ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಂಬ್‌ ಬೇಡ, ಪುಸ್ತಕ ಎಸೆಯಿರಿ’

Last Updated 13 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ರೋಮ್‌ (ಎಎಫ್‌ಪಿ): ‘ಐ.ಎಸ್ ಉಗ್ರರ ಮೇಲೆ ಬಾಂಬ್ ಎಸೆಯುವುದನ್ನು ಬಿಟ್ಟು ಪುಸ್ತಕಗಳನ್ನು ಎಸೆಯಿರಿ’ ಎಂದು  ಇರಾನ್‌ನ ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತೆ ಶಿರಿನ್ ಎಬಾದಿ ಸಲಹೆ ಮಾಡಿದ್ದಾರೆ.

ಐ.ಎಸ್‌ ಕೂಡ ಅಲ್ ಕೈದಾದ ಮತ್ತೊಂದು ರೂಪ. ಬಾಂಬ್ ಅಥವಾ ಬಂದೂಕಿನ ನಳಿಕೆ ಮೂಲಕ ಇವರನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಎಂದು ಶಿರಿನ್‌ ಅಭಿಪ್ರಾಯಪಟ್ಟಿದ್ದಾರೆ.

ಬಾಂಬ್‌ ಹಾಕಿದರೆ ಭಯೋ­ತ್ಪಾದ­ನೆಯ ರೆಂಬೆ ಕೊಂಬೆಗಳು ನಾಶವಾಗಬಹು­ದೇ ಹೊರತು, ಬೇರು ನಾಶವಾಗದು. ಭಯೋ­ತ್ಪಾ­ದ­ನೆಯನ್ನು ಬುಡಸಮೇತ ಕಿತ್ತು ಹಾಕ­ಬೇಕು. ಅಸಮಾನತೆ ಹಾಗೂ ಅನಕ್ಷರತೆ ಭಯೋತ್ಪಾದನೆಯ ಆ ಬುಡ­ಗಳು ಎಂದು ಅವರು ವಿಶ್ಲೇಷಿಸಿದ್ದಾರೆ.

‘ಉಗ್ರರ ಹುಟ್ಟಡಗಿಸಲು ಶಿಕ್ಷಣದ ಬೀಜ ಬಿತ್ತಬೇಕು. ಶಾಲೆಗಳನ್ನು ನಿರ್ಮಿಸಬೇಕು.  ಗುಣಮಟ್ಟದ ಶಿಕ್ಷಣ ನೀಡಬೇಕು ಹಾಗೂ ಉತ್ತಮ ಪುಸ್ತಕಗಳನ್ನು ಒದಗಿಸಬೇಕು. ಹಾಗಾದಾಗ ಮಾತ್ರ ಭಯೋತ್ಪಾದನೆಯನ್ನು ಶಾಶ್ವತ­ವಾಗಿ ನಿರ್ನಾಮ ಮಾಡಬಹುದು’ ಎಂದು ಶಿರಿನ್‌ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT