ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರೊಟ್ಯೂಸ್‌’ ಸಾಂಸ್ಕೃತಿಕ ಕಲರವ

Last Updated 20 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನಗರದ ಎಚ್‌.ಕೆ.ಬಿ.ಕೆ ಪದವಿ ಕಾಲೇಜು ಇತ್ತೀಚೆಗೆ ಚೌಡಯ್ಯ ಸ್ಮಾರಕ ಭವನದಲ್ಲಿ 15ನೇ ವಾರ್ಷಿಕೋತ್ಸವವನ್ನು (‘ಪ್ರೊಟ್ಯೂಸ್‌’ 2014) ಸಂಭ್ರಮದಿಂದ ಆಚರಿಸಿಕೊಂಡಿತು.

ವಿದ್ಯಾರ್ಥಿಗಳು ನಡೆಸಿಕೊಟ್ಟ ನೃತ್ಯ, ಗಾಯನ, ಮೂಕಾಭಿನಯ ಕಾರ್ಯಕ್ರಮ ನೆರೆದವರನ್ನು ರಂಜಿಸಿತು. ಕಾಲೇಜು ವಾರ್ಷಿಕೋತ್ಸವ ವಾದ್ದರಿಂದ ಅಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತ್ತು. ನಾಟಕದಲ್ಲಿ ತಮ್ಮ ಪ್ರತಿಭೆ ತೋರಿಸಿ ಸೈ ಎನಿಸಿಕೊಂಡರೆ ಇನ್ನು ಕೆಲವರು ನೃತ್ಯ, ಸಂಗೀತದ ಮೂಲಕ ಎಲ್ಲರ ಗಮನ ಸೆಳೆದರು. ವಿವಿಧ ಬಣ್ಣದ ಉಡುಪುಗಳನ್ನು ಧರಿಸಿ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದು ಚಪ್ಪಾಳೆ ಗಿಟ್ಟಿಸಿಕೊಂಡರು.

ಕಾಫಿ ಮಂಡಳಿ ಅಧ್ಯಕ್ಷ ಜಾವೆದ್ ಅಖ್ತರ್, ಎಚ್.ಕೆ.ಬಿ.ಕೆ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಸಿ.ಎಂ. ಫೈಜ್‌ ಮಹಮ್ಮದ್‌, ಕಾರ್ಯದರ್ಶಿ ಮನ್ಜೂರ್‌ ಅಹಮ್ಮದ್‌ ಖಾನ್‌ ಮತ್ತಿತರರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.   z

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT