮಕ್ಕಳಿಗೆ ಆಂತರಿಕ ಅಂಕಗಳಿಗಾಗಿ (20) ನಿಗದಿ ಮಾಡಿರುವ ಯೋಜನಾ ಕಾರ್ಯಗಳು ಸೃಜನ­ಶೀ­ಲತೆ, ಅಧ್ಯ­ಯನ­ಶೀಲ ಮನೋಭಾವ ಮೂಡಿಸುತ್ತವೆ ಎಂಬುದೇನೋ ಸರಿ. ಆದರೆ ಈಗಿ­ರುವ ಪ್ರತಿ ವಿಷಯದ 8 ಪ್ರಾಜೆಕ್ಟ್‌ಗಳನ್ನು (ಒಟ್ಟು 48 ಹಾಗೂ ಇದರೊಂದಿಗೆ ದೈಹಿಕ ಶಿಕ್ಷಣ) ಸಿದ್ಧಪಡಿಸಲು ಮಕ್ಕಳು ಹರಸಾಹಸ ಪಡುತ್ತಿದ್ದು, ತಮ್ಮ ಹೆಚ್ಚಿನ ಅಭ್ಯಾಸ ಸಮಯವನ್ನು ಇದಕ್ಕಾಗಿಯೇ ವಿನಿಯೋಗಿಸುತ್ತಿದ್ದಾರೆ. ಅಲ್ಲದೆ ಉಳಿದ 80 ಅಂಕಗಳ ಕಡೆಗೆ ಗಮನ ನೀಡಲು ಕಷ್ಟಪಡುತ್ತಿದ್ದಾರೆ. ಜೊತೆಗೆ ಗ್ರಾಮೀಣ ಭಾಗ­ದಲ್ಲಿ ಇಂಟರ್ನೆಟ್, ಪ್ರಿಂಟ್ ಔಟ್ ನಂತಹ ಸೌಕರ್ಯಗಳು ಇಲ್ಲದಿರುವು­ದರಿಂದ ಮಾಹಿತಿ ಕಲೆ ಹಾಕಲು ಹೆಣ­ಗಾಡಬೇಕಾಗಿದೆ. ಇಲಾಖೆ ನೀಡಿರುವ ವಿಷಯಗಳನ್ನೇ ಆರಿಸಿಕೊಳ್ಳ­ಬೇಕೆಂಬ ನಿರ್ದೇಶನವೂ ಇದೆಯಂತೆ. ಇಂಥ ಪ್ರಾಜೆಕ್ಟ್‌­ಗಳನ್ನು ಕಡಿಮೆಗೊಳಿಸಿ, ತಮಗೆ ಲಭ್ಯ­ವಿರುವ ವಿಷಯಗಳ ಮೇಲೇ ಯೋಜನೆ ಸಿದ್ಧ­ಪಡಿಸುವ ಅವಕಾಶ ನೀಡಿ ಅವರ  ಹೊರೆ ಕಡಿಮೆ­ಗೊಳಿಸು­ವುದು ಉಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT