ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾರು ಆರೋಪ ಆಧಾರ ರಹಿತ’

Last Updated 21 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನೈನಿತಾಲ್‌(ಪಿಟಿಐ): ‘ಪ್ರಧಾನಿ ಮನ­ಮೋಹನ್‌ ಸಿಂಗ್‌ ಅವರು ತಮ್ಮ ಸಂಪುಟದ ಸಚಿವರ ಮೇಲೆ ಹೆಚ್ಚಿನ ನಿಯಂ­ತ್ರಣ ಹೊಂದಿ­ರಲಿಲ್ಲ ಎಂಬ ಸಂಜಯ್‌ ಬಾರು ಅವರ ಆರೋಪ ಆಧಾರ ರಹಿತ ಮತ್ತು ಪ್ರಧಾನಿ­ಯವರ ಘನ­ತೆಗೆ ಕುಂದು ತರುವ ಪ್ರಯತ್ನವಾ­ಗಿದೆ’ ಎಂದು ಪ್ರಧಾನ ಮಂತ್ರಿಗಳ ವೈಜ್ಞಾ­ನಿಕ ಸಲಹೆ­ಗಾರ ಸಿಎನ್‌ಆರ್‌ ರಾವ್‌ ಹೇಳಿ­ದ್ದಾರೆ.

ಬಾರು ಅವರ ಪುಸ್ತಕ ಪ್ರಕಟವಾದ  ಸಂದರ್ಭ­ವನ್ನು ಪ್ರಶ್ನಿಸಿರುವ ಪ್ರೊ. ರಾವ್‌, ‘ಚುನಾವಣೆ ಸಮಯದ­ಲ್ಲಿಯೇ ಈ ಪುಸ್ತಕ ಹೊರಬಂದಿರು­ವುದರ ಹಿಂದೆ ರಾಜ­ಕೀಯ ದುರುದ್ದೇಶ ಇರುವುದು ಸ್ಪಷ್ಟ­ವಾ­ಗಿದೆ’ ಎಂದಿದ್ದಾರೆ. ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಘಟನೆ ‘ಪಹಾರ್‌’ ಭಾನುವಾರ ಇಲ್ಲಿ ಏರ್ಪ­ಡಿಸಿದ್ದ ಕಾರ್ಯಕ್ರಮ­ದಲ್ಲಿ ಸನ್ಮಾನ ಸ್ವೀಕ­ರಿಸಿ ಮಾತ­ನಾಡಿದ ಅವರು, ‘ಮನಮೋ­ಹನ್‌ ಸಿಂಗ್‌ ಒಬ್ಬ ದುರ್ಬಲ ಪ್ರಧಾನಿ.

ತಮ್ಮ ಸಚಿವರ ಮೇಲೆ ನಿಯಂತ್ರಣ ಹೊಂದಿ­ರ­ಲಿಲ್ಲ ಎಂಬ ಆರೋಪಗಳೆಲ್ಲ ಸಂಪೂರ್ಣ ಆಧಾರ­ರಹಿತ­ವಾದದ್ದು. ಈ ಪುಸ್ತಕವು ರಾಜ­ಕೀಯ ಲಾಭಕ್ಕಾಗಿ ಸಿಂಗ್‌ ಅವರ ಘನ­ತೆಗೆ ಹಾನಿಯುಂಟು­ಮಾಡುವ ಪ್ರಯತ್ನ­ವಾ­­ಗಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT