ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಂಡಾಯಗಾರರ ಮರುಹುಟ್ಟು ಅಗತ್ಯ’

ದಲಿತ–ಬಂಡಾಯ ಸಾಹಿತ್ಯ ಚಳವಳಿ ಸಮ್ಮೇಳನದಲ್ಲಿ ಆಶಯ
Last Updated 28 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬಂಡಾಯಗಾರರು ಮರು­ಹುಟ್ಟು ಪಡೆಯಬೇಕು ಹಾಗೂ ದಲಿತರು ದಲಿತತ್ವದ ಕೋಟೆ ಒಡೆದು ಹೊರಬರಬೇಕು. ಈ ಎರಡೂ ಏಕಕಾಲ­ದಲ್ಲಿ ನಡೆದರೆ  ಮತ್ತೆ ಅಗಾಧ ಬದಲಾ­ವ­ಣೆಯಾಗಲಿದೆ’ ಎಂದು ಮೈಸೂರು ವಿ.ವಿ ಪ್ರಾಧ್ಯಾಪಕ ಡಾ.ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.

ಸುವರ್ಣ ಸಂಭ್ರಮದ ಅಂಗವಾಗಿ ಬೆಂಗಳೂರು ವಿ.ವಿ ಕನ್ನಡ ಅಧ್ಯಯನ ಕೇಂದ್ರವು ಶುಕ್ರವಾರ ಆಯೋಜಿಸಿದ್ದ ‘ಚಾರಿತ್ರಿಕ ದಾಖಲೆ ಬರೆದ ದಲಿತ–ಬಂಡಾಯ ಸಾಹಿತ್ಯ ಚಳವಳಿ’ ಎಂಬ ವಿಷಯ ಕುರಿತ ರಾಷ್ಟ್ರೀಯ ಸಮ್ಮೇಳನ­ದಲ್ಲಿ ಮಾತನಾಡಿದರು.

‘ಧರ್ಮಮುಖಿ ಚಿಂತನೆಯ ಅಟಾ­ಟೋಪ ಹಾಗೂ ಕಾರ್ಪೊರೇಟ್‌ ಕರಿ­ನೆರಳಿ­ನಲ್ಲಿ ಸಮಾಜ ನಲುಗುತ್ತಿದೆ. ಎಡೆ ಸ್ನಾನ, ಮಡೆ ಸ್ನಾನ ಎಂದು ವಿವಾದ ಎಬ್ಬಿಸುತ್ತಿದ್ದಾರೆ. ಈ  ಸ್ವರೂಪಕ್ಕೆ ಬೆಂಬಲ ವ್ಯಕ್ತಪಡಿಸುವವರೇ ಹೋಗಿ ಉರುಳಾಡಿ ತೋರಿಸಲಿ ನೋಡೋಣ’ ಎಂದು ಸವಾಲು ಹಾಕಿದರು.

ನಿವೃತ್ತ ಪ್ರಾಧ್ಯಾಪಕ ಡಾ.ಸಿ.ವೀರಣ್ಣ, ‘ದಲಿತ–ಬಂಡಾಯ ಸಾಹಿತ್ಯ ಚಳವಳಿ­ಯಲ್ಲಿ ತೊಡಗಿಸಿಕೊಂ­ಡ­ವರು ಪ್ರಜಾಸ­ತ್ತಾ­ತ್ಮಕ

ದೇಸಿ ಭಾಷೆಗಳಿಗೆ ಕಂಟಕ
ಕಾರ್ಪೊರೇಟ್‌ ವಲಯದ ಪ್ರಭಾ­ವವು ಭಾರತೀಯ ಭಾಷೆಗಳ ಕತ್ತನ್ನು ಹಿಸುಕುತ್ತಿದೆ. ದೇಸಿ ಭಾಷೆ ಉಳಿಸಿ­ಕೊಳ್ಳ­ದಿದ್ದರೆ ನಮ್ಮ ದೇಶದಲ್ಲಿಯೇ ನಾವು ಅನಾಥರಾಗುತ್ತೇವೆ. ಇದು ಕೇವಲ ಕನ್ನಡ ಭಾಷೆಯೊಂದರ ಪ್ರಶ್ನೆ ಅಲ್ಲ. ಭಾರತದ ಎಲ್ಲಾ ದೇಸಿ ಭಾಷೆ­ಗಳಿಗೆ ಕಂಟಕ ಎದುರಾಗಿದೆ
​–ಡಾ.ಅರವಿಂದ ಮಾಲಗತ್ತಿ

ವ್ಯವಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್‌ನೊಂದಿಗೆ ಗುರುತಿಸಿ­ಕೊಳ್ಳಲು ಹಿಂಜರಿದರು. ಮುಂದೆ ಕೆಲವರು ಸರ್ಕಾ­ರ­ದೊಂದಿಗೆ ಕೈಜೋಡಿಸಿದರು. ಇದರಿಂದಾಗಿ ಚಳವಳಿ ಬಡವಾಯಿತು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕವಿ ಡಾ.ಸಿದ್ದಲಿಂಗಯ್ಯ ಅವರು, ‘ದಲಿತ ಎನ್ನುವುದು ಒಂದು ಜಾತಿ­ಯಲ್ಲ. ಎಲ್ಲಾ ಜಾತಿಯಲ್ಲಿರುವ ನೊಂದ­ವರು, ಹಸಿದವರು, ಬಡವ­ರೆಲ್ಲಾ ದಲಿತರೇ. ಶೋಷಿತರ ಕಣ್ಣೀರಿಗೆ ಸ್ಪಂದಿಸುವ ಹಾಗೂ ಅವರ ಹಿತವನ್ನು ಕಾಪಾಡುವ ರೀತಿಯ ಹಾಡು, ಕವನ ಹೊರಹೊಮ್ಮಬೇಕಾಗಿದೆ’ ಎಂದರು.

ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಮಾತನಾಡಿ, ‘ದೇಶದಲ್ಲಿ ಬಂಡವಾಳ­ಶಾಹಿ ವಲಯ ಹಾಗೂ ಪುರೋಹಿತ­ಶಾಹಿ ವಲಯ ಎಂಬ ಗುಂಪು­ ಅಪಾ­ಯ­ಕಾರಿಯಾಗಿ ಬೆಳೆದಿದ್ದು ನಮ್ಮ ಮುಂದೆ ಸವಾಲಾಗಿ ನಿಂತಿವೆ’ ಎಂದು ಹೇಳಿದರು.

‘ಪ್ರಧಾನಿ ಮೋದಿ ಅವರು ಗಂಗಾ ನದಿ ಸ್ವಚ್ಛಗೊಳಿಸಲು ಮುಂದಾ­ಗಿ­ದ್ದಾರೆ. ಸ್ವಚ್ಛಗೊಳಿಸಬೇಕು ಎಂದರೆ ಗಬ್ಬೆದ್ದು ಹೋಗಿದೆ ಎಂದರ್ಥ. ಗಂಗಾ ನದಿಯು ಭಾರತದ ಸಂಸ್ಕೃತಿಯ ಪ್ರತೀಕ. ಅಂದರೆ ದೇಶದ ಸಂಸ್ಕೃತಿಯೇ ಈಗ ಗಬ್ಬೆದ್ದು ಹೋಗಿದೆ. ಕರಾಳ ಶಕ್ತಿಗಳು ವಿವಿಧ ವೇಷ ತೊಟ್ಟು ಈ ಕೃತ್ಯದಲ್ಲಿ ತೊಡಗಿವೆ’ ಎಂದು ಕಳವಳ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT