ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆನ್ನಿಗೆ ಚೂರಿ’ ಹಾಕುವ ಎಎಪಿ: ಮೋದಿ

Last Updated 31 ಜನವರಿ 2015, 19:37 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಆಮ್ ಆದ್ಮಿ ಪಾರ್ಟಿ (ಎಎಪಿ) ಬೆನ್ನಿಗೆ ಚೂರಿ ಹಾಕುವ ಪಕ್ಷ. ಹೀಗಾಗಿ, ಮತದಾರರು ಮತ್ತೊಮ್ಮೆ ಅವರಿಗೆ ಮತ ಹಾಕುವ ತಪ್ಪು ಮಾಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಎಎಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪೂರ್ವ ದೆಹಲಿಯ ವಿಶ್ವಾಸ್ ನಗರದಲ್ಲಿ ವಿಧಾನಸಭೆ ಚುನಾವಣೆಯ ಪ್ರಚಾರ ಸಭೆಯಲ್ಲಿ ಅರ್ಧ ಗಂಟೆ ಭಾಷಣ ಮಾಡಿದ ಅವರು, 2013ರ ಚುನಾವಣೆಯಲ್ಲಿ ಪಕ್ಷ ಅಧಿಕಾರ ಹಿಡಿಯಲು ಕೆಲವೇ ಸ್ಥಾನಗಳು ಮಾತ್ರ ಕಡಿಮೆ ಇದ್ದವು. ಪ್ರಸಕ್ತ ಚುನಾವಣೆಯಲ್ಲಿ ಜನರು ಬಿಜೆಪಿಗೆ ಮತ ನೀಡುವ ಮೂಲಕ ಅಧಿಕಾರಕ್ಕೆ ತಂದರೆ ಹಿಂದೆಂದೂ ಕಂಡರಿಯದ ಅತ್ಯುತ್ತಮ ಪ್ರಾಮಾಣಿಕ ಆಡಳಿತ ನೀಡುತ್ತೇವೆ ಎಂದು ಮೋದಿ ಭರವಸೆ ನೀಡಿದರು.

ಎಎಪಿ ಹಿಂದಿನ ಚುನಾವಣೆಯಲ್ಲಿ ಮತ ನೀಡಿವರ ಬೆನ್ನಿಗೆ ಚೂರಿ ಹಾಕಿದೆ. ಈ ಮೂಲಕ ಮತದಾರರ ಕನಸನ್ನು ನುಚ್ಚುನೂರು ಮಾಡಿದೆ. ಇದಕ್ಕೆ ಪ್ರತಿಯಾಗಿ ನೀವು ಲೋಕ ಸಭೆ ಚುನಾವಣೆಯಲ್ಲಿ ಎಎಪಿಗೆ ತಕ್ಕ ಪಾಠವನ್ನೂ ಕಲಿಸಿದ್ದೀರಿ ಎಂದು ಮೋದಿ ಮತದಾರರ ಮನವೊಲಿಸುವ ಯತ್ನ ಮಾಡಿದರು.

ಎಎಪಿಯ ಹೆಸರು ಹೇಳದ ಮೋದಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷವೊಂದು ಠೇವಣಿ ಕಳೆದುಕೊಳ್ಳುವುದರಲ್ಲಿ ವಿಶ್ವ ದಾಖಲೆ ನಿರ್ಮಿಸಿದೆ ಎಂದು ಪರೋಕ್ಷವಾಗಿ ಟೀಕೆ ಮಾಡಿದರು.

ಮತದಾರರು ಮತ್ತೊಮ್ಮೆ ತಪ್ಪು ಮಾಡಬಾರದು ಎಂದು ಮೋದಿ ಮಗದೊಮ್ಮೆ ಮನವಿ ಮಾಡಿದರು.
ಬಿಜೆಪಿಗೆ ಮತ ನೀಡುವ ಮೂಲಕ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಅವರನ್ನು ಅಧಿಕಾರಕ್ಕೆ ತನ್ನಿ. ಆಡಳಿತಾತ್ಮಕ ಅನುಭವ ಹೊಂದಿರುವ ಕಿರಣ್ ಬೇಡಿ ಅವರು ಉತ್ತಮ ಆಡಳಿತ ನೀಡಲಿದ್ದಾರೆ. ಬೇಡಿ ಅವರಿಗೆ ದೆಹಲಿಯ ವ್ಯಾಪ್ತಿ, ಬೌಗೋಳಿಕ ಮತ್ತು ಐತಿಹಾಸಿಕ ತಿಳಿವಳಿಕೆ ಇದೆ. ಹೀಗಾಗಿ, ಅವರು ಅಭಿವೃದ್ಧಿ ಪರ ಆಡಳಿತ ನೀಡಲಿದ್ದಾರೆ ಎಂದು ಬೇಡಿ ಅವರ ಪರ ಮೋದಿ ಮತ ಯಾಚಿಸಿದರು.

‘ನಮ್ಮ ಸರ್ಕಾರ ಬಡವರ ಪರ ಯೋಜನೆ ರೂಪಿಸುತ್ತಿದೆ. 2022ರ 75ನೇ ಸ್ವಾತಂತ್ರ್ಯೋತ್ಸವದ ವೇಳೆಗೆ ದೆಹಲಿಯ ಎಲ್ಲ ಕೊಳೆಗೇರಿಗಳಲ್ಲೂ ಕಾಂಕ್ರಿಟ್ ಮನೆಗಳು ನಿರ್ಮಾಣಗೊಳ್ಳಲಿವೆ ಎಂದು ಮೋದಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT