ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಂಜಾರರಿಗೆ ಭಾಷಾ ಅಕಾಡೆಮಿ ಅಗತ್ಯ’

Last Updated 1 ಮೇ 2016, 19:44 IST
ಅಕ್ಷರ ಗಾತ್ರ

ಬಂಜಾರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ, ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ‘ಬಂಜಾರ ಸಾಂಸ್ಕೃತಿಕ ನಾಡ ಹಬ್ಬ-2016’ ಅನ್ನು ಕೋಣನಕುಂಟೆಯ ಸಿಲಿಕಾನ್ ಸಿಟಿ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಂಡಿತ್ತು.

ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆಗೆ ಹಿರಿಯ ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಚಾಲನೆ ನೀಡಿ ಅವರು ಮಾತನಾಡಿದರು. ‘ಬಂಜಾರ ಸಮುದಾಯದಂತಹ ತಳಸಮುದಾಯಗಳಿಗೆ ದೊಡ್ಡ ಪರಂಪರೆ ಇದೆ ಆದರೆ ಚರಿತ್ರೆ ಇಲ್ಲ, ಚರಿತ್ರೆ ಶ್ರೀಮಂತರ ಸ್ವತ್ತಾಗಿದೆ. ದೊಡ್ಡ ಪರಂಪರೆಗಳು ನಿರಂತರವಾದುದು.

ಸಾಮಾಜಿಕ ಹಕ್ಕು ಬಾಧ್ಯತೆಗಳಿಂದ ವಂಚಿತವಾದ ಬಂಜಾರ ಸಮುದಾಯ ಇನ್ನೂ ಸಂಘಟಿತವಾಗಿಲ್ಲ. ಹೀಗಾಗಿ ಇಷ್ಟೇ ಪ್ರಮಾಣದಲ್ಲಿರುವ ಬ್ಯಾರಿ, ತುಳು, ಕೊಂಕಣಿ ಭಾಷೆಗಳಿಗೆ ಅಕಾಡೆಮಿಗಳಿವೆ. ಆದರೆ ಭಾಷೆ ಹಾಗೂ ಸಾಂಸ್ಕೃತಿಕವಾಗಿ ಸಂಪನ್ನವಾದ ಬಂಜಾರ ಸಮುದಾಯಕ್ಕೆ ಅಕಾಡೆಮಿ ಇಲ್ಲ. ಇವರಿಗೆ ತುರ್ತಾಗಿ ಅಕಾಡೆಮಿ ಅಗತ್ಯ ಇದೆ.

ಬಂಜಾರ ಕಲೆ, ಭಾಷೆ ಸಂಸ್ಕೃತಿ ಅಧ್ಯಯನವಾಗಬೇಕು. ಲಿಪಿ ಅಗತ್ಯ ಇದೆ. ಬಂಜಾರರು ದೇವನಾಗರಿ ಲಿಪಿ ಅಥವಾ ಪ್ರಾದೇಶಿಕ ಭಾಷೆ ಕನ್ನಡವನ್ನೇ ಲಿಪಿಯಾಗಿ ಬಳಸಬಹುದಾಗಿದೆ, ಬಂಜಾರ ಸಮುದಾಯ ವೇಷ ಭೂಷಣ, ಕಸೂತಿ ಕೌಶಲದಲ್ಲಿ  ಪ್ರಾವೀಣ್ಯತೆಗಳಿಸಿಕೊಂಡಿದ್ದಾರೆ. ಶಾಸ್ತ್ರ, ಆಚರಣೆಗಳು ಶ್ರೀಮಂತವಾಗಿವೆ. ಹಾಗಾಗಿ ಸಮುದಾಯದ ವಿದ್ವಾಂಸರು ಸಮುದಾಯದ ಅಭಿವೃದ್ಧಿ ನಿಟ್ಟಿನಲ್ಲಿ ಸಂಶೋಧನೆಗೆ ತೊಡಗಬೇಕು’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT