ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತ ಎಂದೂ ಕದನ ವಿರಾಮ ಉಲ್ಲಂಘಿಸಿಲ್ಲ'

Last Updated 24 ಅಕ್ಟೋಬರ್ 2014, 9:26 IST
ಅಕ್ಷರ ಗಾತ್ರ

ಗ್ರೇಟರ್‌ನೊಯಿಡಾ, ಉತ್ತರ ಪ್ರದೇಶ (ಪಿಟಿಐ): ಪಾಕಿಸ್ತಾನ ಜತೆಗಿನ 2003ರ ಕದನ ವಿರಾಮ ಒಪ್ಪಂದವನ್ನು ಭಾರತವು ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಎಂದಿಗೂ ಉಲ್ಲಂಘಿಸಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ತಿಳಿಸಿದ್ದಾರೆ.

ಇಂಡೋ–ಟಿಬೆಟ್‌ ಗಡಿ ಪೊಲೀಸ್‌ (ಐಟಿಬಿಪಿ) ಪಡೆಯ 53ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಅವರು ಸೂರಜಪುರದಲ್ಲಿ ಮಾತನಾಡಿದರು.

‘ಭಾರತವು ಎಂದಿಗೂ ಕದನ ವಿರಾಮ ಉಲ್ಲಂಘಿಸುವುದಿಲ್ಲ. ಇದು ಶಾಂತಿಯಲ್ಲಿ ನಂಬಿಕೆ ಇಡುವ ರಾಷ್ಟ್ರವಾಗಿದೆ’ ಎಂದು ಪಾಕ್‌ ಮಾಡಿರುವ ಕದನ ವಿರಾಮ ಉಲ್ಲಂಘನೆ ಆರೋಪಗಳಿಗೆ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

‘ಕಳೆದೆರಡು ದಿನಗಳಲ್ಲಿ ಪಾಕಿಸ್ತಾನವೇ ಕದನ ವಿರಾಮ ಉಲ್ಲಂಘನೆ ಮಾಡಿದೆ. ದೀಪಾವಳಿಯಂತಹ ಹಬ್ಬದ ದಿನವೂ ಅದು ಬಿಡಲಿಲ್ಲ’ ಎಂದು ಅವರು ಟೀಕಿಸಿದ್ದಾರೆ.

ಪಾಕಿಸ್ತಾನವು ಗುರುವಾರ ಮೂರು ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT