ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಯೋತ್ಪಾದನೆ ಪಾಠ’

ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‌ ಹೇಳಿಕೆ
Last Updated 14 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಲಖನೌ (ಪಿಟಿಐ): ಮದರಸಾಗಳು ‘ಭಯೋತ್ಪಾದನೆಯ ಪಾಠ’ ಮಾಡು­ತ್ತಿವೆ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾ­ರಾಜ್‌ ವಿವಾದಿತ ಹೇಳಿಕೆ ನೀಡಿದ್ದಾರೆ.

‘ಮದರಸಾಗಳು ವಿದ್ಯಾರ್ಥಿಗಳನ್ನು ಭಯೋತ್ಪಾದಕರು ಹಾಗೂ ಜಿಹಾದಿ­ಗಳ­­ನ್ನಾಗಿ ಮಾಡುತ್ತಿವೆ. ಇದು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾ­ದದ್ದು’ ಎಂದು ಉತ್ತರಪ್ರದೇಶದ ಉನ್ನಾವೊ ಕ್ಷೇತ್ರದ ಸಂಸದ ಹೇಳಿದ್ದಾರೆ.

‘ಯಾವುದಾದರೂ ಒಂದು ಮದರ­ಸಾದಲ್ಲಿ ತ್ರಿವರ್ಣ ಧ್ವಜ ಹಾರಾಡು­ವು­ದನ್ನು ತೋರಿಸಿ. ಆಗಸ್ಟ್‌ ೧೫ ಹಾಗೂ ಜನವರಿ ೨೬ರಂದು ಕೂಡ ಇಲ್ಲಿ ರಾಷ್ಟ್ರ­ಧ್ವಜ  ಕಂಡುಬರುವುದಿಲ್ಲ. ನಮ್ಮಲ್ಲಿ ಅನು­ದಾನರಹಿತ ಶಾಲೆಗಳೇ ಹೆಚ್ಚಿವೆ.  ಆದರೆ ಮದರಸಾಗಳಿಗೆ ಅನುದಾನ ಸಿಗು­ತ್ತಿದೆ. ಇಂಥ ಸಂಸ್ಥೆಗಳಿಗೂ, ರಾಷ್ಟ್ರೀಯ­ತೆಗೂ ಸಂಬಂಧವೇ ಇಲ್ಲ’ ಎಂದೂ ಅವರು ಟೀಕಿಸಿದ್ದಾರೆ. ಸಾಕ್ಷಿ ಮಹಾರಾಜ್‌ ‘ದ್ವೇಷ ಭಾಷಣ’ವನ್ನು ಸಮಾಜವಾದಿ ಪಕ್ಷ  ತೀವ್ರವಾಗಿ ಖಂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT