ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೋಧನಾ ಅವಧಿ ಹೆಚ್ಚಳ ಕಡ್ಡಾಯವಲ್ಲ’

Last Updated 24 ಮೇ 2016, 19:30 IST
ಅಕ್ಷರ ಗಾತ್ರ

ನವದೆಹಲಿ:  ‘ವಿಶ್ವವಿದ್ಯಾಲಯಗಳ ಸಹಾಯಕ ಪ್ರಾಧ್ಯಾಪಕರು ಹಾಗೂ ಸಹ ಪ್ರಾಧ್ಯಾಪಕರ ವಾರದ ಬೋಧನಾ ಅವಧಿಯನ್ನು ಎರಡು ಗಂಟೆ ಹೆಚ್ಚಿಸಬೇಕು ಎಂಬುದು ಸಲಹೆಯೇ ವಿನಾ ಅದು ಕಡ್ಡಾಯವಲ್ಲ’ ಎಂದು ಯುಜಿಸಿ ಸ್ಪಷ್ಟಪಡಿಸಿದೆ.

‘ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಯುಜಿಸಿ ಈ ಸಲಹೆ ನೀಡಿದೆ. ಉಪನ್ಯಾಸಕರ ಬಡ್ತಿಗೆ ಇದನ್ನು ಪರಿಗಣಿಸುವುದಿಲ್ಲ’ ಎಂದು ಉನ್ನತ ಶಿಕ್ಷಣ ಕಾರ್ಯದರ್ಶಿ ವಿನಯಶೀಲ ಒಬೆರಾಯ್‌ ತಿಳಿಸಿದ್ದಾರೆ.

ಯುಜಿಸಿ ಈಚೆಗೆ ಸಹಾಯಕ ಪ್ರಾಧ್ಯಾಪಕರ ಬೋಧನಾ ಅವಧಿಯನ್ನು ವಾರದಲ್ಲಿ ಈಗಿನ 16 ಗಂಟೆಯಿಂದ 18 ಗಂಟೆಗೆ ಹಾಗೂ ಸಹ ಪ್ರಾಧ್ಯಾಪಕರ ಬೋಧನಾ ಅವಧಿಯನ್ನು 14ರಿಂದ 16 ಗಂಟೆಗೆ ಹೆಚ್ಚಿಸಬೇಕು ಎಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT